/newsfirstlive-kannada/media/post_attachments/wp-content/uploads/2025/06/PANT-2.jpg)
- ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ
- ಭಾರತದ ಗೆಲುವಿಗೆ ಇವತ್ತು ಬೇಕಿದೆ 10 ವಿಕೆಟ್
- ಎರಡನೇ ಇನ್ನಿಂಗ್ಸ್ನಲ್ಲೂ ಪಂತ್ ಸ್ಫೋಟಕ ಶತಕ
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲೂ ಉಪನಾಯಕ ರಿಷಬ್ ಪಂತ್ ಭರ್ಜರಿ ಶತಕ ಬಾರಿಸಿ ಸಂಭ್ರಮಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಗ್ಯಾಲರಿಯಲ್ಲಿದ್ದ ಲೆಜೆಂಡ್​ ಸುನೀಲ್​ ಗವಾಸ್ಕರ್​​ ಪಲ್ಟಿ ಹೊಡೆದು ಸಂಭ್ರಮಿಸುವಂತೆ ಕೈಸನ್ನೆ ಮಾಡಿ ಮನವಿ ಮಾಡಿದ್ದಾರೆ.
ಆದರೆ ಪಂತ್​ ಮುಂದಿನ ಬಾರಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಗವಾಸ್ಕರ್​ ಮನವಿ ಮಾಡಿದ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ಹಿಂದೆ ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅದಕ್ಕೆ ಕೋಪಿಸಿಕೊಂಡಿದ್ದ ಗವಾಸ್ಕರ್​, ಕಾಮೆಂಟರಿ ಮಾಡುತ್ತ ಪಂತ್​ರನ್ನು ಸ್ಟುಪಿಡ್ ಅಂತಾ ನಿಂದಿಸಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ಫಾರ್ಮ್​ನಲ್ಲಿ ಕಾಣ್ತಿರುವ ಪಂತ್​ರ ಬೆನ್ನು ತಟ್ಟುತ್ತಿದ್ದಾರೆ ಗವಾಸ್ಕರ್.
ಇದನ್ನೂ ಓದಿ: KL ರಾಹುಲ್​, ಪಂತ್ ಶತಕ ಬಾರಿಸಿದರೂ ಸಂಕಷ್ಟ.. ಕುತೂಹಲದಲ್ಲಿ ಟೆಸ್ಟ್​ನ ಕೊನೆಯ ದಿನ!
2ನೇ ಇನ್ನಿಂಗ್ಸ್​​ನಲ್ಲೂ ಬೊಂಬಾಟ್​ ಇನ್ನಿಂಗ್ಸ್​ ಕಟ್ಟಿದ ಪಂತ್​ 130 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಒಟ್ಟು 140 ಬಾಲ್ ಎದುರಿಸಿರುವ ಪಂತ್, ಮೂರು ಸಿಕ್ಸರ್, 15 ಬೌಂಡರಿ ಬಾರಿಸಿದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 178 ಬಾಲ್​ನಲ್ಲಿ 6 ಸಿಕ್ಸರ್​ನೊಂದಿಗೆ 12 ಬೌಂಡರಿ ಬಾರಿಸಿ 134 ರನ್​ಗಳಿಸಿದ್ದಾರೆ. ಇನ್ನು ಮೊದಲ ಟೆಸ್ಟ್​ನ ಕೊನೆಯ ದಿನದ ಪಂದ್ಯ ಇಂದು ನಡೆಯಲಿದೆ. ಭಾರತದ ಗೆಲುವಿಗೆ 10 ವಿಕೆಟ್​ಗಳ ಅಗತ್ಯ ಇದೆ. ಇಂಗ್ಲೆಂಡ್ ಗೆಲ್ಲಬೇಕು ಅಂದರೆ 350 ರನ್​ಗಳ ಅಗತ್ಯ ಇದೆ.
ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಮೊದಲ ಟೆಸ್ಟ್​.. ಆರಂಭದಲ್ಲೇ ಎಚ್ಚರಿಕೆಯ ಹೆಜ್ಜೆಯಿಟ್ಟ ಇಂಗ್ಲೆಂಡ್..!
Sunil Gavaskar talking about his gesture when Rishabh Pant scored the hundred. pic.twitter.com/ydiVtkVQ5V
— Mufaddal Vohra (@mufaddal_vohra) June 23, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ