/newsfirstlive-kannada/media/post_attachments/wp-content/uploads/2025/01/SUNGLASS-BABA.jpg)
ಮಹಾಕುಂಭಮೇಳ ಅಂದತಕ್ಷಣ ಅಲ್ಲಿ ಮಹಾಸಾಗರದಂತೆ ಹರಿದು ಬರೋದು ನಾಗಾಸಾಧುಗಳು, ಅಘೋರಿಗಳು, ಸಾಧು ಸಂತರು. ಅದರಲ್ಲಿಯೂ ಈ ನಾಗಾಸಾಧುಗಳು ಬದುಕು ವಿಚಿತ್ರ ಹಾಗೂ ವೈವಿದ್ಯಮಯವಾಗಿರುತ್ತದೆ. ಅವರ ಅನುಷ್ಠಾನಗಳು, ಪೂಜಾ ಪದ್ಧತಿಗಳು, ಅವರ ನಿಲುವುಗಳು ಎಲ್ಲವೂ ಕೂಡ ವಿಶಿಷ್ಟ ಹಾಗೂ ವಿಚಿತ್ರ. ಸದ್ಯ ನ್ಯೂಸ್ ಫಸ್ಟ್ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪ್ರತ್ಯಕ್ಷವರದಿ ಮಾಡುತ್ತಿದೆ. ಅಲ್ಲಿ ಅನೇಕ ನಾಗಾ ಸಾಧುಗಳನ್ನು ಮಾತನಾಡಿಸಿದೆ. ಅದರಲ್ಲೂ ವಿಶೇಷವಾಗಿ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಸನ್ ಗ್ಲಾಸ್ ಬಾಬಾ ಎಂದು ಖ್ಯಾತಿ ಪಡೆದ ನಾಗಾಸಾಧು ಅವರನ್ನು ಮಾತನಾಡಿಸಿದಾಗ ಅನೇಕ ಅಚ್ಚರಿಯ ಹಾಗೂ ಆಸಕ್ತಿದಾಯಕ ವಿಚಾರಗಳನ್ನು ಅವರು ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡರು.
ಇದನ್ನೂ ಓದಿ:ಕುಂಭ ಮೇಳದಲ್ಲಿ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ನಾಗಸಾಧುಗಳು.. ಕೆಲವರ ಮೇಲೆ ದಾಳಿ.. ಆಗಿದ್ದೇನು..?
ನನ್ನ ಹೆಸರು ಸರಸ್ವತಿ ಮಹರಾಜ್ ಎಂದು ಹೇಳಿಕೊಂಡ ಸನ್ಗ್ಲಾಸ್ ಬಾಬಾ, ಕುಂಭಮೇಳದ ಬಳಿಕ ನಾವು ಮಹಾಕಾಳಿಕಾನಗರಿಯಲ್ಲಿ ವಾಸಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮನ್ನು ಜನರು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಟೈಗರ್ ಬಾಬಾ ಎನ್ನುತ್ತಾರೆ, ಸನ್ಗ್ಲಾಸ್ ಬಾಬಾ ಎನ್ನುತ್ತಾರೆ. ಅವರ ಇಷ್ಟಕ್ಕಣುಗಣವಾಗಿ ಕರೆಯುತ್ತಾರೆ ಅದು ಅವರ ಪ್ರೀತಿ ಎಂದು ನಾಗಾಸಾಧು ಹೇಳಿದ್ದಾರೆ.
ಇದನ್ನೂ ಓದಿ:ಮಹಾ ಕುಂಭಮೇಳ; ಅಮಾವಾಸ್ಯೆಗೆ ಹೊಸ ದಾಖಲೆ ಬರೆಯಲಿರೋ ಭಕ್ತ ಸಮೂಹ
ಇನ್ನು ನಾಗಾಸಾಧುಗಳ ಜೀವನ ಹೇಗಿರುತ್ತೆ ಎಂಬ ನ್ಯೂಸ್ಫಸ್ಟ್ ಪ್ರಶ್ನೆಗೆ ನಮ್ಮದು ಕಾಡು ಮೇಡಿನ ಜೀವನ. ಒಂಟಿಯಾಗಿಯೇ ಕಾಲ ಕಳೆಯಬೇಕಾಗುತ್ತದೆ. ಒಮ್ಮೊಮ್ಮೆ ಊಟಕ್ಕೆ ಏನಾದರೂ ಸಿಗುತ್ತದೆ ಒಮ್ಮೊಮ್ಮೆ ಅದು ಇಲ್ಲ. ನಾಗಾಸಾಧುಗಳ ಜೀವನವೇ ಅದ್ಭುತವಾದ ಜೀವನ. ಇದಕ್ಕಾಗಿಯೇ ಈ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ದೇಶದ ಅಂತಃಶಕ್ತಿಗೆ ಧಕ್ಕೆ ಬಂದಿದ್ದೇ ಆದ್ರೆ ನಾಗಾಸಾಧುಗಳು ಎದ್ದು ನಿಲ್ಲುತ್ತಾರೆ. ದೇಶದ ರಕ್ಷಣೆಗೆ ಸದಾ ಸನ್ನದ್ಧರಾಗಿರುತ್ತಾರೆ ಎಂದು ಹೇಳಿದರು. ನಮ್ಮ ದೇಶದ ವಿರುದ್ಧ ಯಾರೇ ಕಣ್ಣೆತ್ತಿ ನೋಡಿದರು ಅವರ ಹೆಸರನ್ನೇ ಇಲ್ಲದಂತೆ ಮಾಡುತ್ತೇವೆ. ಇದು ಬ್ರಿಟಿಷರ ಕಾಲದಲ್ಲಿಯೂ ನಡೆದಿದೆ. ಮೊಘಲರ ಕಾಲದಲ್ಲಿಯೂ ನಡೆದಿದೆ. ಮುಂದೆಯೂ ನಡೆಯುತ್ತದೆ. ಭಗವಾನ್ ಮಹಾಕಾಳನ ಶಕ್ತಿಯಲ್ಲಿ ಎಲ್ಲ ಸೃಷ್ಟಿಯೂ ಅಡಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ