ಉಸಿರು ಬಿಗಿ ಹಿಡಿದು ಕೂತಿದ್ದ ಸುನೀತಾ ವಿಲಿಯಮ್ಸ್.. ಹೇಗಿತ್ತು ಕೊನೆಯ ಆ ಕ್ಷಣ? ಟಾಪ್ 10 ಫೋಟೋ!

author-image
admin
Updated On
ಸುನಿತಾ ವಿಲಿಯಮ್ಸ್​ ಕರೆ ತರಲು NASA, SpaceX ಎಷ್ಟು ಕೋಟಿ ಖರ್ಚು ಮಾಡಿವೆ..?
Advertisment
  • ನಾಲ್ಕು ನಿಮಿಷಕ್ಕೂ ಮುನ್ನ ತೆರೆದುಕೊಂಡ ಪ್ಯಾರಾಚ್ಯೂಟ್​​ಗಳು
  • ಸುನೀತಾ, ಬುಚ್ ವಿಲ್ಮೋರ್ ಸೇರಿ ನಾಲ್ವರು ಸೇಫ್​​​ ಲ್ಯಾಂಡ್​​ ಹೇಗಾಯ್ತು?
  • ನಾಸಾ ನಿಗದಿ ಪಡಿಸಿದ್ದ ಸಮಯಕ್ಕೆ 4 ಗಗನಯಾತ್ರಿಗಳು ರಿಟರ್ನ್​​

ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯವಾಗಿದೆ.

publive-image
ವಿಶ್ವವೇ ಬೆರಗು ಕಣ್ಣಿನಿಂದ ನೋಡುತ್ತಿದ್ದ ರಣರೋಚಕ ಕಾರ್ಯಾಚರಣೆ ಫ್ಲೋರಿಡಾದ ಕಡಲ ತೀರದಲ್ಲಿ ನಡೆದಿದೆ.

publive-image
ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳು ಅತ್ಯಂತ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.

publive-image
ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 3:27ಕ್ಕೆ ಕ್ರ್ಯೂ-9 ಲ್ಯಾಂಡ್​​​ ಆಗಿದೆ.

publive-image
ನಾಸಾ ನಿಗದಿ ಪಡಿಸಿದ್ದ ಸಮಯಕ್ಕೆ ಗಗನಯಾತ್ರಿಗಳು ಸೇಫ್‌ ಆಗಿ ರಿಟರ್ನ್​​ ಆಗಿದ್ದಾರೆ.

publive-image
ಕೊನೆಯ ನಾಲ್ಕು ನಿಮಿಷಕ್ಕೂ ಮುನ್ನ ಸ್ಪೇಸ್‌ X ಕ್ರ್ಯೂ-9 ಪ್ಯಾರಾಚ್ಯೂಟ್​​ಗಳು ತೆರೆದುಕೊಳ್ಳುವ ಮೂಲಕ ಲ್ಯಾಂಡ್ ಆಗಿದೆ.

publive-image
ಫ್ಲೋರಿಡಾದ ಸಮುದ್ರದಲ್ಲಿ ಕಾದಿದ್ದ ನೌಕಾಪಡೆಯಿಂದ ಸುನೀತಾ ಸೇರಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.

publive-image
ಸುರಕ್ಷಿತವಾಗಿ ಲ್ಯಾಂಡ್​​ ಆದ ಕ್ಯಾಪ್ಸೂಲ್​​ ಮ್ಯೂಸಿಯಂ ಸ್ಪೇಸ್‌ X ಕ್ರ್ಯೂ-9 ಕಾರ್ಯಾಚರಣೆ ಯಶಸ್ವಿಯಾಗಿದೆ.

publive-image
ಇದೀಗ ನಾಲ್ವರು ಗಗನಯಾತ್ರಿಗಳನ್ನು ರಿಹ್ಯಾಬಿಲಿಟೇಷನ್ ಅಂದ್ರೆ ಪುನರ್ವಸತಿ ಕೇಂದ್ರಕ್ಕೆ ನಾಸಾ ಶಿಫ್ಟ್ ಮಾಡಿದೆ.

publive-image
45 ದಿನಗಳ ಕಾಲ ರಿಹ್ಯಾಬ್​ ಸೆಂಟರ್​ನಲ್ಲೇ ನಾಲ್ವರು ಗಗನಯಾತ್ರಿಗಳೂ ಇರಲಿದ್ದಾರೆ. ಇದೇ ವೇಳೆ ನಾಸಾ ಈ ನಾಲ್ವರು ಗಗನಯಾತ್ರಿಗಳಿಗೆ ಗುಡ್‌ನ್ಯೂಸ್ ನೀಡಿದೆ.

ಇದನ್ನೂ ಓದಿ: ಸಾಗರದಲ್ಲಿ ಬಂದಿಳಿದ ಸಾಹಸಿಗೆ ಡಾಲ್ಫಿನ್​ಗಳು ಸ್ವಾಗತಕೋರಿದವು.. ವಿಡಿಯೋ ವೈರಲ್​ 

publive-image
ರಿಹ್ಯಾಬ್ ಸೆಂಟರ್​ನಲ್ಲೇ ನಾಲ್ವರು ಗಗನಯಾತ್ರಿಗಳಿಗೆ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment