Advertisment

BREAKING ಭೂಮಿಗೆ ಬಂದ ಸುನೀತಾ ವಿಲಿಯಮ್ಸ್.. ಸಪ್ತ ಸವಾಲುಗಳನ್ನು ದಾಟಿದ ನಾಸಾ

author-image
Gopal Kulkarni
Updated On
BREAKING ಭೂಮಿಗೆ ಬಂದ ಸುನೀತಾ ವಿಲಿಯಮ್ಸ್.. ಸಪ್ತ ಸವಾಲುಗಳನ್ನು ದಾಟಿದ ನಾಸಾ
Advertisment
  • 9 ತಿಂಗಳ ಬಾಹ್ಯಾಕಾಶದ ವನವಾಸ ಕೊನೆಗೂ ಅಂತ್ಯ
  • ಭೂಮಿಗೆ ಬಂದು ತಲುಪಿದ ಸುನೀತಾ ವಿಲಿಯಮ್ಸ್
  • ಸಪ್ತ ಸವಾಲುಗಳನ್ನು ಸರಳವಾಗಿ ಗೆದ್ದು ಬೀಗಿದ ನಾಸಾ

9 ತಿಂಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವನವಾಸ ಕೊನೆಗೂ ಅಂತ್ಯವಾಗಿದೆ. ವಿಶ್ವದ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ. ಕೊನೆಗೂ ಸುನೀತಾ ವಿಲಿಯಮ್ಸ್​ ಹಾಗೂ ಬಿಲ್ ವಿಲ್ಮೋರ್​ ಸುರಕ್ಷಿತವಾಗಿ ಫ್ಲೋರಿಡಾದ ಕರಾವಳಿಗೆ ಬಂದು ತಲುಪಿದ್ದಾರೆ. ನಾಸಾ ತನ್ನ ಸಪ್ತ ಸವಾಲುಗಳನ್ನು ಅಂದುಕೊಂಡಂತೆ ಎದುರಿಸಿ ಗೆದ್ದಿದೆ.

Advertisment

ಇದನ್ನೂ ಓದಿ:ವಸುದೈವ ಕುಟುಂಬಕಂ ಎಂಬುದೇ ಅವರ ಮಾರ್ಗದರ್ಶಕ ಮಂತ್ರ.. ಸುನೀತಾ ಸೋದರ ಸಂಬಂಧಿ ಹೇಳಿದ್ದೇನು?

ಗಲ್ಫ್​ ಆಫ್​ ಮೆಕ್ಸಿಕೋ ಸಮುದ್ರ- ಅಂಟ್ಲಾಟಿಕ್ ಸಮುದ್ರದ ನಡುವೆ ಡ್ರ್ಯಾಗನ್ ಕ್ಯಾಪ್ಸುಲ್ ಟಚ್​ಡೌನ್ ಮಾಡುವ ಸವಾಲು ನಾಸಾದ ಎದುರಿಗಿತ್ತು. ಅದರಂತೆ ಈಗ ಕ್ಯಾಪ್ಸುಲ್ ಟಚ್​ಡೌನ್ ಆಗಿದೆ. ನಿಗದಿತ ಜಾಗದಲ್ಲಿಯೇ ಆಗಿದ್ದು ಇನ್ನೊಂದು ಸಾಧನೆ. ಟಚ್​ಡೌನ್ ಆದ ಸ್ಥಳದಲ್ಲಿಯೇ ಗಂಟೆಗೆ 17 ಕಿಲೋ ಮೀಟರ್​ಗಿಂತ ವೇಗವಾಗಿ ಬೀಸುವ ಗಾಳಿ ಇರಬಾರದಿತ್ತು. ಹವಾಮಾನ ವಿಜ್ಞಾನಿಗಳಿಗೆ ಸಹಕಾರ ನೀಡಿದೆ. ಇನ್ನು ಗುಡುಗು ಮಿಂಚು ಕೂಡ ಇರಲಾರದ ಸ್ಥಿತಿಯೂ ಇದ್ದ ಕಾರಣ ಟಚ್​ಡೌನ್ ಸರಳವಾಗಿದೆ. ಮೆಕ್ಸಿಕೋ ಸಮುದ್ರದಲ್ಲಿ 7 ಡಿಗ್ರಿಗಿಂತ ಹೆಚ್ಚಿನ ಪ್ರಮಾಣದ ಅಲೆಗಳು ಕೂಡ ಇರಲಿಲ್ಲ. ಸ್ಪೆಸ್ ಎಕ್ಸ್​ ಬಾಹ್ಯಾಕಾಶ ನೌಕೆ ಟಚ್​ಡೌನ್​ಗೆ ಸ್ಪಷ್ಟವಾದ ವೇಳೆಯ ಅವಕಾಶವಿತ್ತು. ಲ್ಯಾಂಡಿಂಗ್​ಗೆ ಸರಿಯಾದ ತಾಪಮಾನವೂ ಕೂಡ ಇತ್ತು. ಲ್ಯಾಂಡಿಂಗ್​ಗೆ ಇದ್ದ ಸಪ್ತ ಸವಾಲುಗಳನ್ನು ಮೀರಿ ಸೇಫಾಗಿ ಈಗ ಉಭಯ ಗಗನಯಾತ್ರಿಗಳು ಭೂಮಿಯನ್ನು ತಲುಪಿದ್ದಾರೆ.

ಹೇಗಿರಲಿದೆ ಮುಂದಿನ ಕಾರ್ಯಾಚರಣೆ? 

ಇನ್ನು ಸಮುದ್ರಕ್ಕೆ ಕ್ಯಾಪ್ಸೂಲ್ ಬದ್ದ ತಕ್ಷಣ ಮುಂದಿನ ಕಾರ್ಯಾಚರಣೆ ಶುರುವಾಯಿತು. 4 ಲೇವಲ್ ಬ್ಯಾಕಪ್ ಮೂಲಕ ಕಾರ್ಯಚರಣೆ ಆರಂಭಗೊಳ್ಳುತ್ತದೆ. ಟಚ್​ಡೌನ್​ ವೇಳೆ ಒಟ್ಟು 2 ಶಿಪ್​ಗಳು ಸಮುದ್ರದ ಸನಿಯ ರೆಡಿಯಿಡಲಾಗಿರುತ್ತದೆ. ಹಡಗಿನ ಕಮ್ಯೂನಿಕೇಷನ್ ವ್ಯವಸ್ಥೆ ಮತ್ತು ರೆಡಾರ್ ಸಿಸ್ಟಮ್​ನ್ನು ಪ್ರಮುಖ ಪಾತ್ರವಹಿಸುತ್ತವೆ. ಸಮುದ್ರಕ್ಕೆ ಕ್ಯಾಪ್ಸೂಲ್  ಬಿದ್ದ ತಕ್ಷಣ ಮುಂದಿನ ಹಂತದ ಕಾರ್ಯಾಚರಣೆ ಶುರುವಾಗುತ್ತದೆ. ಟಚ್​ಡೌನ್ ವೇಳೆಗೆ ಒಟ್ಟು 2 ಶಿಪ್​ಗಳು ಸಮುದ್ರದ ಸನಿಹ ರೆಡಿ ಇರಬೇಕು. ಹಡಗು ಮಾತ್ರವಲ್ಲದೇ ಹೆಲಿಕಾಪ್ಟರ್ಸ್‌ ಕೂಡ ಸಮುದ್ರದ ದಡದಲ್ಲಿ ಸಜ್ಜಾಗಿರುತ್ತೆ. ಸಮುದ್ರಕ್ಕೆ ಕ್ಯಾಪ್ಸೂಲ್ ಬಿದ್ದ ಬಳಿಕ ಸಜ್ಜಾಗಿರೋ ಹಡಗಿನ ಮೂಲಕ ರಕ್ಷಣೆ. ಒಬ್ಬೊಬ್ಬರನ್ನೇ ಹೊರಗೆ ತಂದು ಗಗನಯಾತ್ರಿಗಳ ಆರೋಗ್ಯ ಸ್ಥಿತಿ ಪರಿಶೀಲನೆ ಮಾಡಿ.ಆರೋಗ್ಯ ಸ್ಥಿತಿ ಗಂಭೀರವಾಗಿದ್ರೆ ಏರ್ ಌಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment