9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿರುತ್ತೆ..?

author-image
Ganesh
Updated On
9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿರುತ್ತೆ..?
Advertisment
  • ಕೊನೆಗೂ ಭೂಮಿಗೆ ವಾಪಸ್ ಆಗ್ತಿದ್ದಾರೆ ಸುನಿತಾ ವಿಲಿಯಮ್ಸ್
  • ಗಗನಯಾತ್ರಿಯ ಪಾದ ಮಗುವಿನ ಪಾದದಂತೆ ಅನುಭವ
  • ದೀರ್ಘಕಾಲ ಬಾಹ್ಯಾಕಾಶದಲ್ಲಿದ್ರೆ ಏನೆಲ್ಲಾ ಸಮಸ್ಯೆ ಆಗಲಿದೆ?

ತಾಂತ್ರಿಕ ಸಮಸ್ಯೆಯಿಂದ ಬರೋಬ್ಬರಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ (Butch Willmore) ಕೊನೆಗೂ ಭೂಮಿಗೆ ವಾಪಸ್ ಆಗುವ ದಿನ ಹತ್ತಿರ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರ ಭೂಮಿ ಮೇಲೆ ಕಾಲಿಡೋದು ನಿಕ್ಕಿ. ಬರೋಬ್ಬರಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ಅವರು ಭೂಮಿಗೆ ಒಗ್ಗಿಕೊಳ್ಳೋದು ಸುಲಭ ಇಲ್ಲ. ಅದಕ್ಕೆ ಬೇಕಾದ ಸಿದ್ಧತೆಗಳನ್ನು NASA ಮಾಡಿಕೊಂಡಿದೆ.

ಸುನಿತಾ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರಲು NASA ‘SpaceX ಕ್ರೂ10 ಆಪರೇಷನ್’ ಆರಂಭಿಸಿದೆ. ಈ ರೆಸ್ಕ್ಯೂ ಆಪರೇಷನ್ ಅಡಿಯಲ್ಲಿ NASA ನಾಲ್ವರು ಗಗನಯಾತ್ರಿಗಳನ್ನು (Astronauts) ಕಳುಹಿಸಿದೆ. ಬಾಹ್ಯಾಕಾಶಕ್ಕೆ ತಲುಪಿದ ನಂತರ ನಾಲ್ವರು ಗಗನಯಾನಿಗಳು ಸುನಿತಾ ಹಾಗೂ ವಿಲ್ಮೋರ್ ಭೂಮಿಗೆ ಮರಳುವುದನ್ನು ಖಚಿತಪಡಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ದೊಡ್ಡ ಪ್ರಶ್ನೆ ಒಂದು ಉದ್ಭವ ಆಗಿದೆ. ದೀರ್ಘಕಾಲ ಬಾಹ್ಯಾಕಾಶದಲ್ಲಿ ಉಳಿದು ಭೂಮಿಗೆ ಹಿಂತಿರುಗಿದಾಗ ಏನೆಲ್ಲ ಸಮಸ್ಯೆ ಆಗಬಹುದು ಅನ್ನೋದು.

ಗಗನಯಾತ್ರಿಗಳ ಮೇಲೆ ಖಂಡಿತವಾಗಿ ಒಂದಷ್ಟು ಪರಿಣಾಮ ಬೀರುತ್ತದೆ ಎಂದು ತಜ್ಞರು ನಂಬಿದ್ದಾರೆ. ಯಾಕೆಂದರೆ 9 ತಿಂಗಳ ಕಾಲ ಗುರುತ್ವಾಕರ್ಷಣೆ ಪ್ರಕ್ರಿಯೆಯಿಂದ ದೂರವಿದ್ದಾರೆ. ಭೂಮಿಯಿಂದ ಹೊರ ಬರ್ತಿದ್ದಂತೆ ಎದುರಾಗುವ ದೊಡ್ಡ ಸಮಸ್ಯೆಯೇ, ಅವರ ದೇಹ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳವುದಾಗಿದೆ.

ಇದನ್ನೂ ಓದಿ:ಅಂತೂ ಮನೆಗೆ ವಾಪಸ್ ಬರುವ ದಿನ ಬಂದೇ ಬಿಡ್ತು.. ಬಾಹ್ಯಾಕಾಶದತ್ತ ಹೊರಟ ಫಾಲ್ಕನ್-9 ರಾಕೆಟ್..!

publive-image

ಮಗುವಿನ ಪಾದಗಳಂತೆ ಪಾದ!

NASA ಮಾಜಿ ಗಗನಯಾತ್ರಿ ಲೆರೊ ಚಿಯೊ ( NASA astronaut Leroy Chiao) ಹೇಳುವ ಪ್ರಕಾರ, ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಇರೋದ್ರಿಂದ ಪಾದಗಳು ಮಗುವಿನ ಪಾದಗಳಂತೆ ಬಾಸವಾಗುತ್ತವೆ. ಕಾಲಿನ ದಪ್ಪ ಚರ್ಮವನ್ನು ಕಳೆದುಕೊಳ್ಳುತ್ತಾರೆ. ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆ ಇರೋದ್ರಿಂದ ಭೂಮಿಗೆ ಬರ್ತಿದ್ದಂತೆಯೇ, ತಲೆ ತಲೆತಿರುಗುವಿಕೆ, ವಾಕರಿಕೆ ಸೇರಿದಂತೆ ಮುಂತಾದ ಅಡ್ಡ ಪರಿಣಾಮ ಎದುರಾಗುತ್ತದೆ. ಜ್ವರ ಬಂದಂತೆ ಆಗಲಿದೆ. ದೈಹಿಕವಾಗಿ ಸಾಮಾನ್ಯ ಸ್ಥಿತಿಗೆ ಮರಳಲು ಹಲವು ವಾರಗಳು ಬೇಕು ಎಂದಿದ್ದಾರೆ.

ಗಗನಯಾತ್ರಿ ಟೆರ್ರಿ ವಿರ್ಟ್ಸ್(Astronaut Terry Virts) ಪ್ರಕಾರ.. ಗಗನಯಾತ್ರಿ ಭೂಮಿಗೆ ಬಂದಾಗ ದೀರ್ಘಕಾಲದಿಂದ ಜ್ವರದಿಂದ ಬಳಲುತ್ತಿರುವ ಅನುಭ ಆಗುತ್ತದೆ. ನಾನು ಭೂಮಿಗೆ ವಾಪಸ್ ಬಂದಾಗ ತುಂಬಾ ತಲೆ ಸುತ್ತುತ್ತಿತ್ತು. ಬಾಹ್ಯಾಕಾಶದಂತೆ ತೇಲಾಡಿದ ಅನುಭವ ಆಗುತ್ತಿತ್ತು ಎಂದಿದ್ದಾರೆ.

ಯಾಕೆ ಹೀಗೆ ಆಗುತ್ತದೆ..?

ಸೂಕ್ಷ್ಮ ಗುರುತ್ವಾಕರ್ಷಣೆ ಹೊಂದಿರುವ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ನಡೆಯುವುದಿಲ್ಲ. ಬದಲಾಗಿ ತೇಲುತ್ತಾರೆ. ನೌಕೆಯಲ್ಲಿ ಕೈ ಸಹಾಯದಿಂದ ಹಿಂದೆ, ಮುಂದೆ ಚಲಿಸಬೇಕಾಗುತ್ತದೆ. ಇಲ್ಲದಿದ್ರೆ ಹಾರಾಡಬೇಕಾಗುತ್ತದೆ. ಬಾಹ್ಯಾಕಾಶದಲ್ಲಿ ನಿಲ್ಲುವುದರಿಂದ, ನಡೆಯುವುದರಿಂದ ಪಾದಗಳ ಮೇಲೆ ಒತ್ತಡ ಬೀಳಲ್ಲ. ಇದರಿಂದ ಪಾದದ ಹಿಮ್ಮಡಿಯ ಮೇಲಿನ ದಪ್ಪ ಚರ್ಮ, ಸಡಿಲಗೊಳ್ಳುತ್ತದೆ.

ಇತ್ತ ಭೂಮಿಗೆ ಬರ್ತಿದ್ದಂತೆಯೇ ಗುರುತ್ವಾಕರ್ಷಣೆ ಬಲ ಸಿಗಲಿದೆ. ಈ ಅವಧಿಯಲ್ಲಿ ಅವರ ಪಾದಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ತಿಂಗಳುಗಟ್ಟಲೇ ಮೃದುವಾದ ಬೂಟುಗಳನ್ನು ಧರಿಸಿದ ನಂತರ ಏಕಾಏಕಿ ಬರಿಗಾಲಲ್ಲಿ ನಡೆಯುವ ಅನುಭವ ಆಗಲಿದೆ. ಇದರಿಂದ ಅಸ್ವಸ್ಥತೆ ಹೆಚ್ಚಾಗುತ್ತದೆ. ದೇಹದ ಚಟುವಟಿಕೆಗಳಿಗೆ ಸಮತೋಲನ ಸಿಗಲ್ಲ.

ಇದನ್ನೂ ಓದಿ: Sunita Williams ಮಾರ್ಚ್​ 19 ರಂದು ಬಾಹ್ಯಾಕಾಶದಿಂದ ನಿರ್ಗಮನ; ಭೂಮಿಗೆ ಬರೋದು ಯಾವಾಗ?

ಅದಕ್ಕೆ NASA ಏನು ಮಾಡುತ್ತದೆ..?

ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡಲಿದೆ.

  • ನೆಲದ ಮೇಲೆ ನಿಧಾನವಾಗಿ ನಡೆಯಲು ಸಹಾಯ
  •  ಮೊದಲು ಮೃದುವಾದ ಮೇಲ್ಮೈ ಜಾಗದಲ್ಲಿ ನಡೆಸುವುದು
  •  ಕಾಲುಗಳನ್ನು ಬಲಪಡಿಸಲು ವ್ಯಾಯಾಮ ಮಾಡಿಸುವುದು
  •  ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ ನೀಡುವುದು
  •  ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು
  •  ಪುನರ್ವಸತಿ ಹಲವಾರು ವಾರಗಳವರೆಗೆ ನಡೆಯುವುದು
  •  ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ

publive-image

8 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ವಾಸ!

ಸುನಿತಾ ವಿಲಿಯಮ್ಸ್​ಗೂ ಮೊದಲು ರಷ್ಯಾದ ಓರ್ವ ಗಗನಯಾತ್ರಿ ಬರೋಬ್ಬರಿ 8 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದರು. ಕಳೆದ ವರ್ಷ ಅಕ್ಟೋಬರ್ 25 ರಂದು ಭೂಮಿಗೆ ವಾಪಸ್ ಆಗಿದ್ದಾರೆ. ಮೂವರು NASA ಗಗನಯಾತ್ರಿಗಳು ಮತ್ತು ಒಬ್ಬ ರಷ್ಯಾದ ಗಗನಯಾತ್ರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ತಿಂಗಳುಗಳ ಕಾಲ ಕಳೆದು ಹಿಂತಿರುಗಿದರು. ಹೊತ್ತೊಯ್ದಿದ್ದ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಹಿಂತಿರುಗಿ ಮೆಕ್ಸಿಕೋ ಕೊಲ್ಲಿಗೆ ಇಳಿದಿತ್ತು. ತಕ್ಷಣ ಮೂವರನ್ನೂ ಫ್ಲೋರಿಡಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೂವರಲ್ಲಿ ಒಬ್ಬರ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿತ್ತು. ವೈದ್ಯಕೀಯ ಗೌಪ್ಯತೆಯನ್ನು ಉಲ್ಲೇಖಿಸಿ, NASA ಗಗನಯಾತ್ರಿ ಹೆಸರನ್ನು ಬಹಿರಂಗ ಮಾಡಿಲ್ಲ.

ಇದನ್ನೂ ಓದಿ:ವಿದ್ಯಾವಾಚಸ್ಪತಿ, ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ನಿಧನ.. ಗಣ್ಯರಿಂದ ಸಂತಾಪ

ಸದ್ಯ ಸಮಧಾನದ ವಿಚಾರ ಅಂದ್ರೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ವಾಪಸ್ ಆಗ್ತಿರೋದು. ಎಲಾನ್ ಮಸ್ಕ್ ಅವರ ಸ್ಪೇಸ್​ ಎಕ್ಸ್​ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಂಡಿರುವ NASA ಇವತ್ತು ಬೆಳಗ್ಗೆ, ಫಾಲ್ಕನ್-9 ರಾಕೆಟ್ ಮೂಲಕ Crew-10 mission ಮಷಿನ್​​ ಅನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಈ ನೌಕೆಯು ಇಂದು ಬಾಹ್ಯಾಕಾಶ ನಿಲ್ದಾಣ ತಲುಪಿದ ನಂತರ ಡಾಕಿಂಗ್ ಪ್ರಕ್ರಿಯೆ ನಡೆಯಲಿದೆ.

ಅಂದರೆ ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದ ನೌಕೆಯಿಂದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್, Crew-10 missionಗೆ ಶಿಫ್ಟ್ ಆಗಲಿದ್ದಾರೆ. ಇದೆಲ್ಲ ಪ್ರಕ್ರಿಯೆಗಳು ಮುಗಿಯಲು ಸಮಯ ಹಿಡಿಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್​ 19 ರಂದು ಬಾಹ್ಯಾಕಾಶದಿಂದ ಭೂಮಿಯತ್ತ ಹೊರಡಲಿದ್ದಾರೆ. ಸುನಿತಾ ವಿಲಿಯಮ್ಸ್​ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಬಂದಿಳಿಯಲಿ ಅನ್ನೋದು ಎಲ್ಲರ ಆಶಯ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment