ಅಯೋಧ್ಯೆ ರಾಮಲಲ್ಲಾನಿಗೂ ತಟ್ಟಿದ ಬಿಸಿಲಿನ ಬವಣೆ.. ಶ್ರೀರಾಮಜನ್ಮಭೂಮಿ ಟ್ರಸ್ಟ್​ನಿಂದ ಮಹತ್ವದ ನಿರ್ಧಾರ; ಏನದು?

author-image
Veena Gangani
Updated On
ಅಯೋಧ್ಯೆ ರಾಮಲಲ್ಲಾನಿಗೂ ತಟ್ಟಿದ ಬಿಸಿಲಿನ ಬವಣೆ.. ಶ್ರೀರಾಮಜನ್ಮಭೂಮಿ ಟ್ರಸ್ಟ್​ನಿಂದ ಮಹತ್ವದ ನಿರ್ಧಾರ; ಏನದು?
Advertisment
  • ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲ್ಪಟ್ಟ ರಾಮಲಲ್ಲಾ ಮೂರ್ತಿ
  • ಜ. 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ
  • ಇಂದಿನಿಂದ ರಾಮಲಲ್ಲಾ ಮೂರ್ತಿಯ ಉಡುಪು, ಅಲಂಕಾರದಲ್ಲಿ ಬದಲಾವಣೆ

ಅಯೋಧ್ಯೆ: ದೇಶಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಈ ಬಿರು ಬಿಸಿಲಿನಿಂದ ದೇಶದ ಜನತೆ ಕಂಗಾಲಾಗಿದ್ದಾರೆ. ಹೀಗಾಗಿ ಇಂದಿನಿಂದ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯಾಗಿರೋ ಭಗವಾನ್ ಶ್ರೀ ರಾಮಲಲ್ಲಾಗೆ ಹತ್ತಿ (COTTON) ವಸ್ತ್ರವನ್ನು ತೊಡಿಸಲಾಗುತ್ತದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್​ ಮಾಹಿತಿ ನೀಡಿದೆ.

publive-image

ಇದನ್ನೂ ಓದಿ:ಅಯೋಧ್ಯೆಯಲ್ಲಿ ನಡೆಯುತ್ತಿದ್ದ ‘ಮಂಡಲ ಪೂಜೆ’ ಮುಕ್ತಾಯ; ಈ ಬಗ್ಗೆ ಪೇಜಾವರ ಶ್ರೀ ಏನಂದ್ರು..?

ಜನವರಿ 22ರಂದು ಅಯೋಧ್ಯೆಯ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು. ಅಂದಿನಿಂದ ಲಕ್ಷ, ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ  ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ರಾಮಲಲ್ಲಾ ಮೂರ್ತಿಗೆ ಕೈಮಗ್ಗದಿಂದ ತಯಾರಿಸಿದ್ದ ಹತ್ತಿ ಬಟ್ಟೆಯಿಂದ ಅಲಂಕರಿಸಲಾಗುತ್ತಿದೆ.


">March 30, 2024

ಈ ಬಗ್ಗೆ ಟ್ವೀಟ್​ ಮಾಡಿದ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ "ಪ್ರಭು ಇಂದು ಧರಿಸಿರುವ ವಸ್ತ್ರವು ಕೈಮಗ್ಗದ ಹತ್ತಿಯಿಂದ ಮಾಡಲ್ಪಟ್ಟಿದೆ. ನೈಸರ್ಗಿಕ ಇಂಡಿಗೋದಿಂದ ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ ಎನ್ನುವ ಮಾಹಿತಿ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment