/newsfirstlive-kannada/media/post_attachments/wp-content/uploads/2024/03/heat-wave.jpg)
ರಾಜ್ಯದಲ್ಲಿ ಚಳಿಗಾಲ ಮುಗಿಯುವ ಮೊದಲೇ ಬಿಸಿಲಿನ ಝಳ ಶುರುವಾಗಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮಾರ್ಚ್ ಆರಂಭದಲ್ಲಿ ಬೇಸಿಗೆಯ ಮುನ್ಸೂಚನೆ ಮೂಡುವುದು ವಾಡಿಕೆ. ಆದ್ರೆ ಈಗಿನಿಂದಲೇ ಬೇಸಿಗೆಯ ಅನುಭವ ಶುರುವಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.
ಕೆಲ ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ 32 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಸಾಮಾನ್ಯವಾಗಿ ಫೆಬ್ರವರಿ ಪೂರ್ತಿ ತಿಂಗಳು ಚಳಿ ಇರುತ್ತದೆ. ಮಾರ್ಚ್ನಿಂದ ಬಿಸಿಲಿನ ಝಳ ಶುರುವಾಗುತ್ತದೆ. ಆದ್ರೆ ಈ ಬಾರಿ ಫೆಬ್ರವರಿಯ ತಿಂಗಳಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ:2 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಆತಂಕ.. ಗೃಹ ಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳ ಫಿಲ್ಟರ್..?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬೇಗೆ ಇನ್ನೂ ಹೆಚ್ಚಾಗುವ ಸೂಚನೆ ಇದೆ. ಮಾರ್ಚ್ನಿಂದ ಬೇಸಿಗೆ ಆರಂಭವಾಗಿಲಿದ್ದು, ಈ ಬಾರಿ ಮಳೆ ಮತ್ತು ಚಳಿಯ ಪ್ರಮಾಣವೂ ಕೂಡ ಹೆಚ್ಚಾಗಿತ್ತು. ಇನ್ನು ಬೇಸಿಗೆ ಕಾಲದ ಬಿಸಿಲು ಹಾಗೂ ಸೆಕೆಯೂ ಕೂಡ ಅಧಿಕವಾಗಲಿದೆ, ಮುನ್ನೆಚ್ಚರಿಕೆಯಿಂದ ಇರಿ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ