ಜೈಲಲ್ಲೇ ಸಿಗರೇಟ್ ಪಾರ್ಟಿ.. ದರ್ಶನ್ ಫೋಟೋ ಲೀಕ್ ಆದ ಮೇಲೆ ಎಚ್ಚೆತ್ತ ಅಧಿಕಾರಿಗಳು; ಮುಂದೇನು?

author-image
Gopal Kulkarni
Updated On
ಜೈಲಿನಲ್ಲಿ ದರ್ಶನ್ ಪಾರ್ಟಿ.. ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!
Advertisment
  • ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಫೋಟೋ ವೈರಲ್ ಎಫೆಕ್ಟ್‌!
  • ಸುಮೋಟೋ ಕೇಸ್ ದಾಖಲಿಸಿಕೊಂಡ ಕಾರಾಗೃಹದ ಹಿರಿಯ ಅಧಿಕಾರಿಗಳು
  • ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವರದಿ ನೀಡುವಂತೆ ಮೌಖಿಕ ಸೂಚನೆ

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡುತ್ತಿರುವ ಅನುಮಾನ ವ್ಯಕ್ತವಾಗಿದೆ. ಜೈಲಿನಲ್ಲಿ ದರ್ಶನ್ ಸಿಗರೇಟ್‌, ಟೀ ಪಾರ್ಟಿಯ ಫೋಟೋ ವೈರಲ್ ಆಗುತ್ತಿದ್ದಂತೆ ಸುಮೋಟೋ ಅಂದ್ರೆ ಸ್ವಯಂ ಪ್ರೇರಿತ ದೂರು ದಾಖಲು ಆಗಿದೆ. ಈ ಮೂಲಕ ತನಿಖೆಗೆ ಜೈಲಾಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ:ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

ಸಾಮಾನ್ಯವಾಗಿ ಸಾಮಾನ್ಯ ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟವಾದಾಗ, ಜೈಲು ಕೈದಿಗಳು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಯಾವುದೇ ವಿಚಾರವಾದ್ರೂ ಪೊಲೀಸರಿಗೆ ದೂರು ನೀಡುತ್ತಾರೆ. ಆದ್ರೆ ದರ್ಶನ್ ರೌಡಿಶೀಟರ್ ನಾಗನ ಜೊತೆಗಿರುವ ಫೋಟೋ ವೈರಲ್ ಆಗ್ತಿದ್ದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಜೈಲಾಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

publive-image

ಇದನ್ನೂ ಓದಿ:ಒಂದು​ ಕೈಯಲ್ಲಿ ಸಿಗರೇಟ್, ಮತ್ತೊಂದು ಕಡೆ ಟೀ ಕಪ್‌; ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ? ಶಾಕಿಂಗ್ ಮಾಹಿತಿ ಬಹಿರಂಗ

ಇಲ್ಲಿ ಜೈಲಾಧಿಕಾರಿಗಳ ಕರ್ತವ್ಯ ಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಆದ್ದರಿಂದಾಗಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಕಾರಾಗೃಹದ ಇಲಾಖೆ ಮೇಲಾಧಿಕಾರಿಗಳಿಂದ ತನಿಖೆ ಮಾಡಿ ವರದಿ ನೀಡುವಂತೆ ಈಗಾಗಲೇ ಮೌಖಿಕ ಸೂಚನೆ ನೀಡಲಾಗಿದೆ. ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಜೈಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment