Advertisment

ನಿನ್ನೆ ಪಂತ್ ಆಟಕ್ಕಿಂತ ಗವಾಸ್ಕರ್​​​ ಹೆಚ್ಚು ಚರ್ಚೆ.. ಅಸಲಿಗೆ ಕಾಮೆಂಟರಿಯಲ್ಲಿ ಆಗಿದ್ದೇನು..? VIDEO

author-image
Ganesh
Updated On
ನಿನ್ನೆ ಪಂತ್ ಆಟಕ್ಕಿಂತ ಗವಾಸ್ಕರ್​​​ ಹೆಚ್ಚು ಚರ್ಚೆ.. ಅಸಲಿಗೆ ಕಾಮೆಂಟರಿಯಲ್ಲಿ ಆಗಿದ್ದೇನು..? VIDEO
Advertisment
  • ಅಂದು ಎಲ್ಲರಿಂದ ಟೀಕೆ.. ಇಂದು ಹೊಗಳಿಕೆ..!
  • ಲೀಡ್ಸ್​ನಲ್ಲಿ ರಿಷಭ್​​ ಪಂತ್ 'ಕಿಲ್ಲರ್' ಇನ್ನಿಂಗ್ಸ್
  • ಇಂಗ್ಲೆಂಡ್​ಗೆ ಶತಕದ ಪಂಚ್​ ಕೊಟ್ಟ ಪಂತ್

ಲೀಡ್ಸ್​ ಟೆಸ್ಟ್ ಪಂದ್ಯದ 2ನೇ ದಿನ ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ದಿನದಾಟದ ಆರಂಭದಲ್ಲೇ ಇಂಗ್ಲಿಷ್ ಬೌಲರ್​ಗಳ ಬೆವರಿಳಿಸಿದ ಪಂತ್, ಫೆಂಟಾಸ್ಟಿಕ್ ಶತಕ ಸಿಡಿಸಿದ್ರು. ಪಂತ್ ಬ್ಯಾಟಿಂಗ್​​ಗೆ ಮನಸೋತ ಕ್ರಿಕೆಟ್ ಅಭಿಮಾನಿಗಳು, ವಿಕೆಟ್ ಕೀಪರ್ ಬ್ಯಾಟರ್​​ಗೆ ಬಹುಪರಾಕ್ ಹೇಳಿದ್ದಾರೆ.

Advertisment

‘ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್’

ಕಳೆದ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ನೋಡಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ‘ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್’ ಎಂದಿದ್ದರು. ಇದೀಗ ಅವರೇ ಟ್ರಂಪ್ ಅವರ ಅಭಿಮಾನಿಯಾಗಿದ್ದಾರೆ. ಲೀಡ್ಸ್​​ ಟೆಸ್ಟ್​ ಪಂದ್ಯದ 2ನೇ ದಿನ, ರಿಷಭ್ ಪಂತ್ ಬ್ಯಾಟಿಂಗ್ ನೋಡಿದ ಗವಾಸ್ಕರ್, ಸೂಪರ್ಬ್.. ಸೂಪರ್ಬ್.. ಸೂಪರ್ಬ್ ಎಂದು ಬಣ್ಣಿಸಿದ್ದಾರೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಟ್ಟ ಹೊಡೆತಗಳಿಗೆ ಕೈಹಾಕಿ ವಿಕೆಟ್ ಒಪ್ಪಿಸುತ್ತಿದ್ದ ರಿಷಭ್ ಪಂತ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಪಂತ್ ಒಬ್ಬ ಬೇಜವಾಬ್ದಾರಿ ಬ್ಯಾಟ್ಸ್​ಮನ್. ಪಂತ್ ಸಂದರ್ಭಕ್ಕೆ ತಕ್ಕ ಆಟ ಆಡಲ್ಲ. ಪಂತ್ ಕಂಡೀಷನ್ಸ್ ರೀಡ್ ಮಾಡಲ್ಲ! ತಂಡ ಒತ್ತಡಕ್ಕೆ ಸಿಲುಕಿದಾಗ ಪಂತ್ ಕೈಹಿಡಿಯಲ್ಲ. ಪಂತ್​ಗೆ ತನ್ನ ವಿಕೆಟ್ ಬೆಲೆ ಗೊತ್ತಿಲ್ಲ. ಪಂತ್​​​ ಮೆಚ್ಯೂರ್ಡ್​​ ಅಲ್ಲ ಅಂದಿದ್ರು. ಇದೀಗ ಪಂತ್​​, ತನ್ನ ಬ್ಯಾಟಿಂಗ್​ನಿಂದ ಎಲ್ಲರಿಗೂ ಪಂಚ್ ನೀಡಿದ್ದಾರೆ.​​

ಇದನ್ನೂ ಓದಿ: ಕಿಂಗ್ ಕೊಹ್ಲಿ ಬ್ರ್ಯಾಂಡ್​ ವ್ಯಾಲ್ಯೂ ಮತ್ತಷ್ಟು ದುಬಾರಿ.. ಈ ಏರಿಕೆ ಹಿಂದಿದೆ ಸ್ಪೆಷಲ್ ರೀಸನ್​​!

Advertisment

publive-image

ಅಂದು ಟೀಕೆ.. ಇಂದು ಹೊಗಳಿಕೆ..

ಪಂತ್ ಆಟವನ್ನ ಈಗ, ಎಲ್ಲರೂ ಕೊಂಡಾಡ್ತಿದ್ದಾರೆ. ಪಂತ್ ಗೇಮ್ ಸೆನ್ಸ್​ ಬಗ್ಗೆ ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾ ಉಪನಾಯಕನ ಬಗ್ಗೆ ಈಗ, ಜವಾಬ್ದಾರಿಯುತ ಮಾತುಗಳನ್ನ ಆಡುತ್ತಿದ್ದಾರೆ. ಲೀಡ್​​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಪಂತ್ ಆಟ ನೋಡಿ ಎಲ್ಲರೂ, ಫೆಂಟಾಸ್ಟಿಕ್ ಎನ್ನುತ್ತಿದ್ದಾರೆ. ಇಂಗ್ಲೆಂಡ್ ಬೌಲರ್​ಗಳ ವಿರುದ್ಧ ಪಂತ್ ಆಟ ಮತ್ತು ಆರ್ಭಟಕ್ಕೆ, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಲೀಡ್ಸ್​ನಲ್ಲಿ ಪಂತ್ 'ಕಿಲ್ಲರ್' ಇನ್ನಿಂಗ್ಸ್

12 ಬೌಂಡರಿ 6 ಭರ್ಜರಿ ಸಿಕ್ಸರ್​ಗಳನ್ನ ಸಿಡಿಸಿದ ರಿಷಭ್ ಪಂತ್, ಟೆಸ್ಟ್ ಕ್ರಿಕೆಟ್​​ನಲ್ಲಿ 7ನೇ ಶತಕ ಸಿಡಿಸಿದ್ರು. ನಿಜ ಹೇಳಬೇಕು ಅಂದ್ರೆ ಪಂತ್ ಬಾರಿಸಿದ ಒಂದೊಂದು ಬೌಂಡ್ರಿ, ಸಿಕ್ಸರ್​ಗಳು ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಕೇವಲ 146 ಎಸೆತಗಳಲ್ಲಿ ಶತಕ ಸಿಡಿಸಿದ ಪಂತ್, ಲೀಡ್ಸ್​ನಲ್ಲಿ ಮಿಂಚಿದ್ರು.

ನಾಯಕನ ಜೊತೆ ಉಪನಾಯಕನ ಅಬ್ಬರ

ನಾಯಕ ಶುಭ್ಮನ್ ಗಿಲ್ ಮತ್ತು ಉಪನಾಯಕ ರಿಷಭ್ ಪಂತ್, ಬೆನ್ ಸ್ಟೋಕ್ಸ್ ಪಡೆಯನ್ನ 50 ಓವರ್​ಗಳ ಕಾಲ ವಿಕೆಟ್ ನೀಡದೆ ಕಾಡಿದ್ರು. 4ನೇ ವಿಕೆಟ್​​ಗೆ ಗಿಲ್ ಮತ್ತು ಪಂತ್,​​​​​ 301 ಎಸೆತಗಳನ್ನ ಎದುರಿಸಿ 209 ರನ್​ ಜೊತೆಯಾಟವಾಡಿದ್ರು. ಇಂಗ್ಲಿಷ್ ಬೌಲರ್​ಗಳಿಗೆ ನರಕ ದರ್ಶನ ಮಾಡಿಸಿದ್ರು.

Advertisment

ಇದನ್ನೂ ಓದಿ: IND vs ENG: ಪೋಪ್​ ಕ್ಯಾಚ್​ ಬಿಟ್ಟು ಬೆಲೆ ತೆತ್ತ ಟೀಮ್​ ಇಂಡಿಯಾ.. ಬೂಮ್ರಾ ಏಕಾಂಗಿ ಹೋರಾಟ..

ಪಂತ್​ಗೆ ಇಂಗ್ಲೆಂಡ್​​​​ ಲಕ್ಕಿ

ಲೀಡ್ಸ್​ ಟೆಸ್ಟ್​ ಪಂದ್ಯದಲ್ಲಿ ಶತಕ ಸಿಡಿಸಿದ ಪಂತ್, ಇಂಗ್ಲೆಂಡ್​​ನಲ್ಲಿ ಇದೇ ಮೊದಲ ಬಾರಿ ಸೆಂಚುರಿ ಸಿಡಿಸಿಲ್ಲ. 2018ರ ದ ಓವೆಲ್ ಟೆಸ್ಟ್​ ಪಂದ್ಯದಲ್ಲಿ ಪಂತ್, 114 ರನ್​ ದಾಖಲಿಸಿದ್ರು. 2022ರ ಬರ್ಮಿಂಗ್​ಹ್ಯಾಮ್ ಟೆಸ್ಟ್​ ಪಂದ್ಯದಲ್ಲಿ ಪಂತ್, 146 ರನ್​​ ಸಿಡಿಸಿದ್ರು. ಆಂಗ್ಲರ ನಾಡಲ್ಲೇ 3 ಟೆಸ್ಟ್ ಶತಕ ಸಿಡಿಸಿರುವ ಪಂತ್​​​ಗೆ, ಇಂಗ್ಲೆಂಡ್​​​ ಲಕ್ಕಿ ಕಂಟ್ರಿ.

ಪಂತ್ ಶತಕಕ್ಕೆ ಧೋನಿ ದಾಖಲೆ ಪೀಸ್.. ಪೀಸ್

2ನೇ ದಿನ ರಿಷಭ್ ಪಂತ್ ಸಿಡಿಸಿದ ಶತಕ ಕೇವಲ ಶತಕವಾಗಿರಲಿಲ್ಲ. ಅದೊಂದು ದಾಖಲೆಯ ಮತ್ತು ಅವಿಸ್ಮರಣೀಯ ಶತಕವಾಗಿತ್ತು. ಇದುವರೆಗೂ ಭಾರತದ ಯಾವುದೇ ವಿಕೆಟ್​​​ ಕೀಪರ್ ಮಾಡದ ಸಾಧನೆಯನ್ನ ಪಂತ್ ಮಾಡಿದ್ರು. ಟೀಮ್ ಇಂಡಿಯಾ ಮಾಜಿ ನಾಯಕ ಹಾಗೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ಕ್ರಿಕೆಟ್​​ನಲ್ಲಿ 6 ಶತಕ ಸಿಡಿಸಿದ್ರು. ಆದ್ರೀಗ ಪಂತ್, ಧೋನಿ ದಾಖಲೆಯನ್ನ ಪೀಸ್.. ಪೀಸ್ ಮಾಡಿದ್ದಾರೆ. ಪಂತ್​​​​​​​​, ಏಷ್ಯಾದ ದಿ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

Advertisment

ರಿಷಭ್ ಪಂತ್ ಸಿಡಿದ್ರೆ ರೆಕಾರ್ಡ್ ಬುಕ್ಸ್​ ಶೇಖ್ ಆಗುತ್ತೆ. ದಾಖಲೆಗಳು ಉಡೀಸ್ ಆಗುತ್ತೆ. ಡೇರಿಂಗ್, ಡ್ಯಾಶಿಂಗ್, ಟ್ಯಾಲೆಂಟೆಡ್, ಅಗ್ರೆಸಿವ್ ಪಂತ್ ಆರ್ಭಟ ಹೀಗೆ ಮುಂದುವರೆಯಲಿ. ದಿನೇ ದಿನೇ ಹೊಸ ದಾಖಲೆಗಳು ಬರೆಯುವಂತಾಗಲಿ ಅನ್ನೋದೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ.

ಇದನ್ನೂ ಓದಿ: ರಿಷಭ್ ಪಂತ್ ಈಗಲೂ ಡೇಟಿಂಗ್​ನಲ್ಲಿ ಇದ್ದಾರಾ.. ವಿಕೆಟ್​ ಕೀಪರ್​ನ​​ ಗರ್ಲ್​​ಫ್ರೆಂಡ್​ ಆಸ್ತಿ ಎಷ್ಟಿದೆ?

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment