newsfirstkannada.com

‘IPL ಅಲ್ಲ, ದೇಶ ಮುಖ್ಯ’- ಈ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದ ಗವಾಸ್ಕರ್!

Share :

Published March 1, 2024 at 6:18pm

Update March 1, 2024 at 6:20pm

    ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​ ವಿರುದ್ಧ ಬಿಸಿಸಿಐ ಕ್ರಮ!

    ಬಿಸಿಸಿಐ ಕ್ರಮ ಸರಿಯಾಗಿದೆ ಎಂದ ದಿಗ್ಗಜ ಸುನಿಲ್​ ಗವಾಸ್ಕರ್​​

    ಐಪಿಎಲ್​ ಅಲ್ಲ, ಭಾರತೀಯ ಕ್ರಿಕೆಟ್​ ಮುಖ್ಯ ಎಂದ ದಿಗ್ಗಜ

ರಣಜಿ ಕ್ರಿಕೆಟ್​ ಆಡದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ಇಶಾನ್​​ ಕಿಶನ್​​, ಶ್ರೇಯಸ್​ ಅಯ್ಯರ್​ ಅವರನ್ನು ಬಿಸಿಸಿಐ ಗುತ್ತಿಗೆಯಿಂದ ತೆಗೆದಿದ್ದು ಸರಿಯಾಗಿದೆ ಎಂದು ದಿಗ್ಗಜ ಕ್ರಿಕೆಟರ್​​ ಸುನಿಲ್​ ಗವಾಸ್ಕರ್​​ ಹೇಳಿದ್ದಾರೆ.

ಈ ಸಂಬಂಧ ಮಾತಾಡಿದ ಸುನಿಲ್​ ಗವಾಸ್ಕರ್​​, ಬಿಸಿಸಿಐನ ಈ ಕ್ರಮ ಸರಿಯಾಗಿದೆ. ಪ್ರತಿಯೊಬ್ಬರೂ ರಣಜಿ ಟ್ರೋಫಿ ಕ್ರಿಕೆಟ್ ಆಡಬೇಕು. ಐದು ದಿನದ ಆಟ ರಿಯಲ್​ ಕ್ರಿಕೆಟ್​​. ಐಪಿಎಲ್​ಗೆ ಬಹಳ ಆದ್ಯತೆ ನೀಡಬಾರದು. ದೇಸಿ ಕ್ರಿಕೆಟ್​ ಆಡೋದು ಭಾರತ ತಂಡದ ಆಟಗಾರರಿಗೆ ತುಂಬಾ ಒಳ್ಳೆಯದು ಎಂದರು.

ಫ್ರೀ ಇದ್ದಾಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ರಣಜಿ ಕ್ರಿಕೆಟ್​ ಆಡಲಿ. ನಾವು ರಾಜ್ಯಕ್ಕೆ ಆಡಿದ ಮೇಲೆ ದೇಶಕ್ಕೆ ಆಡಲು ಅವಕಾಶ ಸಿಕ್ಕಿದ್ದು, ಅದೇ ಸರಿಯಾದ ಕ್ರಮ. ಸೆಲೆಕ್ಷನ್​​ಗೆ ಕೇವಲ ಐಪಿಎಲ್​​ ಪ್ರದರ್ಶನವನ್ನು ಪರಿಗಣಿಸಬಾರದು ಎಂದರು.

ಬಿಷನ್ ಸಿಂಗ್ ಬೇಡಿ, ಮದನ್ ಲಾಲ್, ಸುರೀಂದರ್ ಅಮರನಾಥ್, ಮೊಹಿಂದರ್ ಅಮರನಾಥ್, ಚೇತನ್ ಚೌಹಾಣ್, ಸಂದೀಪ್ ಪಾಟೀಲ್, ಕರ್ಸನ್ ಘವ್ರಿ, ರವಿಶಾಸ್ತ್ರಿ ಅವರಂತಹ ಆಟಗಾರರೇ ರಣಜಿ ಕ್ರಿಕೆಟ್​ ಆಡುತ್ತಿದ್ದರು. ಈಗಿನ ಯುವ ಆಟಗಾರರಿಗೆ ಏನಾಗಿದೆ? ಎಂದು ಗೊತ್ತಾಗುತ್ತಿಲ್ಲ. ಯಾರು ಆಡಲ್ಲವೋ ಅವರ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳಬೇಕು. ಐಪಿಎಲ್​ ಅಲ್ಲ, ಇಂಡಿಯನ್​ ಕ್ರಿಕೆಟ್​ ಮುಖ್ಯ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘IPL ಅಲ್ಲ, ದೇಶ ಮುಖ್ಯ’- ಈ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದ ಗವಾಸ್ಕರ್!

https://newsfirstlive.com/wp-content/uploads/2024/02/Test-Team-India.jpg

Load More