/newsfirstlive-kannada/media/post_attachments/wp-content/uploads/2025/04/sunil.jpg)
ಭರ್ಜರಿ ಬ್ಯಾಚುಲರ್ಸ್ ಮೂಲಕ ಸಖತ್ ಫೇಮಸ್ ಆಗುತ್ತಿದ್ದಾರೆ ಗಾಯಕ ಸುನೀಲ್ ಹಾಗೂ ಮಹಾನಟಿ ಖ್ಯಾತಿಯ ಅಮೃತ. ಹೌದು, ಇದೇ ಮೊದಲ ಸರಿಗಮಪ ಮತ್ತು ಭರ್ಜರಿ ಬ್ಯಾಚುಲರ್ಸ್ 2 ಶೋನ ಮಹಾಸಂಗಮ ನಡೆದಿದೆ. ಈ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಬಂದಿದ್ದಾರೆ.
ಇದನ್ನೂ ಓದಿ:ಸಖತ್ ಗ್ರ್ಯಾಂಡ್ ಆಗಿ ಅಮ್ಮನ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್; ಫೋಟೋಸ್ ಇಲ್ಲಿವೆ!
ಇನ್ನು, ವೇದಿಕೆ ಮೇಲೆ ಭರ್ಜರಿ ಬ್ಯಾಚುಲರ್ಸ್ 2 ಹಾಗೂ ಸರಿಗಮಪ ಸ್ಪರ್ಧಿಗಳು ಸಖತ್ ಮಜಾ ಮಾಡಿದ್ದಾರೆ. ಸರಿಗಮಪ ಸಿಂಗರ್ಗಳ ಜೊತೆಗೆ ಸೇರಿಕೊಂಡು ಹಾಡು ಹಾಡಿದ್ದಾರೆ. ಗಾಯಕರು ಭರ್ಜರಿ ಬ್ಯಾಚುಲರ್ಸ್ ಸ್ಪರ್ಧಿಗಳ ಜೊತೆಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಆದ್ರೆ, ಅದರಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಎಂದರೆ ಸುನೀಲ್ ಹಾಗೂ ಅಮೃತಾ ಡ್ಯಾನ್ಸ್. ಹೌದು, ಮಹಾಸಂಗಮದ ವೇದಿಕೆ ಮೇಲೆ ಎಲ್ಲರೂ ಶಾಕ್ ಆಗುವಂತೆ ಮಸ್ತ್ ಡ್ಯಾನ್ಸ್ ಮಾಡಿದೆ ಈ ಕ್ಯೂಟ್ ಜೋಡಿ. ಸುನೀಲ್ ಹಾಗೂ ಅಮೃತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಬಣ್ಣದ ಗೆಜ್ಜೆ ಸಿನಿಮಾದ ಸೂಪರ್ ಹಿಟ್ ಸಾಂಗ್ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಇನ್ನೂ, ವೇದಿಕೆ ಮೇಲೆ ಮಳೆಯನ್ನು ತರಿಸಿ ಅಚ್ಚರಿ ಮೂಡಿಸಿದೆ. ಅದರಲ್ಲೂ ಕ್ರೇಜಿ ಸ್ಟಾರ್ ರವಿಚಂದ್ರನ್ ಮುಂದೆಯೇ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸುನೀಲ್ ಹಾಗೂ ಅಮೃತಾ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೇ ಅರ್ಜುನ್ ಜನ್ಯ, ರಚಿತಾ ರಾಮ್, ಅನುಶ್ರೀ ಎಲ್ಲರೂ ಶಾಕ್ ಆಗಿ ಬಿದ್ದು ಬಿದ್ದು ನಕ್ಕಿದ್ದಾರೆ. ಡ್ಯಾನ್ಸ್ ಮುಗಿಯುತ್ತಿದ್ದಂತೆ ವೇದಿಕೆಗೆ ಬಂದ ಅನುಶ್ರೀ ಸುನೀಲಾ ಏನೋ ಮಾಡ್ಬಿಟ್ಟೆ ನೀನು ಎಂದಿದ್ದಾರೆ. ಆಗ ಅರ್ಜುನ್ ಜನ್ಯ ಅವರು ಟಾವೇಲ್ ತೆಗೆದುಕೊಂಡು ಬಂದು ಸುನೀಲ್ ಮಾನ ಮುಚ್ಚಿತ್ತಿದ್ದೇನೆ. ಇಷ್ಟು ದಿನ ಚೆನ್ನಾಗಿದ್ದಲ್ಲೋ ಏನೋ ಆಯ್ತು? ಮದುವೆ ಆಗ್ತೀಯಾ ಹೇಳೋ ಮಾಡಿಬಿಡ್ತೀನಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ