Sunita williams ಎಷ್ಟು ಗಂಟೆಗೆ ಭೂಮಿಗೆ ಬಂದಿಳಿಯುತ್ತಾರೆ? ನೇರ ಪ್ರಸಾರ ವೀಕ್ಷಣೆ ಹೇಗೆ..?

author-image
Ganesh
Updated On
ಸುನಿತಾ ಒಬ್ಬರೇ ಅಲ್ಲ; ವರ್ಷಗಟ್ಟಲೇ ಬಾಹ್ಯಾಕಾಶದಲ್ಲೇ ಉಳಿದು ದಾಖಲೆ ಬರೆದ ಗಗನಯಾನಿಗಳು ಇವರು..!
Advertisment
  • ಸುನಿತಾ ವಿಲಿಯಮ್ಸ್, ವಿಲ್ಮೋರ್​​​ ಬರುವಿಕೆಗೆ ಕೌಂಟ್​ಡೌನ್
  • ಈ ಇಬ್ಬರು ಗಗನಯಾತ್ರಿಗಳು ಬಂದಿಯುವ ಸ್ಥಳ ಯಾವುದು?
  • 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಯಾತ್ರಿಗಳು

ಕ್ಷಣಗಣನೆ.. ಕೋಟಿ ಕೋಟಿ ಭಾರತೀಯರು ಮಾತ್ರವಲ್ಲದೇ ಇಡೀ ವಿಶ್ವವೇ ಈ ಕ್ಷಣಕ್ಕಾಗಿ ಕಾದು ಕುಳಿತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲೇ ಲಾಕ್ ಆಗಿರುವ ಸುನಿತಾ ವಿಲಿಯಮ್ಸ್ (Sunita williams) ಹಾಗೂ ಬಚ್ ವಿಲ್ಮೋರ್ (Butch Wilmore) ಭೂಮಿಗೆ ಆಗಮಿಸುವ ಕ್ಷಣ ಸನ್ನಿಹಿತವಾಗಿದೆ.

ಎಷ್ಟು ಗಂಟೆಗೆ Splash Down Off?

ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ಗಗನಯಾತ್ರಿಗಳು ಇಂದು ಅಮೆರಿಕಕ್ಕೆ ಬಂದಿಳಿದರೆ ಭಾರತ ಇದನ್ನು ಕಾಣಲು ನಾಳೆ ಬೆಳಗ್ಗೆವರೆಗೆ ಕಾಯಬೇಕಿದೆ. ಅಮೆರಿಕ ಕಾಲಮಾನದಂತೆ ಇಂದು ಸಂಜೆ 5:57ಕ್ಕೆ ಭೂಮಿಗೆ ಬಂದಿಳಿಯಲಿದ್ದಾರೆ. ಇದು ಭಾರತೀಯ ಕಾಲಮಾನಕ್ಕೆ ಹೋಲಿಸಿದರೆ 9 ಗಂಟೆ ವ್ಯತ್ಯಾಸವಿದೆ. ಅಂದರೆ ಬುಧವಾರ ಬೆಳಗಿನ ಜಾವ 3 ಗಂಟೆ 27 ನಿಮಿಷಕ್ಕೆ ಬರಲಿದ್ದಾರೆ. NASA ನೀಡಿರುವ ಮಾಹಿತಿ ಪ್ರಕಾರ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ (Florida coast) ಬಂದಿಳಿಯಲಿದ್ದಾರೆ. ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರುತ್ತಿರುವ ರೋಚಕ ಕಾರ್ಯಚರಣೆಯನ್ನು ನೀವು ಕೂಡ ಕಣ್ತುಂಬಿಕೊಳ್ಳಬಹುದು. NASA ತನ್ನ ವೆಬ್​ಸೈಟ್​ನಲ್ಲಿ ನೇರ ಪ್ರಸಾರ ಮಾಡಲಿದೆ.

ಇದನ್ನೂ ಓದಿ: ಭೂಮಿಗೆ ಬಂದ ಮೇಲೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಆರೋಗ್ಯ ಹೇಗಿರಲಿದೆ.. ಯಾವ್ಯಾವ ಸಮಸ್ಯೆಗಳು ಕಾಡುತ್ತವೆ?

publive-image

ಜೂನ್ 5, 2024 ರಂದು ಕೇವಲ ಎಂಟು ದಿನದ ಅದ್ಯಯನಕ್ಕೆಂದು ಬಾಹ್ಯಾಕಾಶಕ್ಕೆ ತೆರಳಿದ್ದ ವಿಲಿಯಮ್ಸ್ ಹಾಗೂ ವಿಲ್ಮೋರ್​ ಅಲ್ಲಿಯೇ ಸಿಲುಕಿಕೊಂಡಿದ್ದರು. ಬೋಯಿಂಗ್ ಸ್ಟಾರ್​ಲೈನರ್​ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಬೇಕಾದ ಪರಿಸ್ಥಿತಿ ಬಂದಿತ್ತು. ಇದೀಗ ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸ್ಸಾಗುತ್ತಿದ್ದಾರೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರಲು ಕ್ಷಣಗಣನೆ; ಭಾರತ ಮೂಲದ ಗಗನಯಾತ್ರಿ ನಡೆದು ಬಂದ ಹಾದಿ ಹೇಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment