/newsfirstlive-kannada/media/post_attachments/wp-content/uploads/2025/03/SUNITA-WILLIAMS-5.jpg)
ಸುನೀತಾ ವಿಲಿಯಮ್ಸ್ ಭೂಮಿಗೆ ಬರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ. ಅವರ ಸುರಕ್ಷಿತ ವಾಪಸ್ಸಾತಿಗೆ ಜಗತ್ತಿನ ಎಲ್ಲೆಡೆ ಪ್ರಾರ್ಥನೆಗಳು ನಡೆಯುತ್ತಿವೆ. ಭಾರತದ ಕಾಲಮಾನದ ಪ್ರಕಾರ 3.27ಕ್ಕೆ ಸುನಿತಾ ಭೂಮಿಗೆ ತಲುಪಲಿದ್ದಾರೆ. ಇನ್ನು ಕೊನೆಯ 15 ನಿಮಿಷಗಳು ತುಂಬಾ ಕ್ರಿಟಿಕಲ್ ಎಂದು ಹೇಳಲಾಗುತ್ತಿದೆ. ಸ್ಪೀಡ್ ಕಂಟ್ರೋಲ್ ಮಾಡುವ ಸವಾಲಿದೆ. ಸ್ಪೀಡ್ನ್ನು ಕಂಟ್ರೋಲ್ ಮಾಡಿ ಗಂಟೆಗೆ 550 ರಿಂದ 600 ಕಿಲೋಮೀಟರ್ ವೇಗಕ್ಕೆ ಇಳಿಸಲಾಗುತ್ತದೆ. ಕೊನೆಯ ಹದಿನೈದು ನಿಮಿಷದಲ್ಲಿ ಪ್ಯಾರಾಚೂಟ್ಗಳು ತೆರೆದು ಕ್ಯಾಪ್ಸೂಲ್ಸ್ ಲ್ಯಾಂಡ್ ಮಾಡಲಾಗುತ್ತದೆ. 4 ನಿಮಿಷ ಬಂದಾಗ 2 ಪ್ಯಾರಾಚೂಟ್ ಹಾಗೂ 2 ನಿಮಿಷಕ್ಕೆ ಇನ್ನೂ 4 ಪ್ಯಾರಾಚೂಟ್ ಓಪನ್ ಆಗುತ್ತವೆ.
ಇದನ್ನೂ ಓದಿ:ವಸುದೈವ ಕುಟುಂಬಕಂ ಎಂಬುದೇ ಅವರ ಮಾರ್ಗದರ್ಶಕ ಮಂತ್ರ.. ಸುನೀತಾ ಸೋದರ ಸಂಬಂಧಿ ಹೇಳಿದ್ದೇನು?
ಅಂತಿಮವಾಗಿ ಗಂಟೆಗೆ ಜಸ್ಟ್ 6 ಕಿಲೋ ಮೀಟರ್ ವೇಗಕ್ಕಿಳಿಸಿ ಟಚ್ಡೌನ್ ಮಾಡಲಾಗುತ್ತದೆ. ಸಮುದ್ರಕ್ಕೆ ಕ್ಯಾಪ್ಸೂಲ್ ಬಿದ್ದ ತಕ್ಷಣ ಸಜ್ಜಾಗಿರೋ ಹಡಗಿನ ಮೂಲಕ ರಕ್ಷಣೆ ಮಾಡಲಾಗುತ್ತದೆ. ಹ್ಯಾಚೆಟ್ ಡೋರ್ಸ್ ಪರಿಶೀಲಿಸಿ ಡ್ಯಾಮೇಜ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ
ಡ್ಯಾಮೇಜ್ ಇಲ್ಲ ಎಂದು ಖಚಿತಗೊಂಡಾಗ ಒಬ್ಬೊಬ್ಬರನ್ನೆ ಹೊರಗೆ ತರಲಗುತ್ತದೆ. ಸಾಕಷ್ಟು ಸುಸ್ತಾಗಿರುವ ಗಗನಯಾತ್ರಿಗಳನ್ನ ಏರ್ ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಶಿಫ್ಟ್ ಮಾಡಲಾಗುತ್ತದೆ
ಸದ್ಯ ಲ್ಯಾಂಡಿಂಗ್ ಸೈಟ್ನಲ್ಲಿ ಹವಾಮಾನ ಶುದ್ಧವಿದೆ ಕೆಲವೇ ಕ್ಷಣಗಳಲ್ಲಿ ಫ್ಲೋರಿಡಾದ ಕರಾವಳಿಯಲ್ಲಿ ಕ್ರ್ಯೂ -9 ಲ್ಯಾಂಡಿಂಗ್ ಆಗಲಿದೆ ಎಂದು ನಾಸಾ ತಿಳಿಸಿದೆ. 285 ದಿನಗಳ ಬಳಿಕ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ವಾಪಸ್ ಬರುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕ್ಯೂಪ್ಸುಲ್ ಟಚ್ಡೌನ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ