/newsfirstlive-kannada/media/post_attachments/wp-content/uploads/2025/06/RISHABH_PANTH.jpg)
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟಕ್ಕೆ ಬ್ಯಾಟಿಂಗ್​​ ಕಾಯ್ದುಕೊಂಡಿದ್ದ ರಿಷಭ್ ಪಂತ್​ ಭರ್ಜರಿ ಸೆಂಚುರಿ ಬಾರಿಸಿದ್ದಾರೆ. ಇದೇ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ರಿಷಭ್ ಪಂತ್​ರನ್ನ ಹಾಡಿಹೊಗಳಿದ್ದಾರೆ.
ಬಾರ್ಡರ್​ ಗವಾಸ್ಕರ್ ಟ್ರೋಫಿ ಸಂದರ್ಭದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್​​ ರಿಷಭ್ ಪಂತ್ ಅವರು ಕೆಟ್ಟ ಹೊಡೆತಗಳಿಂದ ಬೇಗನೇ ಔಟ್​ ಆಗಿ ಕ್ರೀಸ್ ಖಾಲಿ ಮಾಡುತ್ತಿದ್ದರು. ಇದರಿಂದ ಬೇಸರ ಮಾಡಿಕೊಂಡಿದ್ದ ಕಾಮೆಂಟರಿ ಮಾಡುತ್ತಿದ್ದ ಟೀಮ್ ಇಂಡಿಯಾದ ಮಾಜಿ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು ಆನ್​ಮೈಕ್​ನಲ್ಲೇ ಸ್ಟುಪಿಡ್​​..ಸ್ಟುಪಿಡ್..ಸ್ಟುಪಿಡ್​​ ಎಂದು ತೆಗಳಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಕೆಟ್ಟ ಪ್ರದರ್ಶನ ನೀಡಿ ಸರಣಿಯನ್ನು ಕೈ ಚೆಲ್ಲಿತ್ತು.
ಅವಾಗ ರಿಷಭ್ ಪಂತ್​ರನ್ನ ತೆಗಳಿದ್ದ ಸುನಿಲ್ ಗವಾಸ್ಕರ್ ಇದೀಗ ಹೊಗಳಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಅದ್ಭುತವಾದ ಸಿಕ್ಸರ್​ ಸಿಡಿಸಿ ಸೆಂಚುರಿ ಸಿಡಿಸುತ್ತಿದ್ದಂತೆ ರಿಷಭ್ ಪಂತ್ ಅವರ ಫ್ರಂಟ್​ಫ್ಲಿಪ್​ ಮಾಡಿದ್ದಾರೆ. ಪಂದ್ಯದಲ್ಲಿ ರಿಷಭ್​ ಪಂತ್​ ಪ್ರದರ್ಶನ ನೋಡಿ ಸೂಪರ್ಬ್​​​..ಸೂಪರ್ಬ್​..ಸೂಪರ್ಬ್ ಎಂದು ಸುನಿಲ್ ಗವಾಸ್ಕಾರ್ ಹೇಳಿದ್ದಾರೆ. ಇದರಿಂದ ಈ ಹಿಂದೆ ತಾವು ತೆಗಳಿದ್ದನ್ನ ಈಗ ಹಿಂದಕ್ಕೆ ತೆಗೆದುಕೊಂಡಂತೆ ಆಗಿದೆ ಎನ್ನಬಹುದು.
ರಿಷಭ್ ಪಂತ್​ ಮೊದಲ ಇನ್ನಿಂಗ್ಸ್​ನಲ್ಲಿ 146 ಬಾಲ್​ ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್​ಗಳಿಂದ ಸೆಂಚುರಿ​ ಬಾರಿಸಿದರು. ಇನ್ನೊಂದು ವಿಶೇಷತೆ ಎಂದರೆ 99 ರನ್​ ಆಗಿದ್ದಾಗ ರಿಷಭ್ ಪಂತ್​ ಬಿಗ್​ ಸಿಕ್ಸರ್​ ಬಾರಿಸಿ ಶತಕದ ಗಡಿ ದಾಟಿದರು. ಈ ಇನ್ನಿಂಗ್ಸ್​​​ನಲ್ಲಿ ಒಟ್ಟು 178 ಬಾಲ್​ಗಳನ್ನು ಆಡಿದ ಪಂತ್ 12 ಬೌಂಡರಿ, 6 ಸಿಕ್ಸರ್​ ಸಮೇತ 134 ರನ್​ಗಳಿಸಿ, ಎಲ್​ಬಿಗೆ ಬಲಿಯಾದರು.
ಆನ್​ಮೈಕ್​ನಲ್ಲೇ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಸೂಪರ್ಬ್​​..ಸೂಪರ್ಬ್​​​..ಸೂಪರ್ಬ್ ಎಂದು ಸುನಿಲ್ ಗವಾಸ್ಕಾರ್ ಅವರು ಹೊಗಳಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ರಿಷಭ್ ಪಂತ್​ಗೆ ವಿಶ್​ ಮಾಡುತ್ತಿದ್ದಾರೆ.
FROM STUPID, STUPID, STUPID TO SUPERB, SUPERB, SUPERB 🥹❤️
- Pant is a Hero in Test Cricket. pic.twitter.com/ZcWKuVX3tr
— Johns. (@CricCrazyJohns)
FROM STUPID, STUPID, STUPID TO SUPERB, SUPERB, SUPERB 🥹❤️
- Pant is a Hero in Test Cricket. pic.twitter.com/ZcWKuVX3tr— Johns. (@CricCrazyJohns) June 21, 2025
">June 21, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ