newsfirstkannada.com

ಭಾರತ ಗೆಲ್ಲೋಕೆ ದೊಡ್ಡ ಹೆಸರುಗಳು ಬೇಕಿಲ್ಲ: ವಿರಾಟ್ ಕೊಹ್ಲಿಗೆ ಮಾತಲ್ಲೇ ತಿವಿದ ಗವಾಸ್ಕರ್..!

Share :

Published March 4, 2024 at 9:42am

    ಇಂಗ್ಲೆಂಡ್ ಸರಣಿ ಗೆಲುವಿನ ಬಗ್ಗೆ ಗವಾಸ್ಕರ್​ ಮಾತು

    ಪರೋಕ್ಷವಾಗಿ ಸ್ಟಾರ್​​ಗಳ ವಿರುದ್ಧ ಅಸಮಾಧಾನ

    ನಾನ್​ ಇಲ್ದೇ ತಂಡ ಗೆಲ್ಲಲ್ಲ ಅನ್ನೋದು ಭ್ರಮೆ..!

ಟೀಮ್​ ಇಂಡಿಯಾ ಗೆಲ್ಲೋಕೆ ದೊಡ್ಡ ಹೆಸರುಗಳೇ ಬೇಕಿಲ್ಲ. ನಾನು​ ಇಲ್ದೇ ತಂಡ ಗೆಲ್ಲಲ್ಲ ಅನ್ಕೊಂಡಿದ್ರೆ ಅದು ಸುಳ್ಳು. ಈ ಮಾತನ್ನು ಹೇಳಿರೋದು ಲೆಜೆಂಡ್​​ ಸುನಿಲ್​ ಗವಾಸ್ಕರ್​. ಅಂದ್ಹಾಗೆ ಹೇಳಿದ್ದು ಯಾರಿಗೆ ಗೊತ್ತಾ? ವಿಶ್ವ ಕ್ರಿಕೆಟ್​ನ ಕಿಂಗ್​, ವಿರಾಟ್​ ಕೊಹ್ಲಿಗೆ. ಕೊಹ್ಲಿ ಬಗ್ಗೆ ಗವಾಸ್ಕರ್​ ಈ ಪರಿ ಟೀಕೆ ಮಾಡಿರೋದ್ಯಾಕೆ?

ಇಂಡೋ-ಇಂಗ್ಲೆಂಡ್​ ಅಂತಿಮ ಟೆಸ್ಟ್​ ಪಂದ್ಯಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಮಾರ್ಚ್​ 7 ರಿಂದ ಅಂತಿಮ ಟೆಸ್ಟ್​ ಪಂದ್ಯ ಶುರುವಾಗಲಿದ್ದು, ಉಭಯ ತಂಡಗಳು ಧರ್ಮಾಶಾಲಾ ತಲುಪಿವೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್​ ಇಂಡಿಯಾ, ಕೊನೆಯ ಪಂದ್ಯದಲ್ಲೂ ಗೆಲ್ಲೋ ಛಲದಲ್ಲಿದೆ.

ಆಂಗ್ಲರ ವಿರುದ್ಧ ಯುವ ಆಟಗಾರರ ಅಬ್ಬರ
ಇಂಗ್ಲೆಂಡ್​ ವಿರುದ್ಧದ ಈ ಸರಣಿಯಲ್ಲಿ ಟೀಮ್​ ಇಂಡಿಯಾ ತೀವ್ರ ಹಿನ್ನಡೆ ಅನುಭವಿಸಿತು. ಅನುಭವಿಗಳ ಅಲಭ್ಯತೆ ತಂಡವನ್ನು ತಂಡವನ್ನ ಕಾಡಿತು. ಪರಿಣಾಮ 4 ಪಂದ್ಯಗಳಲ್ಲಿ ನಾಲ್ವರು ಯುವ ಆಟಗಾರರು ಡೆಬ್ಯೂ ಮಾಡಿದ್ರು. ಸೀನಿಯರ್​​ಗಳ ಅಲಭ್ಯತೆಯಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಯಂಗ್​​ಸ್ಟರ್ಸ್​ ಸಾಲಿಡ್​ ಪರ್ಫಾಮೆನ್ಸ್​ ಕೂಡ ನೀಡಿದ್ರು. ಅಬ್ಬರಿಸಿದ ಯಂಗ್​ಸ್ಟರ್​ಗಳು ದಿಗ್ಗಜರ ಮನ ಗೆದ್ದಿದ್ದಾರೆ. ಈ ಯಂಗ್​ಸ್ಟರ್​ಗಳನ್ನೇ ಹೊಗಳೊ ಭರದಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಯಡವಟ್ಟು ಮಾಡಿಕೊಂಡಿರೋದು.

ಭಾರತ ಗೆಲ್ಲೋಕೆ ದೊಡ್ಡ ಹೆಸರುಗಳು ಬೇಕಿಲ್ಲ
ಇಂಗ್ಲೆಂಡ್​ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ ಯುವ ಆಟಗಾರರ ಪರ್ಫಾಮೆನ್ಸ್​ ಬಗ್ಗೆ ಸುನಿಲ್​ ಗವಾಸ್ಕರ್​, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಸಮಯದಲ್ಲಿ ಸರಣಿಯಿಂದ ಹೊರಗುಳಿದವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ. ವಿರಾಟ್​​ ಕೊಹ್ಲಿಗೆ ಹೇಳಿದ ಮಾತು ಎನ್ನಲಾಗ್ತಿದೆ.

‘ಸ್ಟಾರ್​​ಗಳನ್ನ ನೆಚ್ಚಿಕೊಂಡಿಲ್ಲ’
3 ವರ್ಷದ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್​ ಇಂಡಿಯಾದಲ್ಲಿ ದೊಡ್ಡ ಹೆಸರುಗಳು ಇರಲಿಲ್ಲ. ಆದರೂ ಭಾರತ, ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ತು. ಈಗ ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದಿದೆ. ನಾನು ಅದಕ್ಕೆ ಯಾವಾಗಲೂ ಹೇಳೋದು ತಂಡಕ್ಕೆ ದೊಡ್ಡ ಹೆಸರುಗಳು ಬೇಕಿಲ್ಲ. ಹೆಸರು ಮಾಡಿದ ಯಾರಾದರೂ ನಾನು ಇಲ್ಲದೇ ಟೀಮ್​ ಇಂಡಿಯಾ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು. ನೀವು ಇದ್ದರೂ, ಇಲ್ಲದಿದ್ದರೂ ಗೆಲ್ಲುತ್ತೆವೆ ಅಂತಾ ಈ 2 ಸರಣಿಗಳು ಉತ್ತರ ಕೊಟ್ಟಿವೆ-ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

ವಿರಾಟ್​​ ಕೊಹ್ಲಿಗೆ ಟಾಂಗ್​ ಕೊಟ್ರಾ ಗವಾಸ್ಕರ್.​.?
2021ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೊಹ್ಲಿ, ಟೀಮ್​ ಇಂಡಿಯಾ ಫುಲ್​ ಟೈಮ್​ ಕ್ಯಾಪ್ಟನ್​ ಆಗಿದ್ರು. ಆ ಪ್ರವಾಸದ ಮೊದಲ ಟೆಸ್ಟ್​ನಲ್ಲಿ 36 ರನ್​ಗಳಿಗೆ ಆಲೌಟ್​​ ಆಗಿದ್ದ ಟೀಮ್​ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಈ ವೇಳೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ, ಸೋಲಿನ ಬೆನ್ನಲ್ಲೇ ಸರಣಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿದ್ರು. ಕೊಹ್ಲಿ ಅಲಭ್ಯತೆಯಲ್ಲಿ ತಂಡವನ್ನ ಮುನ್ನಡೆಸಿದ್ದ ರಹಾನೆ, ಕಠಿಣ ಸವಾಲುಗಳ ನಡುವೆ ಸರಣಿ ಗೆಲ್ಲಿಸಿದ್ರು.

2ನೇ ಮಗುವಿನ ಜನನ, ಇಂಗ್ಲೆಂಡ್​ ಸರಣಿಗೆ ಕೊಹ್ಲಿ ಅಲಭ್ಯ
ಹಾಲಿ ನಡೀತಿರೋ ಇಂಗ್ಲೆಂಡ್​ ಟೆಸ್ಟ್​ ಸರಣಿಯ ಆರಂಭಕ್ಕೂ ಮುನ್ನ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಂಡವನ್ನ ತೊರೆದರು. ಈ ಸರಣಿಯಲ್ಲೂ ಕೊಹ್ಲಿಯ ಜೊತೆಗೆ ಇನ್ನೂ ಹಲ ಸ್ಟಾರ್​ಗಳ ಅಲಭ್ಯತೆ ಟೀಮ್​ ಇಂಡಿಯಾವನ್ನ ಕಾಡಿತು. ಯುವ ಆಟಗಾರರ ಅದ್ದೂರಿ ಪರ್ಫಾಮೆನ್ಸ್​​ನಿಂದ ಒಂದು ಪಂದ್ಯ ಮೊದಲೇ ಟೀಮ್​ ಇಂಡಿಯಾ ಸರಣಿ ಜಯಿಸಿದೆ.

ಅಂದಿನ ಆಸ್ಟ್ರೇಲಿಯಾ ಪ್ರವಾಸ ಹಾಗೂ ಈಗಿನ ಇಂಗ್ಲೆಂಡ್​​ ವಿರುದ್ಧದ ಸರಣಿ ಎರಡರಲ್ಲೂ ವಿರಾಟ್​​ ಕೊಹ್ಲಿ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾ ಸರಣಿ ಗೆದ್ದು ಬೀಗಿದೆ. ಇದರ ನಡುವೆ ಗವಾಸ್ಕರ್ ​ಗೆಲ್ಲೋಕೆ ದೊಡ್ಡ ದೊಡ್ಡ ಸ್ಟಾರ್​​ಗಳನ್ನ ನಾವು ನೆಚ್ಚಿಕೊಂಡಿಲ್ಲ. ನಾನು ಇಲ್ಲದೇ ತಂಡ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು ಎಂದಿದ್ದಾರೆ. ಈ ಮಾತು ಪರೋಕ್ಷವಾಗಿ ವಿರಾಟ್​​ ಕೊಹ್ಲಿಯನ್ನೆ ಗುರಿ ಮಾಡಿ ಹೇಳಿದಂತಿದೆ.
ಗವಾಸ್ಕರ್​ ನೀಡಿರುವ ಹೇಳಿಕೆ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್​ ವಲಯದಲ್ಲಂತೂ ಪರ-ವಿರೋಧದ ಚರ್ಚೆ ಜೋರಾಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಮುಂದೆ ಈ ವಿವಾದ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ ಗೆಲ್ಲೋಕೆ ದೊಡ್ಡ ಹೆಸರುಗಳು ಬೇಕಿಲ್ಲ: ವಿರಾಟ್ ಕೊಹ್ಲಿಗೆ ಮಾತಲ್ಲೇ ತಿವಿದ ಗವಾಸ್ಕರ್..!

https://newsfirstlive.com/wp-content/uploads/2024/03/KOHLI-9.jpg

Load More