/newsfirstlive-kannada/media/post_attachments/wp-content/uploads/2024/12/SUNITA-WILLIAMS-3.jpg)
ಸುನೀತಾ ವಿಲಿಯಮ್ಸ್​, ನಾಸಾದ ಗಗನಯಾತ್ರಿ. ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿರಲಿಲ್ಲ. ಸದ್ಯ ಅವರು ಫೆಬ್ರವರಿ 2025ರವರೆಗೆ ಬಾಹ್ಯಾಕಾಶದಿಂದ ವಾಪಸ್ ಬರಲಿದ್ದಾರೆ. ಜೂನ್ 5 ರಂದು ಭೂಮಿಯಿಂದ ತೆರಳಿದ ಸುನೀತಾ ವಿಲಿಯಮ್ಸ್​ ಇನ್ನೂ ಕೂಡ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಇದ್ದಾರೆ.
ಸದ್ಯ ತಮ್ಮ ಎಲ್ಲ ಖುಷಿಯ ಕ್ಷಣಗಳನ್ನು, ಪರಿಸ್ಥಿತಿಯನ್ನು ಫೋಟೋಗಳ ಮೂಲಕ ನಾಸಾಗೆ ಕಳುಹಿಸುತ್ತಿದ್ದಾರೆ ಸುನೀತಾ ವಿಲಿಯಮ್ಸ್. ದೀಪಾವಳಿಯ ಸಮಯದಲ್ಲಿ ಸ್ಪೇಸ್ ಸ್ಟೇಷನ್​ನಲ್ಲಿ ತಾವು ದೀಪಾವಳಿಯನ್ನು ಆಚರಿಸಿ ಅದರ ಫೋಟೋಗಳನ್ನು ನಾಸಾಗೆ ಕಳುಹಿಸಿಕೊಟ್ಟಿದ್ದರು ಸುನೀತಾ ವಿಲಿಯಮ್ಸ್.
Another day, another sleigh ⛄️❄️@NASA_Astronauts Don Pettit and Suni Williams pose for a fun holiday season portrait while speaking on a ham radio inside the @Space_Station's Columbus laboratory module. pic.twitter.com/C1PtjkUk7P
— NASA's Johnson Space Center (@NASA_Johnson)
Another day, another sleigh ⛄️❄️@NASA_Astronauts Don Pettit and Suni Williams pose for a fun holiday season portrait while speaking on a ham radio inside the @Space_Station's Columbus laboratory module. pic.twitter.com/C1PtjkUk7P
— NASA's Johnson Space Center (@NASA_Johnson) December 16, 2024
">December 16, 2024
ಸದ್ಯ ಇಡೀ ವಿಶ್ವವೇ ಕ್ರಿಸ್​ಮಸ್ ಸಂಭ್ರಮಾಚರಣೆಯಲ್ಲಿದೆ. ಸುನೀತಾ ವಿಲಿಯಮ್ಸ್ ಕೂಡ ಕ್ರಿಸ್​ಮಸ್ ಅಚರಣೆಯ ಖುಷಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಕ್ರಿಸ್​ಮಸ್ ಆಚರಣೆಯನ್ನು ಮಾಡಿದ್ದಾರೆ. ಮಂಗಳವಾರ ಅಂದ್ರೆ ಇಂದು ನಾಸಾದ ಜಾನ್ಸನ್ ಸ್ಪೇಸ್​ ಸೆಂಟರ್ ಕೆಲವು ಫೋಟೋಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಸುನೀತಾ ವಿಲಿಯಮ್ಸ್ ಮತ್ತೊಬ್ಬ ಗಗನಯಾತ್ರಿ ಡಾನ್ ಪೆಟ್ಟಿಟ್ ಜೊತೆ ಸಂತಾ ಕ್ಯಾಪ್ ಹಾಕಿಕೊಂಡು ಸಂಭ್ರಮದಿಂದ ತೆಗೆದುಕೊಂಡ ಫೋಟೋವನ್ನು ನಾಸಾ ಹಂಚಿಕೊಂಡಿದೆ. ಐಎಸ್​ಎಸ್​ನಲ್ಲಿ ಸುನೀತಾ ಹಾಗೂ ಪೆಟ್ಟಿಟ್​ ತುಂಬಾ ಸಂಭ್ರಮದೊಂದಿಗೆ ಇರುವ ಫೋಟೋವಿದು.
ಇದನ್ನೂ ಓದಿ:ರಾಕೇಶ್​ ಶರ್ಮಾ ಬಳಿಕ ಮತ್ತೊಬ್ಬ ಗಗನಯಾನಿ ಬಾಹ್ಯಾಕಾಶಯಾನಕ್ಕೆ ಆಯ್ಕೆ.. ಯಾರು ಆ ಅದೃಷ್ಟವಂತ ಗೊತ್ತಾ?
ಅನದರ್ ಡೇ, ಅನದರ್ ಸ್ಲೇ ಎಂದು ಅಡಿಬರಹದೊಂದಿಗೆ ಫೋಟೋ ಹಂಚಿಕೊಂಡಿರುವ ನಾಸಾದ ಜಾನ್ಸನ್​ ಸ್ಪೇಸ್​ ಸೆಂಟರ್ ಡಾನ್ ಪೆಟ್ಟಿಟ್ ಹಾಗೂ ಸುನೀತಾ ವಿಲಿಯಮ್ಸ್ ಫನ್ ಹಾಲಿಡೇಗೆ ಪೋಸ್​ ಕೊಟ್ಟಿದ್ದಾರೆ. ಈ ಒಂದು ಚಿತ್ರ ಸ್ಪೇಸ್ ಸ್ಟೇಷನ್​ನಲ್ಲಿರುರುವ ಕೊಲಂಬಸ್ ಲ್ಯಾಬರೋಟರಿ ಮಾಡ್ಯೂಲ್​ನ ಹ್ಯಾಮ್​ ರೇಡಿಯೋದಲ್ಲಿ ಮಾತನಾಡುವಾಗ ತೆಗೆದುಕೊಂಡಿದ್ದು ಎಂದು ಹೇಳಿದೆ.
ಇಬ್ಬರು ಗಗನಯಾತ್ರಿಗಳು ಕ್ರಿಸ್​ಮಸ್ ಆಚರಣೆಗೆ ವಿಶೇಷ ಅಡುಗೆಯನ್ನು ತಯಾರು ಮಾಡುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸಂಪರ್ಕದಲ್ಲಿದ್ದಾರೆ. ರೊಬೊಟಿಕ್ ಕಾರ್ಬೋ ಮಿಷನ್ ಮೂಲಕ ಅವರು ಆಹಾರ ತಯಾರಿಕೆಗೆ ಬೇಕಾದ ತಾಜಾ ಪದಾರ್ಥಗಳ ಡೆಲಿವರಿ ಆಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್​​ಗಳು..!
ಎಂಟು ದಿನದ ಮಿಷನ್​ಗಾಗಿ ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್​ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬರಲು ಆಗಲಿಲ್ಲ. ಹಲವು ತಿಂಗಳುಗಳ ಕಾಲ ನಡೆದ ಅನೇಕ ಬೆಳವಣಿಗೆಗಳ ಬಳಿಕ ನಾಸಾ ಸ್ಪೇಸ್ ಎಕ್ಸ್ ಡ್ರಾಗನ್ ಕ್ಯಾಪ್ಸುಲ್ ಮೂಲಕ ಫೆಬ್ರವರಿಯಲ್ಲಿ ಸುನೀತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಬರಲಿದ್ದಾರೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ