RCB ಸ್ಟಾರ್​ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಕ್ಯಾಪ್ಟನ್​ ಯಾರು? ಎಂದು ಬಿಚ್ಚಿಟ್ಟ ದಿಗ್ಗಜ

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಿದ ಆರ್​​ಸಿಬಿ ಮ್ಯಾನೇಜ್ಮೆಂಟ್​​
  • ಆರ್​ಸಿಬಿ ಮುಂದಿನ ಕ್ಯಾಪ್ಟನ್​ ಇವರೇ ಎಂದ ಮಾಜಿ ಕ್ರಿಕೆಟರ್​

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಎಲ್ಲಾ ಐಪಿಎಲ್​ ತಂಡಗಳು ಕೋಟಿ ಕೋಟಿ ಸುರಿದಿದ್ದವು. ಒಟ್ಟು 182 ಆಟಗಾರರಿಗೆ ಬರೋಬ್ಬರಿ 640 ಕೋಟಿ ಖರ್ಚು ಮಾಡಿದ್ದವು.

17 ಸೀಸನ್​​ಗಳಲ್ಲಿ ಐಪಿಎಲ್​​ ಕಪ್​ ಗೆಲ್ಲುವಲ್ಲಿ ಎಡವಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಈ ಬಾರಿ ಬಲಷ್ಠ ತಂಡ ಕಟ್ಟಿದೆ. ಐಪಿಎಲ್​​ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಟಾರ್​ ಆಟಗಾರರ ಹಿಂದೆ ಬೀಳದೆ ತಂಡಕ್ಕೆ ಅಗತ್ಯ ಇರೋ ಪ್ಲೇಯರ್ಸ್​​ ಖರೀದಿ ಮಾಡಿದೆ. ಈ ಮೂಲಕ ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟಿದೆ. ಆದರೆ, ಆರ್​​ಸಿಬಿ ಖರೀದಿಸಿದ ಆಟಗಾರರಲ್ಲಿ ಯಾರಿಗೂ ಕ್ಯಾಪ್ಟನ್​ ಆಗೋ ಸಾಮರ್ಥ್ಯ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲರ ಚಿತ್ತ ಕೊಹ್ಲಿ ಮೇಲೆ ನೆಟ್ಟಿದೆ.

ಮುಂದಿನ ಕ್ಯಾಪ್ಟನ್​ ಯಾರು ಎಂದು ಬಿಟ್ಟಿಟ್ಟ ಗವಾಸ್ಕರ್​

ಇನ್ನು, ಈ ಕುರಿತು ಮಾತಾಡಿದ ಸುನೀಲ್​ ಗವಾಸ್ಕರ್​ ಅವರು, ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಆಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆರ್​ಸಿಬಿ ನಾಯಕತ್ವಕ್ಕೆ ಬೇಕಾದಂತಹ ಆಟಗಾರನ್ನ ಖರೀದಿಗೆ ಮುಂದಾಗದಿರುವುದು ಇದಕ್ಕೆ ಕಾರಣ. ಕೊಹ್ಲಿ ನಾಯಕರಾಗುವುದು ಸ್ಪಷ್ಟವಾಗುತ್ತಿದೆ. ಕೊಹ್ಲಿ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಆರ್‌ಸಿಬಿ ತಂಡದ ಸಾರಥ್ಯ ವಹಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದರು.

ಈ ಹಿಂದೆ ಸ್ಟಾರ್‌ಗಳನ್ನೇ ನೆಚ್ಚಿಕೊಂಡು ಪ್ರಶಸ್ತಿ ಗೆಲ್ಲಲು ಮುಂದಾಗಿದ್ದ ಆರ್​​ಸಿಬಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ತನ್ನ ಪ್ಲಾನ್​ ಅನ್ನೇ ಬದಲಿಸಿದೆ. ಅಗ್ರೆಸ್ಸಿವ್​ ಆಗಿ ವರ್ತಿಸದೆ ಬರೋಬ್ಬರಿ 75 ಲಕ್ಷ ಜತೆಗೆ ಎರಡೂ RTM ಉಳಿಸಿಕೊಂಡು ಸಂಯಮದಿಂದ ಹರಾಜನ್ನು ಮುಕ್ತಾಯಗೊಳಿಸಿದೆ ಎಂದರು.

ಆರ್‌ಟಿಎಂನಲ್ಲಿ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜಾಕ್ಸ್ ಅವರನ್ನು ಆರ್‌ಸಿಬಿ ಪಡೆಯಲಿಲ್ಲ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆರ್‌ಸಿಬಿ ಹರಾಜಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ತಂಡದ ಸಮತೋಲನಕ್ಕೆ ಅಗತ್ಯವಿರೋ ಕೆಲಸ ಮಾಡಿದೆ ಎಂದರು.

ಇದನ್ನೂ ಓದಿ:ಮೆಗಾ ಆಕ್ಷನ್​​ನಲ್ಲಿ ಚಾಣಕ್ಷತನ ತೋರಿದ್ದು RCB ಮಾತ್ರ; ಬೆಂಗಳೂರು ಸ್ಟ್ರಾಟಜಿ ಬಗ್ಗೆ ಬಿಚ್ಚಿಟ್ಟ ದಿಗ್ಗಜ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment