ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿದ ವಿಲಿಯಮ್ಸ್; ಕಷ್ಟಗಳ ಬಗ್ಗೆ ಪತ್ರಕರ್ತರಿಗೆ ಕೊಟ್ಟ ಮಾಹಿತಿ ಏನು?

author-image
Ganesh
Updated On
ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿದ ವಿಲಿಯಮ್ಸ್; ಕಷ್ಟಗಳ ಬಗ್ಗೆ ಪತ್ರಕರ್ತರಿಗೆ ಕೊಟ್ಟ ಮಾಹಿತಿ ಏನು?
Advertisment
  • ಬಾಹ್ಯಾಕಾಶ ಕೇಂದ್ರದಿಂದ ಸುನಿತಾ ವಿಲಿಯಮ್ಸ್ ಸುದ್ದಿಗೋಷ್ಟಿ
  • ಭೂಮಿಯಿಂದ 420KM ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರ
  • ಭೂಮಿಗೆ ಮರಳುವ ಬಗ್ಗೆ ಗಗನಯಾನಿಗಳು ಹೇಳಿದ್ದೇನು?

ಸುನಿತಾ ವಿಲಿಯಮ್ಸ್​ ಮತ್ತು ಬೂಚ್​ ವಿಲ್ಮೋರ್​ ಭೂಮಿಯಿಂದ 420 ಕಿಲೋ ಮೀಟರ್ ದೂರದಲ್ಲಿರುವ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಭೂಮಿಗೆ ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.

publive-image

ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು..?

ಬೋಯಿಂಗ್ ವಿಮಾನ ಟೇಕ್ ಆಫ್ ಆಗುವುದು ಮತ್ತು ಕಕ್ಷೆಯಲ್ಲಿ ಹಲವಾರು ತಿಂಗಳು ಕಳೆಯುವುದು ಕಷ್ಟಕರವಾಗಿದೆ. ಆದರೆ ನಾವು ಬಾಹ್ಯಾಕಾಶದಲ್ಲಿ ಕಳೆಯಲು ಇಷ್ಟಪಡ್ತೇವೆ. ಇದು ನಮ್ಮ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್​; ಗಗನಯಾತ್ರಿಗೆ ಆಗಿದ್ದೇನು?

publive-image

ಸುನಿತಾ ವಿಲಿಯಮ್ಸ್ ಹೇಳಿದ್ದೇನು?

ಇದು ನನಗೆ ಖುಷಿ ನೀಡುವ ಸ್ಥಳ. ನಾನು ಬಾಹ್ಯಾಕಾಶದಲ್ಲಿ ಇರಲು ಇಷ್ಟ ಪಡ್ತೇನೆ. ನಾನು ನನ್ನ ತಾಯಿ ಜೊತೆಗಿನ ಅಮೂಲ್ಯ ಸಮಯವನ್ನು ಕಳೆದುಕೊಂಡಿದ್ದೇನೆ. ಈ ನೋವು ಇದೆ. ನಾವು ಪರೀಕ್ಷಕರು, ಅದು ನಮ್ಮ ಕೆಲಸ. ನಾವು ಸಮಸ್ಯೆಗಳನ್ನು ಎದುರಿಸಿ, ಸ್ಟಾರ್​ಲೈನರ್ ಮೂಲಕ ಸುರಕ್ಷಿತವಾಗಿ ಮರಳಿ ಇಳಿಯಲು ಬಯಸಿದ್ದೇವೆ. ನೀವು ಪುಟಗಳನ್ನು ತಿರುಗಿಸಬೇಕು, ಮುಂದಿನ ಅವಕಾಶಕ್ಕಾಗಿ ನಾವು ನೋಡಬೇಕು. ಬಾಹ್ಯಾಕಾಶ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿರಲಿಲ್ಲ. ನಾವಿಬ್ಬರು ಮೊದಲು ಕೂಡ ಇಲ್ಲಿಗೆ ಬಂದಿದ್ದೇವು. ಕೆಲ ವರ್ಷಗಳ ಹಿಂದೆ ಬಾಹ್ಯಾಕಾಶ ನಿಲ್ದಾಣದಲ್ಲಿ ಎರಡು ದೀರ್ಘಾವಧಿಯಲ್ಲಿ ತಂಗಿದ್ದೇವು ಎಂದಿದ್ದಾರೆ.

publive-image

ವಿಲ್ಮೋರ್ ಏನಂದ್ರು..?

ಬಾಹ್ಯಾಕಾಶ ನೌಕೆಯ ಪೈಲಟ್ ಆಗಿ ಇಡೀ ಮಾರ್ಗದಲ್ಲಿ ಕೆಲವು ಕಠಿಣ ಸಮಯಗಳಿವೆ. ನೀವು ಇದನ್ನು ನೋಡಲು ಬಯಸುವುದಿಲ್ಲ. ಸ್ಟಾರ್​ಲೈನರ್ ಮೊದಲ ಪರೀಕ್ಷಾ ಪೈಲಟ್ ಆಗಿ ಸುಮಾರು ಒಂದು ವರ್ಷ ಅಲ್ಲಿ ಉಳಿಯಲು ನಿರೀಕ್ಷಿಸರಲಿಲ್ಲ. ಹಿಂತಿರಗಲು ಸಮಸ್ಯೆಗಳಿಂದ ವಿಳಂಬವಾಗಿದೆ ಎಂದರು.

ಇದನ್ನೂ ಓದಿ: ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ಇದೇ ವೇಳೆ ವಿಲ್ಮೋರ್ ತಮ್ಮ ಕಿರಿಯ ಮಗಳ ಪ್ರೌಢಶಾಲೆಯ ಅಂತಿಮ ವರ್ಷಕ್ಕೆ ಹಾಜರಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಲ್ಮೋರ್ ಮತ್ತು ವಿಲಿಯಮ್ಸ್​ ಬಾಹ್ಯಾಕಾಶ ನಿಲ್ದಾಣದ ಸದಸ್ಯರಾಗಿದ್ದಾರೆ. ದಿನ ನಿತ್ಯದ ನಿರ್ವಹಣೆ ಮತ್ತು ಪ್ರಯೋಗಗಳನ್ನು ನಿರ್ವಹಿಸುತ್ತಿದ್ದಾರೆ. ಕೆಲವೇ ವಾರಗಳಲ್ಲಿ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದ ಕಮಾಂಡ್ ತೆಗೆದುಕೊಳ್ಳುತ್ತಾರೆ ಎಂದು ವಿಲ್ಮೋರ್​​ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜನರಿಗೆ ಧನ್ಯವಾದ

ಇದೇ ವೇಳೆ ಗಗನಯಾತ್ರಿಗಳು ಜನರಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಸುರಕ್ಷತೆಗಾಗಿ ಅನೇಕರು ಪ್ರಾರ್ಥನೆ, ಕಾಳಜಿ ತೋರಿಸ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಅವರನ್ನು ಪ್ರಶಂಸಿಸುತ್ತೇವೆ. ನಿಮ್ಮ ಹಾರೈಕೆ, ಪ್ರಾರ್ಥನೆ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಮಾಡಿದೆ. ನಾವು ಮನೆಯಿಂದ ದೂರವಾಗಿ ಕಳೆದುಕೊಳ್ಳುವ ಎಲ್ಲವನ್ನೂ ನಿಭಾಯಿಸಲು ಸಹಾಯ ಮಾಡಿತು. ನವೆಂಬರ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ. ನಾಗರಿಕರು ತಮ್ಮ ಕರ್ತವ್ಯವನ್ನು ಪೂರೈಸಬೇಕು ಎಂದು ಒತ್ತಿ ಹೇಳಿದ್ದಾರೆ.

publive-image

ಕಳೆದ ಜೂನ್ 5ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. 2025ರ ಫೆಬ್ರವರಿ ಮಧ್ಯದ ದಿನಗಳಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಭೂಮಿಗೆ ಮರಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್​ಡೇಟ್ ಕೊಟ್ಟ NASA

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment