ಭಾರತಕ್ಕೆ ಗೆಲುವು ತಂದುಕೊಟ್ಟ ಸುನಿಲ್ ಚೆಟ್ರಿ
ಗೋಲು ಬಾರಿಸಿ ಹಂಚಿಕೊಂಡ್ರು ಸಿಹಿ ಸುದ್ದಿ
ಈ ಸಂತಸದ ಕ್ಷಣವನ್ನು ನೀವು ನೋಡಲೇ ಬೇಕು
ಭಾರತ ಪುಟ್ ಬಾಲ್ ತಂಡ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವನುವಾಟು ದೇಶವನ್ನು 1-0 ಅಂತರದಲ್ಲಿ ಸೋಲಿಸಿದೆ. ಸೋಮವಾರದಂದು ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ತಂಡದ ನಾಯಕ ಸುನಿಲ್ ಚೆಟ್ರಿ ಹೊಡೆದ ಗೋಲ್ ಈ ಜಯವನ್ನು ತಂದುಕಕೊಟ್ಟಿದೆ.
ಭಾರತ ತಂಡ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ 2ನೇ ಬಾರಿಗೆ ಗೆಲವು ಸಾಧಿಸಿದ್ದು, ಸುನಿಲ್ ಚೆಟ್ರಿ ಹೊಡೆದ ಗೋಲ್ ನೆರವಿನಿಂದ ಭಾರತಕ್ಕೆ ಜಯ ಲಭಿಸಿದೆ. ಈ ಪಂದ್ಯದಲ್ಲಿ ಗೋಲ್ ಹೊಡೆದ ಸಂತಸವನ್ನು ಸುನಿಲ್ ಚೆಟ್ರಿ ವಿಭಿನ್ನವಾಗಿ ತೋರಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿದೆ.
Sunil Chhetri 🐐❤️pic.twitter.com/dsmfzH59Zl
— Atanu Wadhwa (@atanu_74) June 12, 2023
ಗೋಲ್ ಬಾರಿಸಿದ ಸಂತಸದಲ್ಲಿ ಸುನಿಲ್ ಚೆಟ್ರಿ ತಮ್ಮ ಮಡದಿ ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ. ಪತ್ನಿ ಸೋನಮ್ ಬಸುರಿ ಆಗಿರುವುದನ್ನು ಸುನಿಲ್ ಚೆಟ್ರಿ ಜರ್ಸಿ ಒಳಗಡೆ ಹೊಟ್ಟೆಯ ಮುಂದೆ ಫುಟ್ಬಾಲ್ ಇಟ್ಟುಕೊಂಡು ತೋರಿಸಿದ್ದಾರೆ. ತಾನು ತಂದೆಯಾಗುತ್ತಿದ್ದೇನೆ ಎಂಬುದನ್ನು ಭಿನ್ನವಾಗಿ ಹೇಳಿಕೊಂಡಿದ್ದಾರೆ. ಸದ್ಯ ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಇನ್ನು ಗಂಡನ ಜಯವನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ ಪತ್ನಿ ಸೋನಮ್ ಎದ್ದು ನಿತ್ತು ಚಪ್ಪಾಳೆ ತಟ್ಟುತ್ತಾ ನಗು ಬೀರಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ