/newsfirstlive-kannada/media/post_attachments/wp-content/uploads/2025/03/SUNITA-Williams-2.jpg)
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇಬ್ಬರು ಗಗನಯಾತ್ರಿಗಳು ಭೂಮಿಗೆ ಮರಳುತ್ತಿರೋದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ ಭೂಮಿಗೆ ಹಿಂತಿರುಗಿದ ನಂತರ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಅದರಲ್ಲಿ ದೊಡ್ಡ ಸಮಸ್ಯೆ ಏನೆಂದರೆ, ಮಗುವಿನ ಪಾದಗಳು. ಭೂಮಿಗೆ ಬಂದ ಬಳಿಕ ಗಗನಯಾತ್ರಿಗಳು ಮಕ್ಕಳಂತೆ ನಡೆಯಲು ಪ್ರಾರಂಭಿಸ್ತಾರೆ. ಅದು ಏಕೆ ಅನ್ನೋದ್ರ ವಿವರ ಇಲ್ಲಿದೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಕೊರತೆ ಇರುತ್ತದೆ. ಹೀಗಾಗಿ ಗಗನಯಾನಿಗಳು ಭೂಮಿಗೆ ಬಂದ ಬಳಿಕ ನಡೆಯಲು ಕಷ್ಟಪಡುತ್ತಾರೆ. ದೀರ್ಘಕಾಲ ಬಾಹ್ಯಾಕಾಶದಲ್ಲೇ ಇರುವ ಗಗನಯಾತ್ರಿಗಳ ಪಾದಗಳು, ಚಿಕ್ಕ ಮಗುವಿನ ಪಾದದಂತೆ ಆಗಿರುತ್ತದೆ. ಹಾಗಾಗಿ ಅವರಿಗೆ ನಡೆಯಲು ಕಷ್ಟವಾಗುತ್ತದೆ.
ಇದನ್ನೂ ಓದಿ: ವೈದ್ಯಕೀಯ ಲೋಕದಲ್ಲೊಂದು ವಿಸ್ಮಯ.. ಕೃತಕ ಹೃದಯದೊಂದಿಗೆ 100 ದಿನ ಬದುಕಿದ ವ್ಯಕ್ತಿ
/newsfirstlive-kannada/media/post_attachments/wp-content/uploads/2025/03/SUNITA-Williams-1.jpg)
ಪಾದ ಯಾಕೆ ಹಾಗೆ ಆಗುತ್ತದೆ..?
ಭೂಮಿ ಮೇಲೆ ಇದ್ದಾಗ ಪಾದಗಳ ಸಹಾಯದಿಂದ ನಿಂತಿರುತ್ತೇವೆ. ಗುರುತ್ವಾಕರ್ಷಣೆಗೆ ಸರಿಯಾದ ಸಮತೋಲನ ಕಂಡುಕೊಳ್ಳುತ್ತೇವೆ. ಆದರೆ ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆ ಇರೋದ್ರಿಂದ ಪಾದಗಳಿಗೆ ಒತ್ತಡ ಹೋಗುವುದಿಲ್ಲ. ಗಾಳಿ ಮತ್ತು ಗುರುತ್ವಾಕರ್ಷಣೆ ಅನುಪಸ್ಥಿತಿಯಿಂದಾಗಿ ಭಾರ ಇರುವುದಿಲ್ಲ. ಅಲ್ಲಿ ಗಗನಯಾನಿಗಳು ತೇಲುತ್ತ ಇರುತ್ತಾರೆ.
ಸ್ನಾಯುಗಳು, ಮೂಳೆಗಳು ದುರ್ಬಲ
ಪಾದಗಳ ಅಡಿಭಾಗದಲ್ಲಿರುವ ಕ್ಯಾಲಸ್​ಗಳು ಮಾಯವಾಗುತ್ತವೆ. ಇದರರ್ಥ ಪಾದಗಳ ಮೇಲಿನ ದಪ್ಪ ಚರ್ಮದ ಪದರವು ಸಡಿಲಗೊಂಡು ಮಾಯವಾಗುತ್ತದೆ. ಅದೇ ಕಾರಣಕ್ಕೆ ಅವರ ಪಾದಗಳು ಭೂಮಿಗೆ ಬಂದಾಗ ಮಗುವಿನ ಪಾದಗಳಂತೆ ಇರುತ್ತದೆ. ಹೀಗಿದ್ದೂ ಗಗನಯಾನಿಗಳು ಚಿಂತಿಸುವ ವಿಷಯವಲ್ಲ. ಸ್ವಲ್ಪ ಸಮಯದ ನಂತರ ಸಾಮಾನ್ಯರಂತೆ ನಡೆಯಲು ಪ್ರಾರಂಭಿಸುತ್ತಾರೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಇರೋದ್ರಿಂದ ಮೂಳೆಗಳು ಮತ್ತು ಸ್ನಾಯುಗಳು ಕೂಡ ದುರ್ಬಲಗೊಳ್ಳುತ್ತವೆ. ಹೀಗಾಗಿ ದೇಹದಲ್ಲಿ ಒಂದಷ್ಟು ಬದಲಾವಣೆಗಳು ಕಂಡು ಬರುತ್ತವೆ. ಮೂಳೆ ಮುರಿತದ ಅಪಾಯಗಳೂ ಹೆಚ್ಚಿರುತ್ತವೆ.
/newsfirstlive-kannada/media/post_attachments/wp-content/uploads/2025/03/SunitaWilliams-NASA-SpaceX-Crew-10-3.jpg)
ಸಾಮಾನ್ಯರಾಗಲು ಸಹಾಯ
ದೈಹಿಕ ಚಟುವಟಿಕೆ ಕೊರತೆಯಿಂದಾಗಿ ಕಾಲುಗಳು ಮತ್ತು ಬೆನ್ನಿನ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದನ್ನು ತಡೆಗಟ್ಟಲು, ಗಗನಯಾತ್ರಿಗಳು ನಿಯಮಿತವಾಗಿ 2.5 ಗಂಟೆಗಳ ಕಾಲ ಬಾಹ್ಯಾಕಾಶದಲ್ಲೇ ವ್ಯಾಯಾಮ ಮಾಡ್ತಾರೆ. ನಿಯಮಿತವಾಗಿ ಸ್ಕೂಚ್‌ಗಳು, ಬೆಂಚ್ ಪ್ರೆಸ್ಸಿಂಗ್, ಡೆಡ್‌ಲಿಫ್ಟ್‌ಗಳು ಇತ್ಯಾದಿಗಳನ್ನು ಅಭ್ಯಾಸ ಮಾಡ್ತಾರೆ. ವ್ಯಾಯಾಮದ ಬೈಕು ಬಳಸುತ್ತಾರೆ, ನಿಯಮಿತವಾಗಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಾರೆ. ಮೂಳೆಗಳು ಬಲಗೊಳ್ಳಲು ಔಷಧಿಗಳನ್ನು ಪಡೆಯುತ್ತಾರೆ. ಇಷ್ಟೆಲ್ಲ ಮಾಡಿದರೂ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಸಾಮಾನ್ಯ ಸ್ಥಿತಿಗೆ ಬರಲು ಹಲವು ವಾರಗಳು ಬೇಕಾಗುತ್ತದೆ.
ಇದನ್ನೂ ಓದಿ: ದೊಡ್ಡ ಅಪಾಯ ದಾಟಿದ ಸುನಿತಾ ವಿಲಿಯಮ್ಸ್.. ಭೂಮಿಗೆ ತಲುಪೋ ಕೊನೆಯ 56 ನಿಮಿಷ ಚಾಲೆಂಜ್!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us