ಸೇಫ್ ಲ್ಯಾಂಡಿಂಗ್, ರಕ್ಷಣೆಯೂ ಆಯ್ತು.. ಮುಂದಿನ 45 ದಿನ ಸುನಿತಾ ವಿಲಿಯಮ್ಸ್ ಏನೆಲ್ಲ ಮಾಡಬೇಕು?

author-image
Ganesh
Updated On
900 ಗಂಟೆ ಸಂಶೋಧನೆ, 150ಕ್ಕೂ ಹೆಚ್ಚು ಪ್ರಯೋಗ.. 9 ತಿಂಗಳ ಸುನಿತಾ ವಿಲಿಯಮ್ಸ್​ ಏನು ಮಾಡಿದರು?
Advertisment
  • ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಬಂದಿದ್ದಾರೆ
  • ಫ್ಲೋರಿಡಾ ಕಡಲಿಗೆ ಬಂದಿಳಿದ ಗಗನಯಾನಿಗಳಿಗೆ ಸ್ವಾಗತ
  • ಕೈಬೀಸಿ ಸಂಭ್ರಮಿಸಿದ ನಾಲ್ವರು ಗಗನಯಾತ್ರಿಗಳು

ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಫ್ಲೋರಿಡಾ ಕಡಲಿಗೆ ಬಂದಿಳಿಯುತ್ತಿದ್ದಂತೆಯೇ ಸ್ವಾಗತ ನೀಡಿ, ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು.

ಸೇಫ್ ಲ್ಯಾಂಡಿಂಗ್, ರಕ್ಷಣೆ ಆಯ್ತು.. ಮುಂದೆ..?

ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲಿದೆ. ಅಂತೆಯೇ ಸುನಿತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಹೋಸ್ಟನ್​ನ ಜಾನ್ಸನ್ ಸ್ಪೇಸ್ ಸೆಂಟರ್​ನಲ್ಲಿ ರಿಹ್ಯಾಬಿಲಿಟೇಷನ್ (Rehabilitation) ನಡೆಯಲಿದೆ. ಫ್ಲೊರಿಡಾ ಸಮುದ್ರದಿಂದ ಹೋಸ್ಟನ್ ಜಾನ್ಸನ್ ಸ್ಪೇಸ್ ಸೆಂಟರ್​​ಗೆ ಗಗನಯಾತ್ರಿಗಳನ್ನ ಕರೆದುಕೊಂಡು ಹೋಗಲಾಗಿದೆ. ಇಲ್ಲಿ ಮುಂದಿನ 45 ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.

ಇದನ್ನೂ ಓದಿ: ಜೂನ್​ 5,2024 ರಿಂದ ಮಾರ್ಚ್​ 19,2025ರವರೆಗೆ.. ಹೇಗಿತ್ತು 286 ದಿನಗಳ ಬಾಹ್ಯಾಕಾಶದಲ್ಲಿ ಸುನೀತಾ ಕಳೆದ ದಿನಗಳು

publive-image

ಏನೆಲ್ಲ ಚಿಕಿತ್ಸೆ ಮತ್ತು ತರಬೇತಿ

  • ಮೂಳೆ, ಸ್ನಾಯು ಸವೆತ ಆಗದಂತೆ ಚಿಕಿತ್ಸೆ
  •  ಬೇಬಿ ಸಿಂಡ್ರೋಮ್​ನಿಂದ ಹೊರಬರುವಂತೆ ಸೂಕ್ತ ಚಿಕಿತ್ಸೆ
  •  ದೇಹದ ಸಮತೋಲನ ಕಾಪಾಡಿಕೊಳ್ಳುವಂತೆ ಸೂಕ್ತ ಚಿಕಿತ್ಸೆ
  •  ದೃಷ್ಟಿ ದೋಷ ಉಂಟಾಗದಂತೆ ತಜ್ಞ ವೈದ್ಯರಿಂದ ಚಿಕಿತ್ಸೆ
  •  ನೆಲದ ಮೇಲೆ ನಿಧಾನವಾಗಿ ನಡೆಯಲು ಸಹಾಯ
  •  ಮೊದಲು ಮೃದುವಾದ ಮೇಲ್ಮೈ ಜಾಗದಲ್ಲಿ ನಡೆಸುವುದು
  •  ಕಾಲುಗಳನ್ನು ಬಲಪಡಿಸಲು ವ್ಯಾಯಾಮ ಮಾಡಿಸುವುದು
  •  ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ ನೀಡುವುದು
  •  ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು
  •  ಪುನರ್ವಸತಿ ಹಲವಾರು ವಾರಗಳವರೆಗೆ ನಡೆಯುವುದು
  •  ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ

ಇದನ್ನೂ ಓದಿ: ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಬಂದ ಮನೆ ಮಗಳು.. ಜುರಸಾಲ್​​ ಗ್ರಾಮದಲ್ಲಿ ಸಂಭ್ರಮಾಚರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment