ದರ್ಶನ್ ಅನ್​​ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್; ದಾಸನಿಗೆ ಅಮ್ಮ ಪರೋಕ್ಷ ಟಾಂಗ್..!?

author-image
Bheemappa
Updated On
‘ನಾನು ಬದುಕಿರೋ ತನಕ ದರ್ಶನ್​​ ನನ್ನ ಹಿರಿಯ ಮಗನೇ’- ನೋವು ತೋಡಿಕೊಂಡ ಸುಮಲತಾ!
Advertisment
  • ಸುಮಲತಾ ಅವರು ಆರು ಲೈನ್​ಗಳಲ್ಲಿ ಹೇಳಿರುವುದು ಏನು?
  • ಇನ್​ಸ್ಟಾದಲ್ಲಿ 6 ಜನರನ್ನು ಅನ್​ಫಾಲೋ ಮಾಡಿದ್ದ ದರ್ಶನ್
  • ಪರೋಕ್ಷವಾಗಿ ನಟಿ ಸುಮಲತಾ ಅವರು ಹೇಳಿದ್ದು ಯಾರಿಗೆ?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೆಲ ತಿಂಗಳಗಳ ಬಳಿಕ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲ್ಲಿದ್ದಾರೆ. ಇದರ ನಡುವೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಸೇರಿದಂತೆ 6 ಜನರನ್ನು ಅನ್​ಫಾಲೋ ಮಾಡಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಸುಮಲತಾ ಅವರ ಸ್ಟೇಟಸ್​ ಒಂದು ಚರ್ಚೆಗೆ ಕಾರಣವಾಗಿದೆ.

ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅವರು ತಮ್ಮ ಇನ್​ಸ್ಟಾದ ಸ್ಟೇಟಸ್​ನಲ್ಲಿ 6 ಲೈನ್​ಗಳನ್ನು ಇಂಗ್ಲಿಷ್​ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ದರ್ಶನ್ ಅವರು ಅನ್​ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಅವರು ಸ್ಟೇಟಸ್ ಶೇರ್ ಮಾಡಿದ್ದರಿಂದ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸುಮಲತಾ ಅವರು ಸುಮ್ಮನೇ ಈ ರೀತಿ ಹಾಕಿದರೋ ಅಥವಾ ಯಾರಿಗೋ ಏನೋ ಹೇಳಲು ಹೋಗಿ ಈ ರೀತಿ ಪೋಸ್ಟ್ ಮಾಡಿದರೋ ಗೊತ್ತಿಲ್ಲ. ಆದ್ರೆ ಸದ್ಯಕ್ಕಂತೂ ಈ ಪೋಸ್ಟ್ ಅಭಿಮಾನಿಗಳಲ್ಲಿ ಪ್ರಶ್ನೆಗಳನ್ನ ಮೂಡಿಸಿದೆ.

ಇದನ್ನೂ ಓದಿಇಂದು ರನ್ಯಾ ರಾವ್​​ ಜಾಮೀನು ಭವಿಷ್ಯ.. ನಟಿ ಪತಿಗೆ ಬಿಗ್​​ ರಿಲೀಫ್​​ ನೀಡಿದ ಹೈಕೋರ್ಟ್

publive-image

ಸುಮಲತಾ ಅವರು ಬರೆದ ಲೈನ್ಸ್ ಹೀಗಿವೆ.. ಸತ್ಯ ತಿರುಚುವ, ಪಶ್ಚಾತ್ತಾಪವಿಲ್ಲದೆ ಜನರನ್ನು ನೋಯಿಸುವರು. ಆರೋಪವನ್ನು ಬೇರೆಡೆಗೆ ಬದಲಾಯಿಸುವವರು. ಆದರೂ ಕೆಲವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುವಂತೆ ಮಾಡುವ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ 6 ಜನರನ್ನ ಫಾಲೋ ಮಾಡ್ತಿದ್ದ ದರ್ಶನ್ ಅವರು​​, ಅವರೆನ್ನೆಲ್ಲಾ ಏಕಾಏಕಿ ಅನ್​​ಫಾಲೋ ಮಾಡಿದ್ದಾರೆ. ಸುಮಲತಾ ಅಂಬರೀಶ್, ಲವ್ಲಿ ಬ್ರದರ್​​​​ ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಡಿ ಕಂಪನಿ, ದಿನಕರ್ ತೂಗುದೀಪ್​​, ಪುತ್ರ ವಿನೀಶ್​ನನ್ನ ಅನ್​ಫಾಲೋ ಮಾಡಿದ್ದಾರೆ. ಇದರಲ್ಲಿ ಸುಮಲತಾ ಅವರನ್ನು ಅನ್​ಫಾಲೋ ಮಾಡಿದ್ದೇ ಹೆಚ್ಚು ಚರ್ಚೆ ಆಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment