ಭೂಮಿಗೆ ಬಂದ ಮೇಲೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಆರೋಗ್ಯ ಹೇಗಿರಲಿದೆ.. ಯಾವ್ಯಾವ ಸಮಸ್ಯೆಗಳು ಕಾಡುತ್ತವೆ?

author-image
Bheemappa
Updated On
45 ದಿನ ನಿಲ್ಲಲು ಆಗಲ್ಲ, ದೇಹದ ಮೂಳೆ ಸವೆತ.. ನಾಳೆಯಿಂದ ಸುನಿತಾ ಬದುಕು ಹೇಗಿರುತ್ತೆ?
Advertisment
  • ಭೂಮಿಗೆ ಬಂದ ಮೇಲೆ ಇಬ್ಬರಿಗೂ ನಡೆಯುವುದಕ್ಕೆ ಆಗೋದಿಲ್ಲ, ಗೊತ್ತಾ!
  • ಗಗನಯಾತ್ರಿಗಳು ಭೂಮಿಗೆ ಬಂದ ಮೇಲೆ ಈ ಸಮಸ್ಯೆಗಳು ಕಾಡುತ್ತವೆ
  • 9 ತಿಂಗಳಿಂದ ಬಾಹ್ಯಾಕಾಶದಲ್ಲಿ ಹಾರಾಡಿಕೊಂಡು ಸಮಯ ಕಳೆದಿದ್ದಾರೆ

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಈ ಇಬ್ಬರು ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಒಡ್ಡಿಕೊಳ್ಳುವುದಕ್ಕೆ ಸಮಸ್ಯೆ ಆಗಲಿದೆ. ಇದರಿಂದ ವಿಲಿಯಮ್ಸ್, ವಿಲ್ಮೋರ್ ಇಬ್ಬರು ದೈಹಿಕ ತೊಂದರೆಗಳನ್ನ ಎದುರಿಸಲಿದ್ದಾರೆ.

ಭೂಮಿಯ ಗುರುತ್ವಾಕರ್ಷಣೆ ಹಾಗೂ ಬಾಹ್ಯಾಕಾಶದ ಗುರುತ್ವಾಕರ್ಷಣೆಯಲ್ಲಿ ತುಂಬಾ ವ್ಯತ್ಯಾಸ ಇರಲಿದೆ. ಭೂಮಿಯ ವಾತವರಣಕ್ಕೆ ಒಗ್ಗಿಕೊಳ್ಳುವಾಗ ಇಬ್ಬರು ಗಗನಯಾತ್ರಿಗಳು ಆರೋಗ್ಯದ ಸಮಸ್ಯೆಗೆ ಒಳಗಾಗುವರು. ವಿಲಿಯಮ್ಸ್, ವಿಲ್ಮೋರ್ ಇಬ್ಬರ ಪಾದಗಳು ಮಗುವಿನ ಪಾದಗಳಂತೆ ಆಗಿರುತ್ತವೆ. ಇಷ್ಟು ದಿನ ತೇಲಾಡಿಕೊಂಡೆ ಇದ್ದಿದ್ರಿಂದ ಭೂಮಿಗೆ ಬಂದಾಗ ಅದೇ ಅನುಭವವಾಗುತ್ತೆ.

ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ. ಅದು ಸಹಜ ಸ್ಥಿತಿಗೆ ಬರಬೇಕು ಎಂದರೆ ಸಮಯ ತೆಗೆದುಕೊಳ್ಳುತ್ತದೆ. ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಇದನ್ನು ವ್ಯಾಯಾಮದ ಮೂಲಕ ಮರಳಿ ಪಡೆಯಬಹುದು. ಮತ್ತೆ ಸಾಮಾನ್ಯರಂತೆ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ತಕ್ಕಂತೆ ಇಬ್ಬರು ನಿತ್ಯ ಆರೋಗ್ಯದ ನಿಯಮಗಳನ್ನು ಪಾಲಿಸಲೇಬೇಕು.

ಇದನ್ನೂ ಓದಿ:‘ಒಂಟಿಯಾಗಿ ಕುಳಿತು ದುಃಖಿಸಲು ಇಷ್ಟ ಪಡಲ್ಲ’.. BCCI ರೂಲ್ಸ್​ ವಿರುದ್ಧ ವಿರಾಟ್ ಕೊಹ್ಲಿ ಗರಂ!

publive-image

ಬಾಹ್ಯಾಕಾಶದಲ್ಲಿ ಮೈಕ್ರೋ ಗ್ರ್ಯಾವಿಟಿ ಇರುವುದರಿಂದ ದೇಹದ ತೂಕ ಕಳೆದುಕೊಳ್ಳುತ್ತಾರೆ.
ದೇಹದ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಳೆದುಕೊಂಡಿರುತ್ತಾರೆ
ಕಣ್ಣಿನ ರೆಟಿನಾ ಭಾಗಕ್ಕೂ ಸಮಸ್ಯೆ ಆಗುತ್ತದೆ
ಶ್ವಾಸ ಕೋಶ, ಮೂತ್ರಪಿಂಡ, ಹೃದಯ, ಮೆದುಳಿಗೂ ಕೂಡ ಸಮಸ್ಯೆ ಬರಬಹುದು
ಪಿಸಿಕಲಿ, ಮೆಂಟಲಿ, ಸೈಕಾಲಾಜಿಕಲಿ ಅವರಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ

NASA ಮಾಡುವುದು ಏನು?

ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲಿದೆ.

ನೆಲದ ಮೇಲೆ ನಿಧಾನವಾಗಿ ನಡೆಯಲು ಸಹಾಯ
ಮೊದಲು ಮೃದುವಾದ ಮೇಲ್ಮೈ ಜಾಗದಲ್ಲಿ ನಡೆಸುವುದು
ಕಾಲುಗಳನ್ನು ಬಲಪಡಿಸಲು ವ್ಯಾಯಾಮ ಮಾಡಿಸುವುದು
ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ ನೀಡುವುದು
ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು
ಪುನರ್ವಸತಿ ಹಲವಾರು ವಾರಗಳವರೆಗೆ ನಡೆಯುವುದು
ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment