900 ಗಂಟೆ ಸಂಶೋಧನೆ, 150ಕ್ಕೂ ಹೆಚ್ಚು ಪ್ರಯೋಗ.. 9 ತಿಂಗಳ ಸುನಿತಾ ವಿಲಿಯಮ್ಸ್​ ಏನು ಮಾಡಿದರು?

author-image
Ganesh
Updated On
900 ಗಂಟೆ ಸಂಶೋಧನೆ, 150ಕ್ಕೂ ಹೆಚ್ಚು ಪ್ರಯೋಗ.. 9 ತಿಂಗಳ ಸುನಿತಾ ವಿಲಿಯಮ್ಸ್​ ಏನು ಮಾಡಿದರು?
Advertisment
  • ಜೂನ್ 5, 2024ರಂದು ISSಗೆ ಹೋಗಿದ್ದ ಸುನಿತಾ ವಿಲಿಯಮ್ಸ್
  • 8 ದಿನದ ಪ್ರವಾಸಕ್ಕೆ ಅಂತಾ ಹೋಗಿದ್ದ ಸುನಿತಾ ವಿಲಿಯಮ್ಸ್
  • ತಾಂತ್ರಿಕ ಸಮಸ್ಯೆಯಿಂದ ಬಾಹ್ಯಾಕಾಶದಲ್ಲಿ ಲಾಕ್ ಆಗಿದ್ದ ಗಗನಯಾನಿ

ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜೂನ್ 5, 2024ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅವರ ಪ್ರವಾಸ ಕೇವಲ 8 ದಿನಗಳದ್ದಾಗಿತ್ತು. ಆದರೆ ಅವರು ಪ್ರಯಾಣಿಸಿದ್ದ ಬೋಯಿಂಗ್​ ಸ್ಟಾರ್​ಲೈನರ್​ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ 9 ತಿಂಗಳ ಕಾಲ ಸುನಿತಾ ವಿಲಿಯಮ್ಸ್ ಅಲ್ಲಿಯೇ ಇರಬೇಕಾಯಿತು. ಇದೀಗ ಅವರು ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ.

9 ತಿಂಗಳ ಅವಧಿಯಲ್ಲಿ ಏನು ಮಾಡಿದರು?

ಸುನಿತಾ ವಿಲಿಯಮ್ಸ್ 9 ತಿಂಗಳ ಸುದೀರ್ಘ ಅವಧಿಯಲ್ಲಿ ವಿವಿಧ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆ ಮತ್ತು ಶುಚಿಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಫುಟ್ಬಾಲ್ ಮೈದಾನದ ಗಾತ್ರದಲ್ಲಿರುವ ಈ ನಿಲ್ದಾಣಕ್ಕೆ ನಿರಂತರ ನಿರ್ವಹಣೆ ಅಗತ್ಯ. ಅವರು ಅಲ್ಲಿರುವ ಹಳೆಯ ಉಪಕರಣಗಳನ್ನು ಬದಲಾಯಿಸಲು ಸಹಾಯ ಮಾಡಿದರು. ಜೊತೆಗೆ ಒಂದಷ್ಟು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು.

62 ಗಂಟೆ ಕಾಲ ಕಾಲ 9 ಬಾರಿ ಬಾಹ್ಯಾಕಾಶ ನಡಿಗೆ

NASA ನೀಡಿರುವ ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ. 150ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಹೊರಗೆ 62 ಗಂಟೆ 9 ನಿಮಿಷಗಳನ್ನು ಕಳೆದಿದ್ದಾರೆ. 9 ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.

ಇದನ್ನೂ ಓದಿ:ಸೇಫ್ ಲ್ಯಾಂಡಿಂಗ್, ರಕ್ಷಣೆಯೂ ಆಯ್ತು.. ಮುಂದಿನ 45 ದಿನ ಸುನಿತಾ ವಿಲಿಯಮ್ಸ್ ಏನೆಲ್ಲ ಮಾಡಬೇಕು?

publive-image

ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದ ಹಲವಾರು ಪ್ರಮುಖ ಸಂಶೋಧನಾ ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಿದರು. ಗುರುತ್ವಾಕರ್ಷಣೆಯು ಬಾಹ್ಯಾಕಾಶದಲ್ಲಿನ Fluid systems ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದರ ಮೇಲೂ ಸಂಶೋಧನೆ ಮಾಡಿದರು. ಬಾಹ್ಯಾಕಾಶದಲ್ಲಿ ವಾಟರ್​ ರಿಕವರಿ ಮತ್ತು Fuel cellಗಳ ಹೊಸ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಿದರು.

ಜೈವಿಕ ಪೌಷ್ಟಿಕಾಂಶ (Biological nutrition) ಪ್ರಾಜೆಕ್ಟ್​ನಲ್ಲೂ ಸುನಿತಾ ಭಾಗಿಯಾದರು ಎಂದು ನಾಸಾ ಹೇಳಿದೆ. ಇದರಲ್ಲಿ ವಿಜ್ಞಾನಿಗಳು ಬ್ಯಾಕ್ಟಿರಿಯಾ ಬಳಸಿಕೊಂಡು ಪೋಷಕಾಂಶಗಳನ್ನು ಉತ್ಪಾದಿಸುವ ವಿಧಾನಗಳನ್ನು ಅಧ್ಯಯನ ಮಾಡಿದ್ದಾರೆ. ಈ ಯೋಜನೆಯು ಗಗನಯಾತ್ರಿಗಳಿಗೆ ತಾಜಾ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಕೈಬೀಸಿ ಸಂಭ್ರಮಿಸಿದ ಸುನಿತಾ ವಿಲಿಯಮ್ಸ್.. ಭೂಮಿಗೆ ಬರಮಾಡಿಕೊಂಡ ಕ್ಷಣ ಹೇಗಿತ್ತು..? Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment