newsfirstkannada.com

RCB ಫ್ಯಾನ್ಸ್​​ಗೆ ಬಿಗ್​ ಶಾಕ್.. ಕೊಹ್ಲಿ IPL​ ಆಡಲ್ಲ ಎಂದ ಕ್ರಿಕೆಟ್​ ದಿಗ್ಗಜ!

Share :

Published February 27, 2024 at 4:16pm

Update February 27, 2024 at 4:22pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಆರಂಭಕ್ಕೆ ದಿನಗಣನೆ..!

  ಆರ್​ಸಿಬಿಗೆ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಬಗ್ಗೆಯೇ ಭಾರೀ ಚಿಂತೆ

  ವಿರಾಟ್​ ಕೊಹ್ಲಿ ಲಭ್ಯತೆ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟರ್​​

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಆರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್​ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಹೀಗಿರುವಾಗಲೇ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಮಾಜಿ ಕ್ಯಾಪ್ಟನ್​​ ವಿರಾಟ್​​​ ಕೊಹ್ಲಿಯದ್ದೇ ಟೆನ್ಶನ್​ ಶುರುವಾಗಿದೆ.

ಹೌದು, ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಫೆಬ್ರವರಿ 15ನೇ ತಾರೀಕು ಲಂಡನ್ನಿನ ಪ್ರತಿಷ್ಠತ ಆಸ್ಪತ್ರೆಯಲ್ಲೇ ಅನುಷ್ಕಾ ಶರ್ಮಾ ಗಂಡು ಮಗುವಿಗೆ ತಾಯಿ ಆಗಿದ್ದಾರೆ ಎಂದು ತಿಳಿದು ಬಂದಿತ್ತು. ಇನ್ನು, ತಂದೆಯಾಗುತ್ತಿದ್ದಂತೆ ಕೊಹ್ಲಿ ಇನ್‌ಸ್ಟಾ ಸೇರಿದಂತೆ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ವಿರಾಟ್‌ ಕೊಹ್ಲಿ ಸಂತಸದ ಕ್ಷಣಕ್ಕೆ ಟೀಮ್‌ ಇಂಡಿಯಾ ಸಹ ಆಟಗಾರರು ಶುಭ ಹಾರೈಸಿದ್ದರು.

ಇನ್ನು, ಅನುಷ್ಕಾ ಮಗುವಿಗೆ ಜನ್ಮ ನೀಡಿದ ಕಾರಣದಿಂದಲೇ ಕೊಹ್ಲಿ ಇಂಗ್ಲೆಂಡ್​​ ಟೆಸ್ಟ್​ ಸೀರೀಸ್​ನಿಂದ ಹಿಂದೆ ಸರಿದಿದ್ದರು. ಈಗ ಕೊಹ್ಲಿ ಐಪಿಎಲ್​ ಆಡೋದು ಕೂಡ ಡೌಟ್​ ಎನ್ನಲಾಗಿದೆ. ಈ ಸಂಬಂಧ ಟೀಮ್​ ಇಂಡಿಯಾದ ಮಾಜಿ ದಿಗ್ಗಜ ಸುನಿಲ್​ ಗವಾಸ್ಕರ್​ ಮಾತಾಡಿದ್ದಾರೆ.

ಕೊಹ್ಲಿ ಈ ಬಾರಿ ಆಡುವುದು ಡೌಟ್​​. ಅದಕ್ಕೆ ಹಲವು ಕಾರಣಗಳು ಇವೆ. ಬಹುಶಃ ಕೊಹ್ಲಿ ಈ ಐಪಿಎಲ್​ ಸೀಸನ್​​ ಆಡಲ್ಲ ಎಂದು ಸುನಿಲ್​ ಗವಾಸ್ಕರ್​​​ ಅಚ್ಚರಿ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಫ್ಯಾನ್ಸ್​​ಗೆ ಬಿಗ್​ ಶಾಕ್.. ಕೊಹ್ಲಿ IPL​ ಆಡಲ್ಲ ಎಂದ ಕ್ರಿಕೆಟ್​ ದಿಗ್ಗಜ!

https://newsfirstlive.com/wp-content/uploads/2023/07/Kohli_ABD.jpg

Load More