/newsfirstlive-kannada/media/post_attachments/wp-content/uploads/2023/10/Kohli_Rohit_123.jpg)
ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಬಗ್ಗೆ ದಿಗ್ಗಜ ಸುನೀಲ್​ ಗವಾಸ್ಕರ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೋಹಿತ್​ ಶರ್ಮಾ ಅವರಿಗೆ ಕೊಹ್ಲಿ ಅವರನ್ನು ಹೋಲಿಕೆ ಮಾಡೋ ಭರದಲ್ಲಿ ಸುನೀಲ್​ ಗವಾಸ್ಕರ್​ ನಾಲಿಗೆ ಹರಿಬಿಟ್ಟಿದ್ದಾರೆ.
ವಿರಾಟ್​ ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಪಗ್ನೆಂಟ್​ ಆಗಿದ್ದಾಗ ಟೀಮ್​ ಇಂಡಿಯಾ ಪರ ಆಡಲಿಲ್ಲ. 2 ಮಹತ್ವದ ಪಂದ್ಯಗಳನ್ನು ಭಾರತ ತಂಡದ ಪರ ಮಿಸ್​ ಮಾಡಿದ್ರು. ಆದ್ರೆ, ಕ್ಯಾಪ್ಟನ್​ ರೋಹಿತ್​ ಶರ್ಮಾ ರಿತಿಕಾ ಪ್ರಗ್ನೆಟ್​ ಆದ್ರೂ ಭಾರತ ತಂಡವನ್ನು ಪ್ರತಿನಿಧಿಸಿದ್ರು. ಸುಮಾರು 6 ತಿಂಗಳು ಭಾರತ ತಂಡವನ್ನು ರೋಹಿತ್​ ಮುನ್ನಡೆಸಿದ್ರು ಎಂದಿದ್ದಾರೆ ಸುನೀಲ್​ ಗವಾಸ್ಕರ್​.
ಈ ಹಿಂದೆ ಕೂಡ ಸುನೀಲ್​ ಗವಾಸ್ಕರ್ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಮೈದಾನದಲ್ಲೇ ಕೊಹ್ಲಿ ಭರ್ಜರಿ ಉತ್ತರ ನೀಡಿದ್ದರು. ಕೊಹ್ಲಿ ಪ್ರದರ್ಶನದ ಬಗ್ಗೆ ಸುನಿಲ್ ಗವಾಸ್ಕರ್ ದೊಡ್ಡ ಹೇಳಿಕೆ ಕಿಡಿ ಹಚ್ಚಿತ್ತು. ಕೋಟ್ಯಾಂತಾರ ಕೊಹ್ಲಿ ಅಭಿಮಾನಿಗಳು ಸುನಿಲ್ ಗವಾಸ್ಕರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಮೊದಲೇ ಕೊಹ್ಲಿ, ರೋಹಿತ್​ಗೆ ಆಗಲ್ಲ. ಈಗ ನೀವು ಇಬ್ಬರ ಮಧ್ಯೆ ತಂದಿಡೋ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಸುನೀಲ್​ ಗವಾಸ್ಕರ್​ ಕೊಟ್ಟಿದ್ದ ವಿವಾದಿತ ಹೇಳಿಕೆಯೇನು?
ಕೊಹ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದಾಗ ಸ್ಥಿರ ಪ್ರದರ್ಶನ ನೀಡಲಿಲ್ಲ. ಅಂದಿನ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೊಹ್ಲಿಗೆ ಅವಕಾಶ ನೀಡಿದರು. ಈ ಕಾರಣಕ್ಕಾಗಿ ಇಂದು ನಾವು ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದಿದ್ದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us