ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ತಲೆ ಕೂದಲನ್ನ ಕಟ್ಟಿಕೊಳ್ಳಲ್ಲ ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!

author-image
admin
Updated On
ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ತಲೆ ಕೂದಲನ್ನ ಕಟ್ಟಿಕೊಳ್ಳಲ್ಲ ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
Advertisment
  • ಸುನಿತಾ ಅವರದ್ದು ತುಂಬಾ ಒಳ್ಳೆ ತಲೆ ಹಾಗೂ ಕೂದಲು ಎಂದ ಟ್ರಂಪ್‌!
  • ಬಾಹ್ಯಾಕಾಶದಲ್ಲಿ ತಲೆ ಕೂದಲು ಭೂಮಿಯಲ್ಲಿ ಇರುವಂತೆ ಇರುವುದಿಲ್ಲ
  • ಸುನಿತಾ ತಲೆ ಕೂದಲು ಹಾರಾಡುತ್ತಿರುವುದಕ್ಕೆ ವೈಜ್ಞಾನಿಕ ಕಾರಣಗಳು ಇದೆ

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹಾಕ್ಯಾಶ ಕೇಂದ್ರದಿಂದ (ISS) ಭೂಮಿಗೆ ಬರಲು ಕೆಲವೇ ಗಂಟೆಗಳು ಬಾಕಿ ಇದೆ. ಕೌಂಟ್‌ಡೌನ್ ಶುರುವಾಗಿರುವಾಗ ಸುನಿತಾ ಕ್ಷೇಮವಾಗಿ ವಾಪಸ್ ಬರಲಿ ಅನ್ನೋ ಹಾರೈಕೆ, ಪ್ರಾರ್ಥನೆಗಳು ಮುಗಿಲು ಮುಟ್ಟುತ್ತಿದೆ.

ಸುನಿತಾ ವಿಲಿಯಮ್ಸ್‌ ಅವರ ಆಗಮನದ ಕುತೂಹಲ ಒಂದು ಕಡೆಯಾದ್ರೆ ಭೂಮಿಗೆ ಬಂದ ಮೇಲೆ ಸುನಿತಾ ಅವರ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿದೆ. ಇದರ ಮಧ್ಯೆ ಬಾಹ್ಯಾಕಾಶದಲ್ಲಿ ಸುನಿತಾ ಅವರ ಹೇರ್‌ ಸ್ಟೈಲ್‌ಗೆ ಭಾರೀ ಚರ್ಚೆಯಾಗುತ್ತಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸುನಿತಾ ವಿಲಿಯಮ್ಸ್‌ ಕೂದಲಿನ ಬಗ್ಗೆ ಮಾತನಾಡಿದ್ದರು. ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಟ್ರಂಪ್‌, ನಾನು ಕೂಡ ಉದ್ದನೆ ಕೂದಲಿನ ಸುನಿತಾ ವಿಲಿಯಮ್ಸ್ ಅವರನ್ನು ನೋಡಿದ್ದೇನೆ. ತುಂಬಾ ಒಳ್ಳೆಯ ತಲೆ ಹಾಗೂ ಕೂದಲನ್ನು ಅವರು ಹೊಂದಿದ್ದಾರೆ. ಇದನ್ನು ನಾನು ವ್ಯಂಗ್ಯವಾಗಿ ಹೇಳುತ್ತಿಲ್ಲ ಎಂದಿದ್ದಾರೆ.

publive-image

ಟ್ರಂಪ್ ಅವರ ಈ ಹೇಳಿಕೆ ಒಂದು ಕಡೆಯಾದ್ರೆ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಯಾಕೆ ತಲೆ ಕೂದಲನ್ನು ಕಟ್ಟೋದಿಲ್ಲ ಅನ್ನೋದು ಚರ್ಚೆಯಾಗಿದೆ. ಬಾಹ್ಯಾಕಾಶದಲ್ಲಿ ಸುನಿತಾ ಅವರ ತಲೆ ಕೂದಲು ಹಾರಾಟ ಮಾಡಲು ವೈಜ್ಞಾನಿಕವಾದ ಕಾರಣಗಳು ಇವೆ. ಅದು ಯಾಕೆ ಅಂತ ತಿಳಿಯೋ ಮುನ್ನ ಬಾಹ್ಯಾಕಾಶದಲ್ಲಿ ನೀರು ಇರಲ್ಲ, ಗುರುತ್ವಾಕರ್ಷಣೆಯೂ ಇರಲ್ಲ ಅನ್ನೋದು ಗೊತ್ತಿರಬೇಕು.

publive-image

ಕೂದಲು ಹಾರಾಡಲು ಕಾರಣವೇನು?
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಶಕ್ತಿ ಇಲ್ಲದಿರುವುದರಿಂದ ತಲೆ ಕೂದಲು ಭೂಮಿಯಲ್ಲಿ ಇರುವಂತೆ ಇರುವುದಿಲ್ಲ. ಭೂಮಿಯಲ್ಲಿ ತಲೆ ಕೂದಲು ಕೆಳಮುಖವಾಗಿದ್ರೆ, ಆಕಾಶದಲ್ಲಿ ಮೇಲ್ಮುಖವಾಗಿ ಹಾರಾಡುತ್ತದೆ. ಅಂದ್ರೆ ಭೂಮಿಗೆ ವಿರುದ್ಧ ದಿಕ್ಕಿನಲ್ಲಿ ತೇಲಾಡಬೇಕಾಗುತ್ತದೆ.

ಇದನ್ನೂ ಓದಿ: ಗುಡ್​​ನ್ಯೂಸ್​.. ಬಾಹ್ಯಾಕಾಶಕ್ಕೆ ಗುಡ್​ಬೈ ಹೇಳಿ, ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್ 

ಗುರುತ್ವಾಕರ್ಷಣೆ ಎಲ್ಲಿ ಇರೋದಿಲ್ಲವೋ ಅಂತಹ ಜಾಗದಲ್ಲಿ ತಲೆ ಕೂದಲು ಎಲ್ಲಾ ದಿಕ್ಕುಗಳಿಗೂ ಹರಡುತ್ತದೆ. ಆದರೆ ಕೆಳಗೆ ಮಾತ್ರ ಬೀಳೋದಿಲ್ಲ. ಆಗ ತಲೆ ಕೂದಲನ್ನು ಕಟ್ಟಲೇಬೇಕಾದ ಅನಿವಾರ್ಯತೆಯು ಬರೋದಿಲ್ಲ. ಬಾಹ್ಯಾಕಾಶದಲ್ಲಿ ಇರುವ ಗಗನಯಾತ್ರಿಗಳು ಸಾಮಾನ್ಯವಾಗಿ ಹೆಲ್ಮೆಟ್‌ ಧರಿಸಿ ಹೆಚ್ಚು ಕಾಲ ಕಳೆಯುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment