ಗುಡ್​​ನ್ಯೂಸ್​.. ಬಾಹ್ಯಾಕಾಶಕ್ಕೆ ಗುಡ್​ಬೈ ಹೇಳಿ, ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್

author-image
Ganesh
Updated On
ಶಿಶುವಿನ ಪಾದಗಳು! ಬಾಹ್ಯಾಕಾಶದಿಂದ ಬಂದಾಗ ಮಕ್ಕಳಂತೆ ನಡೆಯಲು ಪ್ರಾರಂಭಿಸೋದು ಏಕೆ?
Advertisment
  • ISSನಿಂದ ಸುನಿತಾ ವಿಲಿಯಮ್ಸ್​ಗೆ ವಿದಾಯ
  • ಭೂಮಿಗೆ ಬರ್ತಿದ್ದಂತೆ ವೇಗ ತಡೆಯಲು 4 ಪ್ಯಾರಾಚೂಟ್
  • 150ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಕ್ಕೆ ಅವಕಾಶ

8 ದಿನಗಳ ಕಾಲ ನಡೆಯಬೇಕಿದ್ದ ಗಗನಯಾನದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸುನಿತಾ ವಿಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದರು. NASA ಮತ್ತು SpaceX ಅವಿರತ ಶ್ರಮದಿಂದ ಕೊನೆಗೂ ಬಾಹ್ಯಾಕಾಶ ನಿಲ್ದಾಣದಿಂದ ಇಬ್ಬರು ಗಗನಯಾನಿಗಳು ಹೊರ ಬಂದಿದ್ದಾರೆ.

ಎಲಾನ್ ಮಸ್ಕ್ ಅವರ ಸ್ಪೇಸ್​ ಎಕ್ಸ್​ನ ಕ್ರೂ ಡ್ರ್ಯಾಗನ್ ನೌಕೆ ಮೂಲಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್​ ಭೂಮಿಯತ್ತ ವಾಪಸ್​ ಆಗ್ತಿದ್ದಾರೆ. ಅಮೆರಿಕ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ವಾಪಸ್ ಆಗುತ್ತಿದ್ದಾರೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!

publive-image

4 ಪ್ಯಾರಾಚೂಟ್​ ಸಮುದ್ರಕ್ಕೆ ಇಳಿಸಲಾಗ್ತಿದೆ..

ಬೆಳಗ್ಗೆ ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ಪ್ರವೇಶಿಸುತ್ತಿದ್ದಂತೆ ಪ್ರಯಾಣ ಪ್ರಾರಂಭಿಸಲು ಸೂಟ್ ಧರಿಸಿದರು. ಕ್ರೂ-10 ಗಗನಯಾತ್ರಿಗಳು ಹ್ಯಾಚ್ ಕ್ಲೋಸ್ (closing the hatch) ಮಾಡುವ ಮೂಲಕ ವಿದಾಯ ಹೇಳಿದರು. ಅನ್​ಡಾಕ್ ಬೆನ್ನಲ್ಲೇ ಬಾಹ್ಯಾಕಾಶ ನೌಕೆಯು ಅದರ ಡಿಸೆಂಟ್ ಪೇಸ್​ (Descent phase) ಪ್ರವೇಶಿಸಲು ISSನಿಂದ ನ್ಯಾವಿಗೇಟ್ ಪಡೆಯಿತು. ಒಮ್ಮೆ ಅದು ಭೂಮಿಯ ವಾತಾವರಣ ಪ್ರವೇಶಿಸಿದ ನಂತರ ಬಾಹ್ಯಾಕಾಶ ನೌಕೆಯು ತನ್ನ ಇಳಿಯುವಿಕೆಯನ್ನು ಮತ್ತಷ್ಟು ನಿಧಾನಗೊಳಿಸಲು 4 ಪ್ಯಾರಾಚೂಟ್‌ ಆನ್​ ಮಾಡಲಾಗುತ್ತದೆ.
ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತ ಇಳಿಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಾರತೀಯ ಕಾಲಮಾನ 3:27 AM ಕ್ಕೆ ಸ್ಪ್ಲಾಶ್‌ಡೌನ್ ಆಫ್ ನಿರೀಕ್ಷಿಸಲಾಗಿದೆ. ವಿಲಿಯಮ್ಸ್, ವಿಲ್ಮೋರ್ ಇಳಿದ ನಂತರ ಸ್ಪೇಸ್‌ಎಕ್ಸ್​ನ ಚೇತರಿಕೆ ಹಡಗು ಸಿದ್ಧವಾಗಿರುತ್ತದೆ.

ಇದನ್ನೂ ಓದಿ: ಭಗವದ್ಗೀತೆ, ಗಣೇಶನ ಮೂರ್ತಿ.. ಬಾಹ್ಯಾಕಾಶಕ್ಕೆ ಹೋಗುವಾಗ ಸುನೀತಾ ಏನೆಲ್ಲಾ ತೆಗೆದುಕೊಂಡು ಹೋಗಿದ್ರು?

publive-image

150ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗ

ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ಪರೀಕ್ಷಾ ಹಾರಾಟದ ಭಾಗವಾಗಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಜೂನ್ 5, 2024 ರಂದು ಬಾಹ್ಯಾಕಾಶಕ್ಕೆ ಉಡಾವಣೆ ಆಗಿದ್ದರು. ಪ್ರೊಪಲ್ಷನ್ ಸಿಸ್ಟಮ್​ನಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರು ಭೂಮಿಗೆ ಮರಳುವಿಗೆ ವಿಳಂಬ ಆಗಿತ್ತು. 2024 ಸೆಪ್ಟೆಂಬರ್​ನಲ್ಲಿ ಸುನಿತಾ ವಿಲಿಯಮ್ಸ್​ ಕೊಂಡೊಯ್ದಿದ್ದ ನೌಕೆ, ಯಾವುದೇ ಸಿಬ್ಬಂದಿ ಇಲ್ಲದೇ ಭೂಮಿಗೆ ವಾಪಸ್ ಆಗಿತ್ತು. ಸುನಿತಾ ವಿಲಿಯಮ್ಸ್ ಅನಿರೀಕ್ಷಿತ ಬಾಹ್ಯಾಕಾಶ ವಿಸ್ತರಣೆಯು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿದ್ದಾಗ 150 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳ ಕೊಡುಗೆಗೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಮಗಳು ಮನೆಗೆ ಬರುತ್ತಿರೋ ಸಂಭ್ರಮ.. ಸುನಿತಾ ಪೂರ್ವಜರ ಗ್ರಾಮದಲ್ಲಿ ಹೇಗಿದೆ ಖುಷಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment