ಕೈಬೀಸಿ ಸಂಭ್ರಮಿಸಿದ ಸುನಿತಾ ವಿಲಿಯಮ್ಸ್.. ಭೂಮಿಗೆ ಬರಮಾಡಿಕೊಂಡ ಕ್ಷಣ ಹೇಗಿತ್ತು..? Video

author-image
Ganesh
Updated On
ಕೈಬೀಸಿ ಸಂಭ್ರಮಿಸಿದ ಸುನಿತಾ ವಿಲಿಯಮ್ಸ್.. ಭೂಮಿಗೆ ಬರಮಾಡಿಕೊಂಡ ಕ್ಷಣ ಹೇಗಿತ್ತು..? Video
Advertisment
  • 9 ತಿಂಗಳ ಬಳಿಕ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್
  • ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ
  • ವೈದ್ಯಕೀಯ ಆರೈಕೆ ಕೇಂದ್ರಕ್ಕೆ ಗಗನಯಾತ್ರಿಗಳು ಶಿಫ್ಟ್

ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಬಾಹ್ಯಾಕಾಶದಿಂದ ಭೂಮಿಗೆ ಮರಳಿದ್ದಾರೆ. ನಿನ್ನೆ ಅಂತಾರಾಷ್ಟ್ರಿಯ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಹೊರಟಿದ್ದ ಎಲ್ಲಾ ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲೋರಿಡಾ ಕಡಲಿಗೆ ಬಂದಿಳಿದಿದ್ದಾರೆ.

ನೌಕೆಯು ಬಂದಿಳಿಯುತ್ತಿದ್ದಂತೆಯೇ ನಾಲ್ವರು ಗಗನಯಾತ್ರಿಗಳನ್ನು ರಕ್ಷಣಾ ತಂಡವು ಅದ್ದೂರಿ ಸ್ವಾಗತ ನೀಡಿತು. ನಂತರ ಆರೈಕೆಗಾಗಿ ದೋಣಿಯ ಮೂಲಕ ಸುರಕ್ಷಿತವಾಗಿ ಕೊಂಡೊಯ್ಯಲಾಯಿತು. ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್​ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದರು. ಈ ವೇಳೆ 60 ಗಂಟೆಗಳ ಬಾಹ್ಯಾಕಾಶ ನಡಿಗೆಯನ್ನೂ ಮಾಡಿದರು.

ಇದನ್ನೂ ಓದಿ: 9 ತಿಂಗಳ ಬಾಹ್ಯಾಕಾಶ ವನವಾಸ ಅಂತ್ಯ.. ಹೇಗಿತ್ತು ISS to EARTH ನ ಆ 17 ಗಂಟೆಗಳ ಪ್ರಯಾಣ!

ಬರಮಾಡಿಕೊಂಡ ಕ್ಷಣ ಹೇಗಿತ್ತು..?

  • ಕೊನೆಯ 15 ನಿಮಿಷದಲ್ಲಿ ಪ್ಯಾರಾಚೂಟ್‌ಗಳು ತೆರೆದು ಕ್ಯಾಪ್ಸೂಲ್ಸ್​ ಸ್ಪ್ಲ್ಯಾಶ್ ಡೌನ್
  •  4 ನಿಮಿಷಕ್ಕೆ ಬಂದಾಗ 2 ಪ್ಯಾರಾಚೂಟ್.. 2 ನಿಮಿಷಕ್ಕೆ ಇನ್ನೂ 4 ಪ್ಯಾರಾಚೂಟ್ ಓಪನ್ ಆದವು
  •  ಅಂತಿಮವಾಗಿ ಗಂಟೆಗೆ ಜಸ್ಟ್ 6 ಕಿಲೋ ಮೀಟರ್​ ವೇಗಕ್ಕಿಳಿಸಿ ಟಚ್‌ ಡೌನ್ ಮಾಡಲಾಯಿತು
  •  ಕ್ಯಾಪ್ಸೂಲ್ಸ್ ಲ್ಯಾಂಡ್ ಆಗ್ತಿದ್ದಂತೆಯೇ ಲಾಕ್ ಓಪನ್ ಮಾಡಿಲಾಯಿತು. ಆಗ ನಾಲ್ವರು ಕೈಬೀಸಿದರು
  •  ಮೊದಲ ಗಗನಯಾತ್ರಿಯನ್ನು ಕ್ಯಾಪ್ಸುಲ್‌ನಿಂದ ಹೊರಹಾಕಲಾಯಿತು. ಎಲ್ಲಾ ಗಗನಯಾತ್ರಿಗಳನ್ನು ಒಬ್ಬೊಬ್ಬರಾಗಿ ಸ್ಥಳಾಂತರಿಸಲಾಯಿತು.
  •  ಮೊದಲಿಗೆ ಅಲೆಕ್ಸಾಂಡರ್ ಮತ್ತು ನಿಕ್ ಹೇಗ್ ಅವರು ಹೊರಬಂದರು
  •  ಮೂರನೇ ಸರದಿಯಲ್ಲಿ ಸುನಿತಾ ವಿಲಿಯಮ್ಸ್ ಕ್ಯಾಪ್ಸೂಲ್​ನಿಂದ ಹೊರಬಂದರು
  •  ಸುನಿತಾ ವಿಲಿಯಮ್ಸ್ ನಂತರ, ಬುಚ್ ವಿಲ್ಮೋರ್ ಅವರನ್ನು ಸಹ ಕ್ಯಾಪ್ಸುಲ್‌ನಿಂದ ಹೊರಬಂದರು
  •  ನಾಲ್ವರು ಗಗನಯಾತ್ರಿಗಳುನ್ನು ಸ್ಟ್ರೆಚರ್‌ಗಳ ಮೇಲೆ ಸಾಗಿಸಲಾಯಿತು
  •  ಈ ವೇಳೆ ನಾಲ್ವರು ಖುಷಿಯಿಂದ ಕೈಬೀಸುತ್ತ ವೈದ್ಯಕೀಯ ಆರೈಕಾ ಕೇಂದ್ರಕ್ಕೆ ತೆರಳಿದರು

ಇದನ್ನೂ ಓದಿ: ಜೂನ್​ 5,2024 ರಿಂದ ಮಾರ್ಚ್​ 19,2025ರವರೆಗೆ.. ಹೇಗಿತ್ತು 286 ದಿನಗಳ ಬಾಹ್ಯಾಕಾಶದಲ್ಲಿ ಸುನೀತಾ ಕಳೆದ ದಿನಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment