/newsfirstlive-kannada/media/post_attachments/wp-content/uploads/2024/07/SUNITA-1.jpg)
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರುವ ಬಗ್ಗೆ NASA ಮತ್ತೊಂದು ಅಪ್ಡೇಟ್ಸ್ ನೀಡಿದೆ. ಫೆಬ್ರವರಿ 2025 ರಲ್ಲಿ ಕ್ರ್ಯೂ-9 ಮಿಷನ್ ಅಡಿಯಲ್ಲಿ ಸ್ಪೇಸ್-ಎಕ್ಸ್‌ನ ಬಾಹ್ಯಾಕಾಶ ನೌಕೆ ಮೂಲಕ ವಾಪಸ್ ಕರೆ ತರೋದಾಗಿ ನಾಸಾ ಈ ಹಿಂದೆ ಘೋಷಣೆ ಮಾಡಿತ್ತು.
ಇದೀಗ ನಾಸಾದ ಇನ್ನಿಬ್ಬರು ಗಗನಯಾತ್ರಿಗಳು ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. NASAದ ನಿಕ್ ಹೇಗ್ (Nick Hague) ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ (Alexandra Gorbunova) ಕ್ರೂ-9 ಕಾರ್ಯಾಚರಣೆಗಾಗಿ ಐಎಸ್ಎಸ್ (ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ) ಹೋಗಲಿದ್ದಾರೆ.
ಇದನ್ನೂ ಓದಿ:ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO
ನಾಸಾ ನೀಡಿರುವ ಮಾಹಿತಿಯಲ್ಲಿ.. ಸೆಪ್ಟೆಂಬರ್ 26 ರಂದು ಸ್ಪೇಸ್-ಎಕ್ಸ್ ಸಹಾಯದಿಂದ ಕ್ರ್ಯೂ-9 ಮಿಷನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್-X ನ ಫಾಲ್ಕನ್ 9 ರಾಕೆಟ್ ಉಡಾವಣೆ ಆಗಲಿದೆ. ಅದರಲ್ಲಿ ಗಗನಯಾನಿಗಳಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ತೆರಳಲಿದ್ದಾರೆ.
ಯಾವಾಗ ತಲುಪುತ್ತಾರೆ..?
ಭಾರತೀಯ ಕಾಲಮಾನದ ಪ್ರಕಾರ.. ಕ್ರ್ಯೂ-9 ಮಿಷನ್ ಸೆಪ್ಟೆಂಬರ್ 25 ರಂದು ರಾತ್ರಿ 11:58ಕ್ಕೆ ಉಡಾವಣೆ ಆಗಲಿದೆ. ಉಡಾವಣೆಯಾದ ಸುಮಾರು 6 ಗಂಟೆಗಳ ನಂತರ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಾರೆ.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್ ಅವರ SpaceX ಕೆಲಸ ಏನು..?
ಸುನಿತಾ ವಿಲಿಯಮ್ಸ್ ಹೇಗೆ ಬರ್ತಾರೆ..?
ಕಾರ್ಯಾಚರಣೆಗೆ ಹೋಗ್ತಿರುವ ನೌಕೆಯಲ್ಲಿ ನಾಲ್ವರು ಬಾಹ್ಯಾಕಾಶಕ್ಕೆ ಹೋಗುವ ವ್ಯವಸ್ಥೆ ಹೊಂದಿದೆ. ಆದರೆ ಸೆಪ್ಟೆಂಬರ್ 25 ರಂದು ಇಬ್ಬರು ಗಗನಯಾನಿಗಳು ಮಾತ್ರ ನಭಕ್ಕೆ ಚಿಮ್ಮಲಿದ್ದಾರೆ. ಅಲ್ಲಿ ಐಎಸ್ಎಸ್ ತಲುಪಿದ ನಂತರ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಜೊತೆಗೂಡಿ ಬರಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿಯಲ್ಲಿ ಭೂಮಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್ಡೇಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ