newsfirstkannada.com

ಹೆಚ್​​​ಡಿಕೆಗೆ ಬಿಗ್​ ಶಾಕ್​​ ಕೊಟ್ಟ ಸುಮಲತಾ; ಮಂಡ್ಯ ಟಿಕೆಟ್​ಗಾಗಿ ದೆಹಲಿಯಲ್ಲೇ ಲಾಬಿ; ಏನಿದು ಟ್ವಿಸ್ಟ್​​?

Share :

Published February 8, 2024 at 4:21pm

  ಲೋಕಸಭಾ ಸಮರದ ಸೇನಾನಿಗಳ ಆಯ್ಕೆಗೆ ಭಾರೀ ಕಸರತ್ತು

  ಈಗ ಇಡೀ ದೇಶಾದ್ಯಂತ ಮಂಡ್ಯ ಲೋಕಸಭಾ ಕ್ಷೇತ್ರದ್ದೇ ಸದ್ದು!

  ಬಿ.ಎಲ್​ ಸಂತೋಷ್​​, ನಡ್ಡಾರನ್ನು ಭೇಟಿ ಮಾಡಿದ ಸುಮಲತಾ

ದೆಹಲಿ: ಲೋಕಸಭಾ ಸಮರದ ಸೇನಾನಿಗಳ ಆಯ್ಕೆಗೆ ಕಸರತ್ತು ಜೋರಾಗಿದೆ. ಮಾಜಿ ಸಿಎಂ ಹೆಚ್​​ಡಿಕೆ ಅವರ ಬಿಡದಿ ಫಾರ್ಮ್​​ ಹೌಸ್​​, ರಾಜಕೀಯ ಚಟುವಟಿಕೆಯ ಪ್ರವಾಸಿ ಕ್ಷೇತ್ರವಾಗಿದೆ. ಬಿಜೆಪಿಯ ಸರಣಿ ನಾಯಕರು ಹೆಚ್​​ಡಿಕೆ ಬಳಿ ಮದ್ದು ಪಡೆಯುತ್ತಿದ್ದಾರೆ. ಆದ್ರೆ, ದಳಪತಿಗಳ ಗಟ್ಟಿ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ, ಮಂಡೆ ಬಿಸಿ ಮಾಡ್ತಿದೆ. ಇತ್ತ, ಬಿಜೆಪಿಗೆ ರೆಡ್ಡಿ, ಸಂಕಟ ಹೆಚ್ಚಿಸಿದ್ದಾರೆ.

ಸಿಲಿಕಾನ್​ ಸಿಟಿ ಬೆಂಗಳೂರು ರಾಜ್ಯ ರಾಜಕೀಯದ ವಠಾರ. ಆದ್ರೆ, ಬಿಡದಿಯ ಫಾರ್ಮ್​​ ಹೌಸ್​​ ಈಗ ಪವರ್​​ ಸ್ಟೇಷನ್​​ ಆಗಿ ಬದಲಾಗಿದೆ. ಬಿಜೆಪಿ, ಜೆಡಿಎಸ್​​ನ ರಾಜಕೀಯ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರವಾಗಿದೆ. ಜೆಡಿಎಸ್​​ ನಾಯಕರ ಪಾಲಿನ ತವರು ಮನೆ ಆದ ಈ ಬಿಡದಿ ಫಾರ್ಮ್​ ಹೌಸ್​ಗೆ ಬಿಜೆಪಿ ನಾಯಕರಿಗೂ ಈ ಮದ್ದಿನ ಅರಮನೆ, ಟ್ರಬಲ್​​ ಶೂಟರ್​​ ರೀತಿ ಕಾಣಿಸ್ತಿದೆ. ಲೋಕಸಭೆ ಎಲೆಕ್ಷನ್​​​ ಹೊತ್ತಲ್ಲೇ ಬಿಜೆಪಿಯ ಸಾಲು ಸಾಲು ನಾಯಕರು, ದಳಪತಿ ಭೇಟಿಗೆ ಸಾಲುಗಟ್ಟುತ್ತಿದ್ದಾರೆ. ಮೈತ್ರಿ ಆಗಿರೋ ಕಾರಣ ಮಂಡ್ಯವನ್ನು ಬಿಜೆಪಿ, ಜೆಡಿಎಸ್​ಗೆ ಬಿಟ್ಟುಕೊಡಲಿದೆ. ಹೀಗಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್​ ಮಾಡಿದ್ದ ಸುಮಲತಾ ಅಂಬರೀಶ್​​ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್​ ಪರ ಮಾಜಿ ಬಿಜೆಪಿ ಶಾಸಕ ಪ್ರೀತಮ್​ ಗೌಡ ಬ್ಯಾಟಿಂಗ್​ ಮಾಡಿದ್ದಾರೆ. ಇಷ್ಟೇ ಅಲ್ಲ, ದೆಹಲಿ ಮಟ್ಟದಲ್ಲಿ ಸುಮಲತಾ ಅಂಬರೀಶ್​ ಟಿಕೆಟ್​ಗಾಗಿ ಲಾಬಿ ಮಾಡುತ್ತಿದ್ದಾರೆ.

ಹೌದು, ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ.ಪಿ ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಸುಮಲತಾ ಭೇಟಿ ಮಾಡಿದ್ದಾರೆ. ಈ ವೇಳೆ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಿದ್ದಾರೆ.

ಇನ್ನು, ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ಶ್ರೀ ನಡ್ಡಾ ಜಿ ಅವರಿಗೂ ಶ್ರೀ ಸಂತೋಷ್ ಜಿ ಅವರಿಗೂ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಸುಮಲತಾ ಟ್ವೀಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​​​ಡಿಕೆಗೆ ಬಿಗ್​ ಶಾಕ್​​ ಕೊಟ್ಟ ಸುಮಲತಾ; ಮಂಡ್ಯ ಟಿಕೆಟ್​ಗಾಗಿ ದೆಹಲಿಯಲ್ಲೇ ಲಾಬಿ; ಏನಿದು ಟ್ವಿಸ್ಟ್​​?

https://newsfirstlive.com/wp-content/uploads/2024/02/Sumalatha_JP-Nadda.jpg

Load More