/newsfirstlive-kannada/media/post_attachments/wp-content/uploads/2025/03/SunitaWilliams.jpg)
ಭಾರತ ಮೂಲದ ಸುನಿತಾ ವಿಲಿಯಮ್ಸ್ ಸೇರಿ 4 ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನ ಬಿಟ್ಟು ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ಎಲಾನ್ ಮಸ್ಕ್ ಅವರ ಸ್ಪೇಸ್​ ಎಕ್ಸ್​ನ ಕ್ರೂ ಡ್ರ್ಯಾಗನ್ ನೌಕೆ ಮೂಲಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್​ ಭೂಮಿಯತ್ತ ವಾಪಸ್​ ಆಗ್ತಿದ್ದಾರೆ. ಅಮೆರಿಕ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ವಾಪಸ್ ಆಗುತ್ತಿದ್ದಾರೆ.
ಸೂಕ್ಷ್ಮ ಹಂತ ದಾಟಿದ ಸ್ಪೇಸ್‌ಕ್ರಾಫ್ಟ್!
4 ಗಗನಯಾತ್ರಿಗಳನ್ನು ಹೊತ್ತು ಬರುತ್ತಿರುವ ಸ್ಪೇಸ್​ ಎಕ್ಸ್​ನ ಕ್ರೂ ಡ್ರ್ಯಾಗನ್ ನೌಕೆ ಈಗಾಗಲೇ ಸೂಕ್ಷ್ಮ ಹಂತವನ್ನು ದಾಟಿದೆ. ಅಪ್ರೋಚ್ ಎಲಿಪ್ಸಾಯ್ಡ್​ ಅನ್ನೋ ಸೂಕ್ಷ್ಮ ಗಡಿಯನ್ನು ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ದಾಟಿದೆ. ಇದರಿಂದ ಅತಿ ದೊಡ್ಡ ಸಮಸ್ಯೆಯಿಂದ ಗಗನಯಾತ್ರಿಗಳು ಪಾರಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/SunitaWilliams-NASA-SpaceX-Crew-10-3.jpg)
ಏನಿದು ಅಪ್ರೋಚ್ ಎಲಿಪ್ಸಾಯ್ಡ್?
ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಗಡಿ ಆಗಿರುತ್ತೆ. ಯಾವುದೇ ಸ್ಪೇಸ್ ಕ್ರಾಫ್ಟ್ ಈ ಗಡಿಯನ್ನ ದಾಟಿ ಹೋಗಬೇಕು. ಈ ಗಡಿ ದಾಟುವ ವೇಳೆ ಹೆಚ್ಚು ಕಡಿಮೆಯಾದ್ರೆ ಸಂಕಷ್ಟ ಫಿಕ್ಸ್ ಆಗಿರುತ್ತೆ. ಇವತ್ತು ಸಹ ಇದು ತುಂಬಾನೇ ಸೂಕ್ಷ್ಮ ಹಂತವಾಗಿತ್ತು. ಸದ್ಯ ಈ ಕಾಲ್ಪನಿಕ ಗಡಿಯನ್ನು ಡ್ರ್ಯಾಗನ್ ಫ್ರೀಡಂ ದಾಟಿ ಮುಂದೆ ಬಂದಿದೆ.
ಅಪ್ರೋಚ್ ಎಲಿಪ್ಸಾಯ್ಡ್ 4X2X2 ಕಿಲೋಮೀಟರ್​ನ ಕಾಲ್ಪನಿಕ ಗಡಿ ಆಗಿರುತ್ತೆ. ರಗ್​ಬಿ ಬಾಲ್ ಮಾದರಿ ಅಥವಾ ರೌಂಡ್ ಶೇಪ್​ನ 3D ಸ್ಥಳ ಇದಾಗಿದ್ದು, ಮುಂದಿನ 24 ಗಂಟೆಗಳವರೆಗೂ ಮತ್ತೆ ಇದು ಸಿಗುವುದಿಲ್ಲ.
ಕೊನೆಯ 56 ನಿಮಿಷದ ಚಾಲೆಂಜ್!
ಡ್ರ್ಯಾಗನ್ ಫ್ರೀಡ್ಂ ಸ್ಪೇಸ್ ಕ್ರ್ಯಾಫ್ಟ್‌ನಲ್ಲಿ ಸುನಿತಾ ವಿಲಿಯಮ್ಸ್ ತಂಡ ಭೂಮಿಗೆ ಬರ್ತಾ ಇದೆ. ಸುನಿತ್ ವಿಲಿಯಮ್ಸ್ ಭೂಮಿಗೆ ಬರೋ ಮುಂಚಿನ 56 ನಿಮಿಷ ತುಂಬಾ ಮುಖ್ಯ. ಯಾಕಂದ್ರೆ ಕೊನೆಯ 56 ನಿಮಿಷದಲ್ಲಿ ಡ್ರ್ಯಾಗನ್ ಭೂಕಕ್ಷೆಯ ಒಳಗೆ ತನ್ನ ಸಂಚಾರ ಆರಂಭ ಮಾಡುತ್ತೆ.
ಡ್ರ್ಯಾಗನ್ ವೇಗ ಭೂಮಿಗೆ 600 ಕಿಲೋ ಮೀಟರ್ ವೇಗದಲ್ಲಿರುತ್ತೆ. ಡ್ರ್ಯಾಗನ್ ವೇಗವನ್ನು 600 ಕಿಲೋ ಮೀಟರ್‌ನಿಂದ 6 ಕಿಲೋ ಮೀಟರ್‌ಗೆ ಇಳಿಸಬೇಕು. ಇಲ್ಲಿ ಸೋಲಾರ್ ಶೀಲ್ಡ್ ಬಗ್ಗೆಯೂ ಹೆಚ್ಚಿನ ಗಮನವಹಿಸಬೇಕು. ಹೀಗೆ ಬಂದ ಡ್ರ್ಯಾಗನ್ ತಾನು ಇಳಿಯೋ ಎರಡು ಸ್ಥಳವನ್ನು ಗುರುತಿಸಿ ಆ ಸ್ಥಳದಲ್ಲೇ ಇಳಿಯಬೇಕು.
ಕಡೆಯ 15 ನಿಮಿಷ ಢವಢವ!
ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರೋದಕ್ಕೆ ಕೌಂಟ್‌ಡೌನ್ ಏನೋ ಶುರುವಾಗಿದೆ. ಭಾರತೀಯ ಕಾಲಮಾನ 3:27 AM ಕ್ಕೆ ಸ್ಪ್ಲಾಶ್‌ಡೌನ್ ಆಫ್ ನಿರೀಕ್ಷಿಸಲಾಗಿದೆ. ಇದರಲ್ಲಿ ಕಡೆಯ 15 ನಿಮಿಷ ತುಂಬಾ ಇಂಪಾರ್ಟೆಂಟ್. ಇದಕ್ಕಾಗಿ ಎರಡು ಶಿಪ್, ಹೆಲಿಕಾಪ್ಟರ್, ಆ್ಯಂಬುಲೆನ್ಸ್ ಮೂಲಕ ಮೂರು ಸಾರಿಗೆ ವ್ಯವಸ್ಥೆಯನ್ನು ನಾಸಾ ಮಾಡಿಕೊಂಡಿದೆ. ಕಡೆಯ ಕ್ಷಣದಲ್ಲಿ ಯಾವುದೇ ಲೋಪವಾಗದಂತೆ ಇಳಿಸಲು ನಾಸಾ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us