ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!

author-image
Ganesh
Updated On
ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ದಿನ ಅಧಿಕೃತ.. ಅಮೆರಿಕದ ಸಮುದ್ರದಲ್ಲಿ ಲ್ಯಾಂಡ್..!
Advertisment
  • ಮಾರ್ಚ್​ 19 ಅಲ್ಲ, 18 ರಂದೇ ಭೂಮಿಗೆ ವಾಪಸ್
  • ಗಗನಯಾತ್ರಿಗಳಿಂದ NASAಗೆ ಕ್ಷಣ ಕ್ಷಣದ ಮಾಹಿತಿ
  • 9 ತಿಂಗಳುಗಳಿಂದ ಬಾಹ್ಯಾಕಾಶದಲ್ಲಿರುವ ವಿಲಿಯಮ್ಸ್

ಕೇವಲ 8 ದಿನಕ್ಕಾಗಿ ಹೋಗಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲೇ ಸಿಲುಕೊಂಡಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ದಿನಾಂಕ ದೃಢವಾಗಿದೆ. NASA ಹೊಸ ಅಪ್​ಡೇಟ್ಸ್ ನೀಡಿದ್ದು, ನಿಗಧಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಸುನಿತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಆಗಲಿದ್ದಾರೆ.

ಯಾವಾಗ..?

ಈ ಮೊದಲು ಮಾರ್ಚ್​ 19ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರುತ್ತಾರೆ ಎಂದು ನಾಸಾ ತಿಳಿಸಿತ್ತು. ಇದೀಗ ಮತ್ತೊಂದು ಅಪ್​ಡೇಟ್ಸ್ ನೀಡಿರುವ ಸುನಿತಾ ವಿಲಿಯಮ್ಸ್ ಮಾರ್ಚ್​ 18 ರಂದು ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದೆ. ನಾಳೆ ಸಂಜೆ 5.57ರ ಸುಮಾರಿಗೆ ಭೂಮಿಗೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. ಫ್ಲೊರಿಡಾ ಕಡಲಿಗೆ ಲ್ಯಾಂಡ್ (Splash Down Off) ಆಗಲಿದ್ದಾರೆ.

ಇದನ್ನೂ ಓದಿ:9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿರುತ್ತೆ..?

publive-image

ವಾಪಸ್ ಬರುವ ಬಗ್ಗೆ ನಾಸಾ ನಿರಂತವಾಗಿ ಮಾಹಿತಿ ಪಡೆಯುತ್ತಿದೆ. ನೌಕೆಯಲ್ಲಿರುವ ಗಗನಯಾನಿಗಳು ಕಾರ್ಯಾಚರಣೆ ನಡೆಸ್ತಿದ್ದಾರೆ. ಗಗನಯಾನಿಗಳು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ರಿಟರ್ನ್​ ಟಾರ್ಗೆಟ್ ಫಿಕ್ಸ್ ಆಗುತ್ತಿದೆ. ವೆದರ್ ಕಂಡೀಷನ್ ಕೂಡ ಸಹಕಾರ ನೀಡಬೇಕಿದೆ ಎಂದು ನಾಸಾ ಹೇಳಿದೆ. ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಜೊತೆ ನಾಸಾದ ಗಗನಯಾನಿ ನಿಕ್ ಹೇಗ್, ರಷ್ಯಾದ ಗಗನಯಾನಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಹಿಂತಿರುಗಲಿದ್ದಾರೆ.

ಇದನ್ನೂ ಓದಿ: 9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿರುತ್ತೆ..?

ಸುನಿತಾ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರಲು NASA ‘SpaceX ಕ್ರೂ10 ಆಪರೇಷನ್’ ಆರಂಭಿಸಿದೆ. ಅದು ನಿನ್ನೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇರುವ ನೌಕೆ ಬಳಿ ತಲುಪಿದೆ. ಅಲ್ಲದೇ, ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರು, ಭೂಮಿಯಿಂದ ಬಂದಿರುವ ಕ್ರೂ-10 ಸಿಬ್ಬಂದಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬೆನ್ನಲ್ಲೇ ಭೂಮಿಗೆ ವಾಪಸ್ ಅಗುವ ಪ್ರಕ್ರಿಯೆಗಳು ಶುರುವಾಗಿವೆ.

ಇದನ್ನೂ ಓದಿ: ಜ್ಯೂನಿಯರ್ ಅಂಬಿ ಅದ್ಧೂರಿ ನಾಮಕರಣ.. ಸಂಭ್ರಮಕ್ಕೆ ಸಾಕ್ಷಿಯಾದ ಕಿಚ್ಚ, ಮುಂದುವರೀತಾ ದರ್ಶನ್ ಮುನಿಸು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment