/newsfirstlive-kannada/media/post_attachments/wp-content/uploads/2024/12/SUNITA.jpg)
NASA ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದಲೇ (ISS) ಕ್ರಿಸ್‌ಮಸ್ ಸಂಭ್ರಮವನ್ನು ಪಸರಿಸಿದ್ದಾರೆ. ತಮ್ಮ ಜೊತೆ ಬಾಹ್ಯಾಕಾಶದಲ್ಲಿರುವ ಸಿಬ್ಬಂದಿಯೊಂದಿಗೆ ಕ್ರಿಸ್‌ಮಸ್ ಆಚರಿಸಲು ತಯಾರಿಸಿ ನಡೆಸ್ತಿದ್ದಾರೆ.
ಸ್ಪೇಸ್ಎಕ್ಸ್ನ Dragon capsuleನಲ್ಲಿರುವ ಸುನಿತಾ ವಿಲಿಯಮ್ಸ್.. ಮರುಬಳಕೆಯ ವಸ್ತುಗಳನ್ನು ಇಟ್ಟುಕೊಂಡು ಕ್ರಿಸ್‌ಮಸ್ ಸಂಭ್ರಮಕ್ಕೆ ತಯಾರಿ ನಡೆಸಿದ್ದಾರೆ. ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರೂ, ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ಸುನಿತಾ ವಿಲಿಯಮ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಜಕಾರಣಿಯಲ್ಲ, ಉದ್ಯಮಿಯೂ ಅಲ್ಲ, ಸಾಮಾನ್ಯ ಕೃಷಿಕ.. ಚಿನ್ನ, ಬೆಳ್ಳಿ, ಹಣ ದಾನ ಮಾಡುವ ಮಹಾವೀರ ಪಡನಾಡ
ಈ ಬಗ್ಗೆ ಮಾತನಾಡಿರುವ ಸುನಿತಾ ವಿಲಿಯಮ್ಸ್.. ನಾವು ಕ್ರಿಸ್‌ಮಸ್ ರಜಾದಿನಗಳಿಗೆ ತಯಾರಾಗುತ್ತಿದ್ದಂತೆ.. ಬಾಹ್ಯಾಕಾಶ ನಿಲ್ದಾಣದಲ್ಲಿ ಕುಟುಂಬದವರೆಲ್ಲರೊಂದಿಗೆ ಕಳೆಯಲು ಇದು ಉತ್ತಮ ಸಮಯ. ನಾವಿಲ್ಲಿ ಏಳು ಮಂದಿ ಇದ್ದೇವೆ. ನಾವು ಕ್ರಿಸ್‌ಮಸ್ ಹಬ್ಬವನ್ನು ಒಟ್ಟಿಗೆ ಸಂಭ್ರಮಿಸುತ್ತೇವೆ ಎಂದಿದ್ದಾರೆ.
ಇನ್ನು ಭೂಮಿಯಿಂದ ಕಳುಹಿಸಲಾಗಿರುವ ವಿಶೇಷ ಪದಾರ್ಥವನ್ನು ಸವಿಯಲ್ಲಿ ಗಗನಯಾತ್ರಿಗಳು ನಿರ್ಧರಿಸಿದ್ದಾರೆ. ಬಾಹ್ಯಾಕಾಶ ತಲುಪಿರುವ ಪದಾರ್ಥಗಳು ಮನೆಯ ರುಚಿಯನ್ನು ನೀಡುತ್ತವೆ ಎಂದು ವರದಿಯಾಗಿದೆ.
ಸುನಿತಾ ಮಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 8 ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಇನ್ನೂ ಕೂಡ ವಾಪಸ್ ಆಗಲು ಸಾಧ್ಯವಾಗಿಲ್ಲ. 2025 ಮಾರ್ಚ್ನಲ್ಲಿ ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ತಂಡ ಭೂಮಿಗೆ ವಾಪಸ್ ಆಗಲಿದೆ.
ಇದನ್ನೂ ಓದಿ:ಬಂಧನದ ಭೀತಿಯಲ್ಲಿ ವರ್ತೂರ್ ಪ್ರಕಾಶ್; ಕೊನೆಗೂ ವಿಚಾರಣೆಗೆ ಹಾಜರಾದ ಮಾಜಿ ಸಚಿವ
To everyone on Earth, Merry Christmas from our @NASA_Astronauts aboard the International @Space_Station. pic.twitter.com/GoOZjXJYLP
— NASA (@NASA) December 23, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ