/newsfirstlive-kannada/media/post_attachments/wp-content/uploads/2025/03/SUNITA-Williams-4.jpg)
ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣಕ್ಕೆ ಗುಡ್ಬೈ ಹೇಳಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಯತ್ತ ಹೊರಟಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ನಾಳೆ ಬೆಳಗ್ಗೆ 3.30ರ ಸುಮಾರಿಗೆ ಫ್ಲೊರಿಡಾದ ಕರಾವಳಿಗೆ ನಾಲ್ವರು ಗಗನಯಾತ್ರಿಗಳು ಬಂದಿಳಿಯಲಿದ್ದಾರೆ.
ಈ ಸಮಯದಲ್ಲಿ SpaceXನ ಕ್ರೂ ಡ್ರ್ಯಾಗನ್ ನೌಕೆಗೆ ಹವಾಮಾನ, ಪ್ಯಾರಾಚೂಟ್, ಟೆಕ್ನಿಕಲ್ ವಿಚಾರಗಳು ಸಕರಾತ್ಮಕವಾಗಿರಬೇಕು. ಇಲ್ಲದಿದ್ದರೆ ಸುರಕ್ಷಿತ ಲ್ಯಾಂಡಿಂಗ್ಗೆ ಅಡ್ಡಿಯಾಗಬಹುದು. ಭೂಮಿಯ ವಾತಾವರಣಕ್ಕೆ ಬಾಹ್ಯಾಕಾಶ ನೌಕೆಯ ಪ್ರವೇಶವು ಅತ್ಯಂತ ಸಂಕೀರ್ಣ. ಫೆಬ್ರವರಿ 1, 2003ರಲ್ಲಿ ಭಾರತದ ಹೆಮ್ಮೆಯ ಮೊದಲ ಗಗನಯಾತ್ರಿ ಕಲ್ಪನಾ ಚಾವ್ಲಾರಿದ್ದ ನೌಕೆ ಅಪಘಾತಕ್ಕೆ ಒಳಗಾಗಿತ್ತು. ಪರಿಣಾಮ ಕಲ್ಪನಾ ಚಾವ್ಲಾ ಸೇರಿ ಒಟ್ಟು 7 ಗಗನಯಾನಿಗಳು ತೀರಿಕೊಂಡಿದ್ದರು.
ಇದನ್ನೂ ಓದಿ: ಭಗವದ್ಗೀತೆ, ಗಣೇಶನ ಮೂರ್ತಿ.. ಬಾಹ್ಯಾಕಾಶಕ್ಕೆ ಹೋಗುವಾಗ ಸುನೀತಾ ಏನೆಲ್ಲಾ ತೆಗೆದುಕೊಂಡು ಹೋಗಿದ್ರು?
ಹೀಗಾಗಿ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣಕ್ಕೆ ನಿಖರವಾದ ಕೋನ ಮತ್ತು ವೇಗದಲ್ಲಿ ಪ್ರವೇಶಿಸಬೇಕು. ಸ್ಪೇಸ್‌ಎಕ್ಸ್‌ನ ನೌಕೆಯು ಸರಿಯಾಗಿ ಭೂಮಿಯ ವಾತಾವರಣಕ್ಕೆ ಪ್ರವೇಶ ಮಾಡದಿದ್ದರೆ ಭೂಮಿಗೆ ಅಪ್ಪಳಿಸುತ್ತದೆ. ಅಥವಾ ಅನಿರ್ದಿಷ್ಟ ಸಮಯದವರೆಗೆ ಬಾಹ್ಯಾಕಾಶಕ್ಕೆ ಹೋಗಿ ಯಾವುದೋ ಕಕ್ಷೆಯಲ್ಲಿ ಸಿಲುಕಿಕೊಳ್ಳುತ್ತದೆ.
ಪ್ಯಾರಾಚೂಟ್ ಸಮಯಕ್ಕೆ ಸರಿಯಾಗಿ ತೆರೆಯದಿದ್ದರೆ ಏನಾಗುತ್ತೆ..?
ಭೂಮಿಯ ವಾತಾವರಣ ಪ್ರವೇಶಿಸುವಾಗ ಸರಿಯಾದ ಸಮಯದಲ್ಲಿ ಪ್ಯಾರಾಚೂಟ್ ತೆರೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯಕಾರಿ. ಲ್ಯಾಂಡಿಂಗ್ ವೇಳೆ ನೌಕೆಯು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಡಿಕ್ಕಿ ಹೊಡೆಯುತ್ತದೆ. ಇದು ಡೇಂಜರ್.
ಇನ್ನು ಬಾಹ್ಯಾಕಾಶದಲ್ಲಿ ಟ್ರಸ್ಟರ್ ವಿಫಲವಾದರೆ ಸಮಸ್ಯೆ ಉಂಟಾಗಬಹುದು. ಈ ಟ್ರಸ್ಟರ್ ಬಾಹ್ಯಾಕಾಶ ನೌಕೆಯ ವೇಗ ಮತ್ತು ದಿಕ್ಕನ್ನು ನಿಯಂತ್ರಿಸುತ್ತವೆ. ಕೆಟ್ಟ ಹವಾಮಾನ ಕೂಡ ಲ್ಯಾಂಡಿಂಗ್ಗೆ ಸಮಸ್ಯೆಯನ್ನುಂಟು ಮಾಡಬಹುದು.
ಎಷ್ಟು ಹಂತಗಳಲ್ಲಿ ಲ್ಯಾಂಡಿಂಗ್..?
ಮೊದಲ ಹಂತ: ಭೂಮಿಗೆ ಬರುವ ಮೊದಲು ಬಾಹ್ಯಾಕಾಶ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಬೇರ್ಪಡುವುದು ಕೂಡ ಒಂದು ಹಂತವಾಗಿದೆ.
- ಈ ಪ್ರಯಾಣವು ಪ್ರೆಶರ್ ಸೂಟ್ ಧರಿಸುವುದರೊಂದಿಗೆ ಪ್ರಾರಂಭ
- ನೌಕೆಯನ್ನು ಹತ್ತಲು, ಗಗನಯಾತ್ರಿಗಳು ಮೊದಲು ಪ್ರೆಶರ್ ಸೂಟ್ ಧರಿಸುತ್ತಾರೆ. ನಂತರ ಹ್ಯಾಚ್ ಮುಚ್ಚಲಾಗುತ್ತದೆ. ತಾಂತ್ರಿಕ ಲೋಪ, ದೋಷಗಳ ಪರಿಶೀಲನೆ
ಎರಡನೇ ಹಂತ: ಬಾಹ್ಯಾಕಾಶ ನೌಕೆಯನ್ನು ಅನ್‌ಡಾಕ್ ಮಾಡಲಾಗುತ್ತದೆ. ಇದು ಹಲವು ಹಂತಗಳಲ್ಲಿ ನಡೆಯುತ್ತದೆ. ಅನ್‌ಡಾಕ್ ಮಾಡುವ ಮೊದಲ ಹಂತ ಏನೆಂದರೆ ಭದ್ರತಾ ಪರಿಶೀಲನೆ. ಜೀವಾಧಾರಕ ವ್ಯವಸ್ಥೆ (Life support system), ಸಂವಹನ ಮತ್ತು ಟ್ರಸ್ಟರ್ ಸಿಸ್ಟಮ್ ಕಾರ್ಯವನ್ನು ಪರಿಶೀಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಬಾಹ್ಯಾಕಾಶ ನೌಕೆಯ ಲಾಕ್ ಓಪನ್ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಅನ್‌ಡಾಕಿಂಗ್ ಆಗಿರುತ್ತದೆ. ಬಾಹ್ಯಾಕಾಶ ನೌಕೆಯನ್ನು ಟ್ರಸ್ಟರ್ ಸಹಾಯದಿಂದ ISS ನಿಂದ ಬೇರ್ಪಡಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಮೇಲ್ವಿಚಾರಣೆ ನಡೆಯಲಿದೆ. ಅಂತಿಮ ಹಂತದಲ್ಲಿ ನೌಕೆಯು ISS ನಿಂದ ಸಂಪೂರ್ಣವಾಗಿ ಬೇರ್ಪಟ್ಟು ಭೂಮಿಯತ್ತ ಪ್ರಯಾಣಿಸುತ್ತದೆ.
ಮುಂದೆ..
ಡಿಯೋರ್ಬಿಟ್ ದಹನ (Deorbit burn): ಈ ವೇಳೆ ಬಾಹ್ಯಾಕಾಶ ನೌಕೆಯು ಡಿಯೋರ್ಬಿಟ್ ದಹನ ಪ್ರಾರಂಭಿಸುತ್ತದೆ. ನಾಳೆ ಬೆಳಗಿನ ಜಾವ 2:41 ರ ಸುಮಾರಿಗೆ ದಹನ ಕ್ರಿಯೆ ನಡೆಯಲಿದೆ. ಎಂಜಿನ್ ಉರಿಸುವ ಮೂಲಕ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಹತ್ತಿರ ತರಲಾಗುತ್ತದೆ.
ಭೂಮಿಯ ವಾತಾವರಣಕ್ಕೆ ಪ್ರವೇಶ: ಸ್ಪೇಸ್‌ಎಕ್ಸ್‌ನ ನೌಕೆಯು ಗಂಟೆಗೆ 27000 ಕಿಲೋ ಮೀಟರ್ ವೇಗದಲ್ಲಿ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತದೆ.
ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತವೆ.. ಇದರ ನಂತರ ಭೂಮಿಯಿಂದ 18 ಸಾವಿರ ಅಡಿ ಎತ್ತರದಲ್ಲಿ ಮೊದಲು ಎರಡು ಟ್ರ್ಯಾಗನ್ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತವೆ. ನಂತರ 6000 ಅಡಿ ಎತ್ತರದಲ್ಲಿ ಮುಖ್ಯ ಪ್ಯಾರಾಚೂಟ್ ಕೂಡ ತೆರೆದುಕೊಳ್ಳುತ್ತದೆ.
ಸ್ಪ್ಲ್ಯಾಶ್ ಡೌನ್.. NASA ಪ್ರಕಾರ ಸಮುದ್ರದಲ್ಲಿ ಗಗನಯಾತ್ರಿಗಳ ಸ್ಪ್ಲ್ಯಾಶ್ ಡೌನ್ (ಬಂದಿಳಿಯುವಿಕೆ)ಫ್ಲೋರಿಡಾ ಕರಾವಳಿಯಲ್ಲಿ ನಡೆಯಲಿದೆ. ಹವಾಮಾನ ಚೆನ್ನಾಗಿಲ್ಲದಿದ್ದರೆ ಬೇರೆಡೆಯೂ ಇಳಿಯಬಹುದು. ಪ್ರಸ್ತುತ ಲ್ಯಾಂಡಿಂಗ್ ಸಮಯ ಬುಧವಾರ ಬೆಳಗಿನ ಜಾವ 3.27 ಆಗಿದೆ.
ಇದನ್ನೂ ಓದಿ:9 ತಿಂಗಳು ಸುನಿತಾ ಏನು ತಿಂದು ಜೀವಿಸಿದರು? ಏನೂ ಸಿಗದ ಲೋಕದಲ್ಲಿ ಹಸಿವು ನಿಗ್ರಹಿಸಿದ್ದು ಹೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ