/newsfirstlive-kannada/media/post_attachments/wp-content/uploads/2024/11/Sunita-williams.jpg)
9 ತಿಂಗಳಿನಿಂದ ಬ್ಯಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ NASA ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮುಂದಿನ ವಾರ ಭೂಮಿಗೆ ಬರಲಿದ್ದಾರೆ. ಇಂದು ನಾಸಾ ಕಾರ್ಯಾಚರಣೆಗೆ ಕೈಜೋಡಿಸಿರುವ ಸ್ಪೇಸ್ಎಕ್ಸ್, ಫಾಲ್ಕನ್ ರಾಕೆಟ್ನಲ್ಲಿ ಕ್ರೂ-10 ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
ಭೂಮಿಗೆ ಬರುತ್ತಿರುವ ಸುನಿತಾ ವಿಲಿಯಮ್ಸ್, ಅನೇಕ ಸವಾಲುಗಳೊಂದಿಗೆ ಬರುತ್ತಿದ್ದಾರೆ. ಯಾಕೆಂದರೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ. ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವಾಕರ್ಷಣೆ ಬಲ ಇರೋದಿಲ್ಲ. ದೀರ್ಘಕಾಲದವರೆಗೆ ಇದಕ್ಕೆ ಒಡ್ಡಿಕೊಂಡಿದ್ದರಿಂದ ಗಗನಯಾತ್ರಿಗಳು ತಮ್ಮ ಪಾದಗಳಲ್ಲಿ ಶಕ್ತಿಯನ್ನು ಕಳೆದುಕೊಳ್ತಾರೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್, ಜಡೇಜಾ ಸ್ಥಾನಕ್ಕೆ ಕಠಿಣ ಸ್ಪರ್ಧೆ; ರೇಸ್ನಲ್ಲಿ ಯಾರೆಲ್ಲ ಇದ್ದಾರೆ?
ಇಷ್ಟು ದಿನಗುರುತ್ವಾಕರ್ಷಣೆ ಇಲ್ಲದೆ ಕಡೆಯಿದ್ದು, ಏಕಾಏಕಿ ಗುರುತ್ವಾಕರ್ಷಣೆ ಬಲ ಇರುವ ಭೂಮಿಗೆ ಹೊಂದಿಕೊಳ್ಳೋದು ಕಷ್ಟ. ಇದರಿಂದ ಆರೋಗ್ಯ ಸಮಸ್ಯೆ ಕಾಡುವ ಭೀತಿ ಇರುತ್ತದೆ. ಭೂಮಿಯಿಂದ ಸೂರ್ಯನಿಗೆ ದೂರ 150 ಮಿಲಿಯನ್ ಕಿಲೋ ಮೀಟರ್ ದೂರ ಇದೆ. ಅಲ್ಲಿಂದ ಸೂರ್ಯ ಕಿರಣಗಳು ಭೂಮಿಗೆ ಬರಬೇಕಂದ್ರೆ 9 ರಿಂದ 10 ನಿಮಿಷ ಬೇಕು.
ಆ ಸೂರ್ಯನ ಕಿರಣಗಳು ನಾಲ್ಕು ಲೇಯರ್ ದಾಟಿ ಬರಬೇಕು. ನಾಲ್ಕು ಲೇಯರ್ ದಾಟಿ ಬಂದರೆ ಮಾತ್ರ ಉಪಯುಕ್ತ, ಇಲ್ಲದಿದ್ರೆ ಮಾರಕ. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ಸೂರ್ಯನ ತಾಪಕ್ಕೆ ಒಳಗಾಗಿದ್ದಾರೆ. ಮೈಕ್ರೋ ಗ್ರಾವಿಟಿ ಇರೋದ್ರಿಂದ ಎಲ್ಲಾ ತರಹದ ರೆಡಿಯೇಷನ್ ಅವರ ಮೇಲೆ ಪರಿಣಾಮ ಬೀರಿದೆ.
ಇಂತಹ ರೆಡಿಯೇಷನ್ ನಡುವೆ ಸುನಿತಾ ವಿಲಿಯಮ್ಸ್ ಬರೋಬ್ಬರಿ 9 ತಿಂಗಳು ಕಳೆದಿದ್ದಾರೆ. ಪ್ರೋಟಿನ್ ಟ್ಯಾಬ್ಲೆಟ್ಸ್, ಕೆಲವೊಂದು ಹೈ-ಎನರ್ಜಿ ನಿರತಂತವಾಗಿ ಪಡೆಯುತ್ತಿದ್ದರು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಇದೆ.
ಇದನ್ನೂ ಓದಿ: 9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿತ್ತು..?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವಧಿಗಿಂತ ಸಮಯವಿದ್ದರೆ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಮೆದುಳಿನ ಕಾರ್ಯ ವೈಖರಿ ಮೇಲೂ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೇ ಭೂಮಿಗೆ ಬರುತ್ತಿದ್ದಂತೆಯೇ, ಗುರುತ್ವಾಕರ್ಷಣೆಯ ಬಲಕ್ಕೆ ದೇಹದಲ್ಲಿ ಸಮತೋಲನ ಕಾಪಾಡಿಕೊಳ್ಳೋದು ಕಷ್ಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ