ಭಾರತದಲ್ಲಿ ಮಗಳು ಮನೆಗೆ ಬರುತ್ತಿರೋ ಸಂಭ್ರಮ.. ಸುನಿತಾ ಪೂರ್ವಜರ ಗ್ರಾಮದಲ್ಲಿ ಹೇಗಿದೆ ಖುಷಿ..?

author-image
Ganesh
Updated On
ಭಾರತದಲ್ಲಿ ಮಗಳು ಮನೆಗೆ ಬರುತ್ತಿರೋ ಸಂಭ್ರಮ.. ಸುನಿತಾ ಪೂರ್ವಜರ ಗ್ರಾಮದಲ್ಲಿ ಹೇಗಿದೆ ಖುಷಿ..?
Advertisment
  • ಬರೋಬ್ಬರಿ 9 ತಿಂಗಳ ಬಳಿಕ ಸುನಿತಾ ವಾಪಸ್ ಬರ್ತಿದ್ದಾರೆ
  • ಸುನಿತಾ ಪೂರ್ವಜರ ಊರಿನ ಜನ ಏನು ಹೇಳ್ತಿದ್ದಾರೆ..?
  • ಮೂಲಃ ಊರು ನೋಡಲು ಸುನಿತಾ 2 ಬಾರಿ ಬಂದಿದ್ದರು

NASA ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಆಗುತ್ತಿರೋದಕ್ಕೆ ಭಾರತದಲ್ಲಿ ಸಂಭ್ರಮ ಜೋರಾಗಿದೆ. ಕಾರಣ, ಸುನಿತಾ ವಿಲಿಯಮ್ಸ್ ಮೂಲತಃ ಭಾರತದವರು ಎಂಬ ಎಮೋಷನ್. ಹೀಗಾಗಿ ಅವರ ಪೂರ್ವಜರ ಮೂಲಸ್ಥಾನ ಗುಜರಾತ್​ನ ಪುಟ್ಟ ಹಳ್ಳಿಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಮೆಹಸಾನ ಜಿಲ್ಲೆಯ ಜುಲಸಾನಾ ಗ್ರಾಮದಲ್ಲಿ ಸಂಭ್ರಮ ಜೋರಾಗಿದೆ.

ಅಂದ್ಹಾಗೆ ಸುನಿತಾ ವಿಲಿಯಮ್ಸ್ ಹುಟ್ಟಿದ್ದು ಸೆಫ್ಟೆಂಬರ್ 19,1965ರಲ್ಲಿ. ಸುನಿತಾ ವಿಲಿಯಮ್ಸ್ ಪೂರ್ಣ ಹೆಸರು ಸುನಿತಾ ಲಿನ್ ವಿಲಿಯಮ್ಸ್. ಅಮೆರಿಕದ ಓಹಿಯೋದ ಯೂಕ್ಲಿಡ್ ನಗರದಲ್ಲಿ ಜನಿಸಿದರು. ಸುನಿತಾ ವಿಲಿಯಮ್ಸ್ ಕುಟುಂಬದ ಮೂಲ ಗುಜರಾತ್. ಸುನಿತಾ ವಿಲಿಯಮ್ಸ್ ತಂದೆಯ ಹೆಸರು ದೀಪಕ್ ಪಾಂಡ್ಯ, ಇವರು ನರರೋಗಶಾಸ್ತ್ರಜ್ಞರಾಗಿದ್ದರು. ಸುನಿತಾರ ತಂದೆ ದೀಪಕ್‌ ಪಾಂಡ್ಯ ಮೂಲತಃ ಗುಜರಾತ್​ನ‌ ಜುಲಾಸನ್ ಜಿಲ್ಲೆಯವರು. ತಾಯಿ ಹೆಸರು ಬೋನಿ ಪಾಂಡ್ಯ.

ಇದನ್ನೂ ಓದಿ: ಸುನೀತಾ ವಿಲಿಯಮ್ಸ್​ ಬಾಹ್ಯಾಕಾಶದಿಂದ ವಾಪಸ್ಸಾಗಲು ತಡವಾಗಿದ್ದೇಕೆ? ಏನಿದು ಹೀಲಿಯಂ ಸೋರಿಕೆ?

publive-image

ಗುಜರಾತ್​ನ ಜುಲಸಾನಾ ಗ್ರಾಮದ ಜನರಿಗೆ ಸುನಿತಾ ವಿಲಿಯಮ್ಸ್ ಅಂದರೆ ಹೆಮ್ಮೆ. ಇನ್ನು ಸುನಿತಾ ವಿಲಿಯಮ್ಸ್ ಕೂಡ ತಮ್ಮ ಪೂರ್ವಜರ ಊರನ್ನು ಮರೆತಿಲ್ಲ. ಜುಲಸಾನಾ ಗ್ರಾಮದ ಜೊತೆ ಅವಿನಾಭಾವ ಸಂಬಂಧ ಇಟ್ಕೊಂಡಿದ್ದಾರೆ. ಈಗಾಗಲೇ 2 ಬಾರಿ ಸುನಿತಾ ಭೇಟಿ ಕೊಟ್ಟು ಹೋಗಿದ್ದಾರೆ.

ಮನೆ ಮಗಳು ಬಾಹ್ಯಾಕಾಶದಿಂದ ಭೂಮಿಗೆ ವಾಪಸ್‌ ಬರುವ ಸಡಗರ ಗ್ರಾಮದ ಜನರದ್ದು. ಭೂಮಿಗೆ ಸುರಕ್ಷಿತವಾಗಿ ವಾಪಸ್ ಬಂದ ಕೆಲವು ದಿನಗಳ ನಂತರ ಮೂರನೇ ಬಾರಿಗೆ ಗ್ರಾಮಕ್ಕೆ ಆಹ್ವಾನಿಸಲು ನಿರ್ಧಾರ ಮಾಡಿದ್ದಾರೆ. ಗ್ರಾಮದ ಮಗಳ ಸಾಧನೆ ದೊಡ್ಡದು, ಆಕೆಯ ಬಗ್ಗೆ ಯೋಚಿಸುತ್ತಿದ್ದೇವೆ. ಸುನಿತಾ ಸುರಕ್ಷಿತವಾಗಿ ವಾಪಸ್ ಬರಲೆಂದು ಪ್ರಾರ್ಥಿಸುತ್ತಿದ್ದೇವೆ. ಭೂಮಿಗೆ ವಾಪಸ್ ಬಂದ ಬಳಿಕ ಅವರು ನಮ್ಮ ಗ್ರಾಮಕ್ಕೆ ಬರಬೇಕು ಅನ್ನೋದು ನಮ್ಮ ಆಸೆ ಎಂದು ಮುಖ್ಯ ಶಿಕ್ಷಕ ವಿಶಾಲ್ ಪಟೇಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಗವದ್ಗೀತೆ, ಗಣೇಶನ ಮೂರ್ತಿ.. ಬಾಹ್ಯಾಕಾಶಕ್ಕೆ ಹೋಗುವಾಗ ಸುನೀತಾ ಏನೆಲ್ಲಾ ತೆಗೆದುಕೊಂಡು ಹೋಗಿದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment