ಮೆಗಾ ಆಕ್ಷನ್​​ನಲ್ಲಿ ಚಾಣಕ್ಷತನ ತೋರಿದ್ದು RCB ಮಾತ್ರ; ಬೆಂಗಳೂರು ಸ್ಟ್ರಾಟಜಿ ಬಗ್ಗೆ ಬಿಚ್ಚಿಟ್ಟ ದಿಗ್ಗಜ

author-image
Ganesh Nachikethu
Updated On
RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಎಲ್ಲಾ ಐಪಿಎಲ್​ ತಂಡಗಳು..!
  • ಒಟ್ಟು 182 ಆಟಗಾರರಿಗೆ ಬರೋಬ್ಬರಿ 640 ಕೋಟಿ ಖರ್ಚು

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗಿದಿದೆ. ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಎಲ್ಲಾ ಐಪಿಎಲ್​ ತಂಡಗಳು ಸೇರಿ ಒಟ್ಟು 182 ಆಟಗಾರರಿಗೆ ಬರೋಬ್ಬರಿ 640 ಕೋಟಿ ಸುರಿದಿವೆ.

ಕಳೆದ 17 ಸೀಸನ್​​ಗಳಲ್ಲಿ ಐಪಿಎಲ್​​ ಕಪ್​ ಗೆಲ್ಲುವಲ್ಲಿ ಎಡವಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಈ ಬಾರಿ ಬಲಷ್ಠ ತಂಡ ಕಟ್ಟಿದೆ. ಐಪಿಎಲ್​​ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಟಾರ್​ ಆಟಗಾರರ ಹಿಂದೆ ಬೀಳದೆ ತಂಡಕ್ಕೆ ಅಗತ್ಯ ಇರೋ ಪ್ಲೇಯರ್ಸ್​​ ಖರೀದಿ ಮಾಡಿದೆ. ಈ ಮೂಲಕ ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟಿದೆ. ಈ ಬಗ್ಗೆ ಈಗ ಟೀಮ್​ ಇಂಡಿಯಾದ ದಿಗ್ಗಜ ಸುನೀಲ್​ ಗವಾಸ್ಕರ್​ ಮಾತಾಡಿದ್ದಾರೆ.

ಆರ್​​ಸಿಬಿ ಹೊಸ ಸ್ಟ್ರಾಟಜಿ ಬಗ್ಗೆ ಏನಂದ್ರು ಗವಾಸ್ಕರ್​​?

ಇನ್ನು, ಈ ಕುರಿತು ಮಾತಾಡಿದ ಸುನೀಲ್​ ಗವಾಸ್ಕರ್​ ಅವರು, ಈ ಹಿಂದೆ ಸ್ಟಾರ್‌ಗಳನ್ನೇ ನೆಚ್ಚಿಕೊಂಡು ಪ್ರಶಸ್ತಿ ಗೆಲ್ಲಲು ಮುಂದಾಗಿದ್ದ ಆರ್​​ಸಿಬಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ತನ್ನ ಪ್ಲಾನ್​ ಅನ್ನೇ ಬದಲಿಸಿದೆ. ಅಗ್ರೆಸ್ಸಿವ್​ ಆಗಿ ವರ್ತಿಸದೆ ಬರೋಬ್ಬರಿ 75 ಲಕ್ಷ ಜತೆಗೆ ಎರಡೂ RTM ಉಳಿಸಿಕೊಂಡು ಸಂಯಮದಿಂದ ಹರಾಜನ್ನು ಮುಕ್ತಾಯಗೊಳಿಸಿದೆ ಎಂದರು.

ಆರ್‌ಟಿಎಂನಲ್ಲಿ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜಾಕ್ಸ್ ಅವರನ್ನು ಆರ್‌ಸಿಬಿ ಪಡೆಯಲಿಲ್ಲ ಎಂದು ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆರ್‌ಸಿಬಿ ಹರಾಜಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ತಂಡದ ಸಮತೋಲನಕ್ಕೆ ಅಗತ್ಯವಿರೋ ಕೆಲಸ ಮಾಡಿದೆ. ಹಲವು ಫ್ರಾಂಚೈಸಿಗಳು ಬೇಕಾಬಿಟ್ಟಿ ದುಡ್ಡು ಸುರಿದಿವೆ. ಸಾಕಷ್ಟು ಹಣವಿದ್ರೂ ಆರ್‌ಸಿಬಿ ತಾಳ್ಮೆ ವಹಿಸಿತು. ತಂಡಕ್ಕೆ ಅಗತ್ಯವಿರುವ ಸ್ಲಾಟ್​ಗಳಿಗೆ ಬೇಕಾದ ಆಟಗಾರರನ್ನ ಮಾತ್ರ ಖರೀದಿಸಿತು ಎಂದರು.

ಇದನ್ನೂ ಓದಿ:WTC ಫೈನಲ್​ಗೆ ಹೋಗಲು ಭಾರತಕ್ಕೆ ಇನ್ನೂ ಇದೆ ಅವಕಾಶ; ಎಷ್ಟು ಪಂದ್ಯಗಳು ಗೆಲ್ಲಬೇಕು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment