newsfirstkannada.com

ಪಾಕ್ ಮಾಜಿ ಕ್ರಿಕೆಟಿಗನ ಭೇಟಿಯಾದ ಸುನಿಲ್ ಶೆಟ್ಟಿ; ಅಫ್ರಿದಿ ಮಗಳ ಜೊತೆ Cute Video

Share :

Published August 19, 2023 at 9:49am

    ಇಬ್ಬರು ಹೆಣ್ಮಕ್ಕಳನ್ನು ಪರಿಚಯಿಸಿದ ಅಫ್ರಿದಿ

    ಶೆಟ್ಟಿ ಹೆಗಲ ಮೇಲೆ ಕೈಹಾಕಿ ಮಾತಾಡಿಸಿದ ಅಫ್ರಿದಿ

    ಅಭಿಮಾನಿಗಳಿಂದ ಬಗೆಬಗೆಯ ಪ್ರತಿಕ್ರಿಯೆ

ಖ್ಯಾತ ಬಾಲಿವುಡ್​​ ನಟ ಮತ್ತು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಸ್ಟಾರ್ ಆಟಗಾರ ಭೇಟಿ ಆಗಿದ್ದಾರೆ. ಬಿಟೌನ್​​​​​ನ ಸುನೀಲ್ ಶೆಟ್ಟಿ ಅವರನ್ನು ಪಾಕ್​​​ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಭೇಟಿಯಾಗಿದ್ದಾರೆ.

ಸುನೀಲ್​​ ಶೆಟ್ಟಿ ಅವರನ್ನು ಅಫ್ರಿದಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಇದೇ ವೇಳೆ ಮಾಜಿ ಸ್ಟಾರ್ ಆಲ್​ರೌಂಡರ್ ಅಫ್ರಿದಿ ತಮ್ಮ ಇಬ್ಬರು ಹೆಣ್ಮಕ್ಕಳನ್ನು ಸುನೀಲ್​ ಶೆಟ್ಟಿಗೆ ಪರಿಚಯಿಸಿದ್ದಾರೆ. ಈ ವಿಡಿಯೋವನ್ನು ಶಾಹಿದ್ ಅಫ್ರಿದಿ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸುನಿಲ್ ಶೆಟ್ಟಿ ದುಬೈ ಪ್ರವಾಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಫ್ರಿದಿ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಇಬ್ಬರ ಭೇಟಿ ಬಗ್ಗೆ ಗೌರವ ಇದೆ. ಇದು ನೋಡಿ ಹೃದಯ ತುಂಬಿ ಬಂತು ಎಂದು ಫ್ಯಾನ್​​ ಪೇಜ್​​ನಲ್ಲಿ ಬರೆಯಲಾಗಿದೆ. ಮತ್ತೊಬ್ಬರು ಇಬ್ಬರನ್ನು ನೋಡಿ ತುಂಬಾ ಖುಷಿಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್ ಮಾಜಿ ಕ್ರಿಕೆಟಿಗನ ಭೇಟಿಯಾದ ಸುನಿಲ್ ಶೆಟ್ಟಿ; ಅಫ್ರಿದಿ ಮಗಳ ಜೊತೆ Cute Video

https://newsfirstlive.com/wp-content/uploads/2023/08/SUNIL_SHETTY.jpg

Load More