newsfirstkannada.com

ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

Share :

Published August 9, 2024 at 12:38pm

    ಸುನಿತಾ ವಿಲಿಯಮ್ಸ್​ ವಾಪಸ್ ಕರೆತರಲು NASA ಪ್ರಯತ್ನ

    NASA ಜೊತೆ ಕೈಜೋಡಿಸಲಿದೆ ಎಲಾನ್ ಮಸ್ಕ್​ನ SpaceX

    ದೀರ್ಘಕಾಲ ಬಾಹ್ಯಾಕಾಶದಲ್ಲಿ ಇರೋದ್ರಿಂದ ಏನೆಲ್ಲ ತೊಂದರೆ?

ಭಾರತ ಮೂಲದ NASA ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಸಿಲುಕಿ ಎರಡು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಸುನಿತಾ ವಿಲಿಯಮ್ಸ್ ವಾಪಸಾತಿಗೆ ಇನ್ನೂ ತುಂಬಾ ಸಮಯ ಹಿಡಿಯಬಹುದು ಎಂದು ನಂಬಲಾಗಿದೆ.

ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳನ್ನು ವಾಪಸ್ ಕರೆತರಲು NASA ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಬೋಯಿಂಗ್ ನೌಕೆಯ ಸ್ಟಾರ್‌ಲೈನರ್ ಗಗನಯಾತ್ರಿಗಳು ಭೂಮಿಗೆ ಮರಳಲು ನಮ್ಮಲ್ಲಿರುವ ಎಲ್ಲಾ ಆಯ್ಕೆಗಳನ್ನೂ ಪ್ರಯೋಗ ಮಾಡಲಾಗುತ್ತಿದೆ ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಗಗನಯಾತ್ರಿಗಳು 2025ರಲ್ಲಿ ಭೂಮಿಗೆ ಮರಳಬಹುದು. ನಮ್ಮ ಪ್ಲಾನ್​ನಲ್ಲಿ ಬೋಯಿಂಗ್‌ನ ಪ್ರತಿಸ್ಪರ್ಧಿ, ಎಲಾನ್ ಮಸ್ಕ್​ ಅವರ ಸ್ಪೇಸ್‌ಎಕ್ಸ್ (SpaceX’s Crew Dragon) ಕೂಡ ಕೈಜೋಡಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ಫೆಬ್ರವರಿ 2025 ರೊಳಗೆ ಹಿಂತಿರುಗುತ್ತದೆ

ಕಮರ್ಷಿಯಲ್ ಕ್ರ್ಯೂ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ನೀಡಿರುವ ಮಾಹಿತಿ ಪ್ರಕಾರ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬುಚ್ ಮತ್ತು ಸುನಿತಾ ಅವರನ್ನು ಮರಳಿ ತರುವುದು NASAದ ಪ್ರಮುಖ ಆಯ್ಕೆ ಆಗಿದೆ. ಆದರೆ ನಾಸಾ ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್​​ ಉಡಾವಣೆ ವಿಳಂಬ ಆಗಲಿದೆ. ಸೆಪ್ಟೆಂಬರ್ 25ಕ್ಕೆ ಉಡವಾಣೆ ಆಗಲಿದ್ದು, ಆ ಮೂಲಕ ಇಬ್ಬರನ್ನೂ ವಾಪಸ್ ಕರೆತರಲು ಯೋಜಿಸಲಾಗಿದೆ ಎಂದಿದ್ದಾರೆ. 2025ರ ವೇಳೆಗೆ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ತರುವುದು ನಮ್ಮ ಗುರಿ. ನೂತನವಾಗಿ ಉಡಾವಣೆ ಮಾಡುತ್ತಿರುವ ನೌಕೆಯಲ್ಲಿ ಇಬ್ಬರು ಗಗನಯಾನಿಗಳು ಹೋಗಲಿದ್ದಾರೆ. 2025 ಫೆಬ್ರವರಿಯಲ್ಲಿ ನಾಲ್ಕು ಸಿಬ್ಬಂದಿ ವಾಪಸ್ ಆಗಲಿದ್ದಾರೆ ಎಂದಿದ್ದಾರೆ.

ಅಪಾಯಗಳೇನು?

ಬಾಹ್ಯಾಕಾಶದಲ್ಲಿ ದೀರ್ಘಕಾಲ ಇದ್ದಾಗ ಗುರುತ್ವಾಕರ್ಷಣೆ ಇಲ್ಲದ ಕಾರಣ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸ್ನಾಯು ಸೆಳೆತ, ದೇಹದಲ್ಲಿ ದ್ರವದ ಕೊರತೆ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ರಕ್ತದೊತ್ತಡ ಸಮಸ್ಯೆ ಉಂಟಾದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಇನ್ನು ಗಗನಯಾತ್ರಿಗಳು ಭೂಮಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದ ವಿಕಿರಣವನ್ನು ಎದುರಿಸುತ್ತಾರೆ. ಇದು ಗ್ಯಾಲಕ್ಸಿಯ ಕಾಸ್ಮಿಕ್ ಕಿರಣಗಳು ಮತ್ತು ಸೌರ ಕಣಗಳನ್ನು ಒಳಗೊಂಡಿರುತ್ತದೆ. ಇದು ಡಿಎನ್ಎಯನ್ನು ಹಾನಿ ಮಾಡುವ ಅಪಾಯ ಇರುತ್ತದೆ. ಕ್ಯಾನ್ಸರ್ ಸಾಧ್ಯತೆ ಹೆಚ್ಚಿಸುತ್ತದೆ.

ಇದನ್ನೂ ಓದಿ:ಡೇಂಜರ್​ ಝೋನ್​​ನಲ್ಲಿ ಸುನಿತಾ ವಿಲಿಯಮ್ಸ್​; NASA ಒಂದು ದಿನ ಲೇಟ್​ ಮಾಡಿದ್ರೂ ಅವರ ಪ್ರಾಣಕ್ಕೆ ಕಂಟಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

https://newsfirstlive.com/wp-content/uploads/2024/08/SUNITA-5.jpg

Load More