newsfirstkannada.com

ನೇಮು, ಫೇಮು ಬಂದ್ಮೇಲೆ ಬಂದ ದಾರಿ ಮರೆಯದ ವಿರಾಟ.. ಟೆನಿಸ್​​ ಆಟಗಾರನ ಪಾಲಿಗೆ ಕರ್ಣನಾದ ಕೊಹ್ಲಿ..!

Share :

Published January 18, 2024 at 12:51pm

  ಟೀಮ್ ಇಂಡಿಯಾ ದಾನ ಶೂರ ಕರ್ಣ ಕೊಹ್ಲಿ

  ಆಟವಷ್ಟೇ ಅಲ್ಲ, ಕೊಹ್ಲಿಯ ಹೃದಯವೂ ಶ್ರೀಮಂತ..!

  ಸುಮಿತ್​ ನಗಾಲ್​​ಗೆ ಸಹಾಯ ಹಸ್ತ ಚಾಚಿದ ವಿರಾಟ್​​​

ಎಡಗೈಯಲ್ಲಿ ಕೊಟ್ಟಿದ್ದು ಬಲಗೈಯಲ್ಲಿ ಗೊತ್ತಾಗಬಾರದು ಅಂತಾರೆ. ಇದೇ ರೀತಿಯಲ್ಲಿ ಓರ್ವ ಟೆನಿಸ್ ಸ್ಟಾರ್​ಗೆ ಕೊಹ್ಲಿ ಸಂಕಷ್ಟದಲ್ಲಿ ನೆರವಾಗಿದ್ದಾರೆ. ವಿರಾಟ್ ಮಾಡಿದ ಸಹಾಯ ಇಂದು ಯುವ ಟೆನಿಸ್​​ ಆಟಗಾರರನ್ನ ಬದುಕನ್ನ ಬದಲಿಸಿದೆ. ಆಸ್ಟ್ರೇಲಿಯಾ ಓಪನ್​ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾನೆ.

ವಿರಾಟ್ ಕೊಹ್ಲಿ.. ಬಣ್ಣಿಸಿದಷ್ಟು ಮುಗಿಯಲಾರದ ವ್ಯಕ್ತಿತ್ವ. ಆನ್​ ಫೀಲ್ಡ್​ ಸಾಧನೆ, ಆಫ್​​ ದಿ ಫೀಲ್ಡ್​​​​ ಸರಳ ನಡೆ ಎಂತವರಿಗೂ ಸ್ಫೂರ್ತಿ. ಸದಾ ಆಟ, ಫನ್​​ ಅಂಡ್ ಅಗ್ರೆಸ್ಸಿವ್​​​​ ನಡೆಯಿಂದ ಹೆಚ್ಚು ಸದ್ದು ಮಾಡುವ ಕಿಂಗ್ ಕೊಹ್ಲಿ ಫಸ್ಟ್​ ಟೈಮ್​ ಬೇರೆ ವಿಚಾರದಿಂದ ಸುದ್ದಿಯಾಗಿದ್ದಾರೆ. ಇದು ಬಹುಶಃ ಕೊಹ್ಲಿಯ ಇನ್ನೊಂದು ಮುಖವೆಂದ್ರು ತಪ್ಪಲ್ಲ. ತಾನು ಬೆಳೆದು ತನ್ನವರನ್ನ ಬೆಳೆಸುವ ವಿರಾಟನ ಹೃದಯ ಶ್ರೀಮಂತಿಕೆ ಇದೀಗ ಅನಾವರಣಗೊಂಡಿದೆ.

ಟೆನಿಸ್​​ ಆಟಗಾರನ ಪಾಲಿಗೆ ಕರ್ಣನಾದ ಕೊಹ್ಲಿ..!
ಸುಮಿತ್ ನಗಾಲ್​​​. ಭಾರತದ ಖ್ಯಾತ ಟೆನಿಸ್​ ತಾರೆ. ಗ್ರ್ಯಾನ್​ ಸ್ಲಾಮ್​​ನಲ್ಲಿ ಹೊಸ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 26 ವರ್ಷದ ನಗಾಲ್​ ಆಸ್ಟ್ರೇಲಿಯನ್​​​​ ಓಪನ್​ನಲ್ಲಿ ಕಜಕಿಸ್ತಾನದ ಅಲೆಕ್ಸಾಂಡರ್​ ಬಬ್ಲಿಕ್​​​​​​​​​​​​​​​ ವಿರುದ್ಧ 6-4, 6-2,7-6 ಸೆಟ್​ಗಳಿಂದ ಜಯ ಗಳಿಸಿ ಹೊಸ ಭಾಷ್ಯ ಬರೆದಿದ್ದಾರೆ. ಗ್ರ್ಯಾನ್ ಸ್ಲಾಮ್​ನಲ್ಲಿ ಸೀಡ್​ ಆಟಗಾರನ ವಿರುದ್ಧ 35 ವರ್ಷಗಳ ಬಳಿಕ ವಿಜಯ ಪತಾಕೆ ಹಾರಿಸಿದ್ದಾರೆ. ನಗಾಲ್​ರ ಮಹತ್ವದ ಸಾಧನೆಯನ್ನ ಇಡೀ ದೇಶವೇ ಕೊಂಡಾಡ್ತಿದೆ. ಇದೇ ನಗಾಲ್​​​ ಯಶಸ್ವಿ ಯಾತ್ರೆ ಹಿಂದೆ ದೊಡ್ಡ ಸ್ಟ್ರಗಲ್​ ಇದೆ. ಹಿಂದೆ ನಗಾಲ್​​ ಆರ್ಥಿಕವಾಗಿ ಪೆಟ್ಟು ತಿಂದು ಜರ್ಝರಿತನಾಗಿದ್ರು. ಸಹಾಯಕ್ಕಾಗಿ ಅಂಗಲಾಚಿದ್ರು. ಆಗ ನಗಾಲ್​​​​ ನೆರವಿಗೆ ಬಂದಿದ್ದೆ ವಿರಾಟ್ ಕೊಹ್ಲಿ.

2017 ರಿಂದ ಸುಮಿತ್​ ನಗಾಲ್​​ಗೆ ಕೊಹ್ಲಿ ನೆರವು..!
ನಗಾಲ್ ಕಷ್ಟದ ದಿನಗಳಲ್ಲಿ ಕಿಂಗ್ ಕೊಹ್ಲಿ ಜೊತೆಗೆ ನಿಂತಿದ್ದಾರೆ. ಕಳೆದ 7 ವರ್ಷಗಳಿಂದ ಟೆನಿಸ್​ ಆಟಗಾರನಿಗೆ ಬೇಕಾದ ನೆರವನ್ನು ನೀಡುತ್ತಿದ್ದಾರೆ. ಇಷ್ಟು ವರ್ಷ ಸುಮ್ಮನಾಗಿದ್ದ ನಗಾಲ್​ ಇದೀಗ ಕೊಹ್ಲಿಯ ನೆರವನ್ನ ಸ್ಮರಿಸಿದ್ದಾರೆ.

‘ಕೊಹ್ಲಿ ನೆರವಿಗೆ ಧನ್ಯವಾದ’
2017 ರಿಂದ ವಿರಾಟ್ ಕೊಹ್ಲಿ ಫೌಂಡೇಷನ್​ ನನಗೆ ಸಹಾಯ ಮಾಡಿದೆ. ಕಳೆದೆರಡು ವರ್ಷಗಳಿಂದ ನಾನು ಚೆನ್ನಾಗಿ ಪ್ರದರ್ಶನ ನೀಡಿಲ್ಲ. ಆರ್ಥಿಕ ಸಮಸ್ಯೆ ಎದುರಿಸಿದೆ. ಒಂದು ವೇಳೆ ನನಗೆ ವಿರಾಟ್ ಕೊಹ್ಲಿ ಅವರ ನೆರವು ಸಿಗದಿದ್ದರೆ, ಏನು ಮಾಡುತ್ತಿದ್ದೇನೋ ಗೊತ್ತಿಲ್ಲಸುಮಿತ್​​​ ನಗಾಲ್​, ಟೆನಿಸ್​​ ಆಟಗಾರ

498 ರೂಪಾಯಿಯೊಂದಿಗೆ ಕೆನಡಾ TO ಜರ್ಮನಿ ಪ್ರಯಾಣ

ಇದೊಂದು ಲೈನ್ ಸಾಕು, ನಗಾಲ್​​ ಯಾವ ಮಟ್ಟಿಗೆ ಆರ್ಥಿಕ ಸಮಸ್ಯೆ ಎದುರಿಸಿದ್ರು ಅನ್ನೋದಕ್ಕೆ. 2019ರ ಆರಂಭದಲ್ಲಿ ನಗಾಲ್ ಟೂರ್ನಮೆಂಟ್ ಮುಗಿಸಿ ಕೆನಡಾದಿಂದ ಜರ್ಮನಿಗೆ ತೆರಳಿದ್ರು. ಆಗ ಅವರ ಬಳಿ ಇದ್ದದ್ದು ಬರೀ 6 ಡಾಲರ್ ಮಾತ್ರ. ಅಂದ್ರೆ 498 ರನ್ ರೂಪಾಯಿ ಮಾತ್ರ. ಆಗ ಹಣ ಸಹಾಯ ಮಾಡುವಂತೆ ಮನವಿ ಮಾಡಿದ್ರು. ಇದಕ್ಕೆ ಕೊಹ್ಲಿ ಸಹಕರಿಸಿದರು ಎಂದು ನಗಾಲ್ ಹೇಳಿದ್ದಾರೆ.

ಯಾರು ಈ ಸುಮಿತ್ ನಗಾಲ್​​​..?

26 ವರ್ಷದ ನಗಾಲ್ ಮೂಲತಃ ಹರಿಯಾಣದವರು. 8ನೇ ವಯಸ್ಸಿಗೆ ಟೆನಿಸ್ ರಾಕೆಟ್​ ಹಿಡಿದು ಮಹೇಶ್ ಭೂಪತಿ ಗರಡಿಯಲ್ಲಿ ಬೆಳೆದರು. ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿ 2015 ರಲ್ಲಿ ವಿಂಬಲ್ಡನ್ ಡಬಲ್ಸ್​​ನಲ್ಲಿ ಟ್ರೋಫಿ ಗೆದ್ದ ಚತುರ. 2020 ರ ಯುಸ್​​​​​​​​ ಓಪನ್​ನಲ್ಲಿ ಗೆಲುವಿನ ಖಾತೆ ತೆರೆದಿದ್ರು. ಈಗ ಆಸ್ಟ್ರೇಲಿಯಾ ಓಪನ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ವಿರಾಟ್ ಕೊಹ್ಲಿ ಫೌಂಡೇಶನ್ ಅಡಿ ಅಥ್ಲಿಟ್ಸ್ ಗೆ​​​ ನೆರವು

ವಿರಾಟ್ ಕೊಹ್ಲಿ ಫೌಂಡೇಶನ್​ ಸಂಸ್ಥೆಯಿಂದ ಕೊಹ್ಲಿ ಬರೀ ಸುಮಿತ್ ನಗಾಲ್ ನೆರವಿಗೆ ಮಾತ್ರ ನಿಂತಿಲ್ಲ. ಅನೇಕ ಕ್ರೀಡಾಪಟುಗಳಿಗೆ ಸಹಾಯದ ಹಸ್ತ ಚಾಚಿದ್ದಾರೆ. ಗಾಲ್ಫ್​​ ಪಟು ಆದಿಲ್​​​ ಬೇಡಿ, ಟೇಬಲ್​​ ಟೆನಿಸ್ ಆಟಗಾರ್ತಿ ಸ್ವಸ್ವಿಕಾ ಘೋಷ್​​​, ಬಾಕ್ಸರ್​​​ ಸಾಕ್ಷಿ ಚೌಧರಿ, ಸ್ವಿಮ್ಮರ್​​​ ಶಿವಾನಿ ಕಟಾರಿಯಾ, ಸ್ಕ್ವಾಷ್​​​​​​ ಪಟು ನೀಲ್​​​​ ಜೋಶಿ, ಬಿಲ್ಲುಗಾರ್ತಿ ದಿವ್ಯಾ ದಯಾಲ್​​​, ಟೆನಿಸ್​​​​​ ಆಟಗಾರ್ತಿ ಕರ್ಮನ್​​ ಕೌರ್​​​​​​​​ ಥಂಡಿಗೆ ತಮ್ಮ ಫೌಂಡೇಶನ್​ ಮೂಲಕ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ನೇಮ್​ ಆ್ಯಂಡ್ ಫೇಮ್​​ ಬಂದ್ಮೇಲೆ ಬಂದ ದಾರಿಯನ್ನ ಮರೆಯೋರೆ ಹೆಚ್ಚು. ಆದ್ರೆ ಕಿಂಗ್​ ಕೊಹ್ಲಿ ಡಿಫರೆಂಟ್​ ಅನ್ನೋದನ್ನ ಪ್ರತಿ ಹೆಜ್ಜೆ ತೋರಿಸಿದ್ದಾರೆ​​. ತಾನು ಓರ್ವ ಕ್ರೀಡಾಪಟುವಾಗಿ ಉಳಿದ ಕ್ರೀಡಾಪಟುಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದಕ್ಕೆ ಅಲ್ಲವೇ ಕೊಹ್ಲಿ ವಿಶ್ವದಾದ್ಯಂತ ಅಪರಿಮಿತ ಅಭಿಮಾನಿ ಬಳಗವನ್ನು ಹೊಂದಿರೋದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನೇಮು, ಫೇಮು ಬಂದ್ಮೇಲೆ ಬಂದ ದಾರಿ ಮರೆಯದ ವಿರಾಟ.. ಟೆನಿಸ್​​ ಆಟಗಾರನ ಪಾಲಿಗೆ ಕರ್ಣನಾದ ಕೊಹ್ಲಿ..!

https://newsfirstlive.com/wp-content/uploads/2024/01/VIRAT-KOHLI-5.jpg

Load More