Advertisment

Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

author-image
Ganesh
Updated On
Good News.. ಸುನಿತಾ ವಿಲಿಯಮ್ಸ್​ ಬಗ್ಗೆ ಬಿಗ್​ ಅಪ್​ಡೇಟ್ ಕೊಟ್ಟ NASA
Advertisment
  • ಸುನಿತಾ ವಿಲಿಯಮ್ಸ್​ಗೆ ತಾಂತ್ರಿಕ ಸಮಸ್ಯೆ ಮಾತ್ರವಲ್ಲ
  • ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಇಬ್ಬರು ಗಗನಯಾನಿಗಳು
  • ಬಾಹ್ಯಾಕಾಶ ಕೇಂದ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಏನೆಲ್ಲಾ ಆಗುತ್ತೆ?

ಬೆಂಗಳೂರು: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಅವರನ್ನು ಭೂಮಿಗೆ ವಾಪಸ್ ಕರ್ಕೊಂಡು ಬರಲು NASA ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್​ ಡೇಂಜರ್​ ಝೋನ್​​ನಲ್ಲಿದ್ದು, ಮುಂದಿನ 14 ದಿನದೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಿದೆ. ಅದರ ಜೊತೆಗೆ ಇಬ್ಬರು ಗಗನಯಾನಿಗಳು ಆರೋಗ್ಯಕ್ಕೆ ಸಂಬಂಧಿಸಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Advertisment

ಹೇಗಿದೆ ಸುನಿತಾ ವಿಲಿಯಮ್ಸ್ ಕಂಡೀಷನ್..?
ಇಂಟರ್​​ ನ್ಯಾಷನಲ್ ಸ್ಪೇಸ್ ಸೆಂಟರ್​ನಲ್ಲಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್​, ಸುರಕ್ಷಿತವಾಗಿ ವಾಪಸ್​ ಬರುತ್ತಾರೆ. ಭೂಮಿಗೆ ಬಂದ ಮೇಲೂ ಅವರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಯಿಂದ ಬಳಲಬಹುದು. ಯಾಕೆಂದರೆ ಅವರು ಈಗಾಗಲೇ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎಂದು ಭಾರತ ಮೂಲದ ನಾಸಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:IND vs SL: ಪ್ರತಿಷ್ಠೆಯ ಪ್ರಶ್ನೆ.. ಕೋಚ್ ಗಂಭೀರ್ ಇವತ್ತು ಈ ಆಟಗಾರರಿಗೆ ಕೊಕ್ ಕೊಡಲಿದ್ದಾರೆ..

publive-image

ಬಾಹ್ಯಾಕಾಶದಲ್ಲಿ ಸುನಿತಾ!
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.

Advertisment

ಆರೋಗ್ಯದ ಸಮಸ್ಯೆ
ಭೂಮಿಯಿಂದ 150 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿರುವ ಸೂರ್ಯನ ಬೆಳಕಿನ ಕಿರಣಗಳು ಇಲ್ಲಿಗೆ ಬರಬೇಕು ಅಂದರೆ 9 ರಿಂದ 10 ನಿಮಿಷ ಬೇಕು. ಆ ಸೂರ್ಯನ ಕಿರಣಗಳು ಒಟ್ಟು 4 ಲೇಯರ್​ ದಾಟಿ ಬರಬೇಕು. ನಾಲ್ಕು ಲೇಯರ್ ದಾಟಿ ಬಂದರೆ ಮಾತ್ರ ಆ ಕಿರಣ ಉಪಯುಕ್ತ, ಇಲ್ಲದಿದ್ರೆ ಮಾರಕ. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸೂರ್ಯನ ತಾಪ ಹೆಚ್ಚಿದೆ. ಮೈಕ್ರೋ ಗ್ರ್ಯಾವಿಟಿಯಿದ್ದು, ಎಲ್ಲಾ ತರಹದ ರೆಡಿಯೇಷನ್ ಇರುತ್ತದೆ. ಕ್ಯಾನ್ಸರ್ ಅಂಶವನ್ನ ನಾಶ ಮಾಡಲು ಈ ರೆಡಿಯೇಷನ್ ಬಳಕೆ ಮಾಡಲಾಗುತ್ತದೆ. ಇಂತಹ ರೆಡಿಯೇಷನ್ ನಡುವೆ ಗಗನಯಾತ್ರಿಗಳು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

publive-image

ಪ್ರೋಟಿನ್ ಟ್ಯಾಬ್ಲೆಟ್ಸ್ ಸೇರಿದಂತೆ ಕೆಲವೊಂದು ಹೈ-ಎನರ್ಜಿ ನಿರತಂತವಾಗಿ ತೆಗೆದುಕೊಳ್ಳುತ್ತಿದ್ದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಭೀರುವ ಭೀತಿ ಇದೆ. ಬಾಹ್ಯಾಕಾಶ ಕೇಂದ್ರದಲ್ಲಿ ಅವಧಿಗಿಂತ ಹೆಚ್ಚುಟೈಂ ಇದ್ದರೆ ಅಲ್ಲಿನ ವಾತಾವರಣದಿಂದ ಕಣ್ಣುಗಳಿಗೆ ತೊಂದರೆ ಆಗಲಿದೆ. ಮೆದುಳಿನ ದ್ರವದ ಸಮಸ್ಯೆ ಉಂಟಾಗಿ ಯೋಚನಾ ಸಾಮರ್ಥ್ಯಕ್ಕೂ ತೊಂದರೆ ಆಗಲಿದೆ. ಇನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೆಕ್ರೋ ಗ್ರ್ಯಾವಿಟಿಯಲ್ಲಿ ಗಗನಯಾತ್ರಿಗಳು ತೇಲುತ್ತಿರುತ್ತಾರೆ. ತೇಲಿಕೊಂಡೇ ಇರಬೇಕಾಗಿರುವ ಹಿನ್ನೆಲೆಯಲ್ಲಿ ಬ್ಯಾಲೆನ್ಸಿಂಗ್ ಸಮಸ್ಯೆ ಆಗಿದೆ. ಇದರಿಂದ ಮೂಳೆಗಳ ಸಮಸ್ಯೆ ಕಾಡಲಿದೆ. ಇವರು 60ಕ್ಕೂ ಅಧಿಕ ದಿನಗಳಿಂದ ತೇಲಿಕೊಂಡು ಇದ್ದಾರೆ, ಆರೋಗ್ಯದ ಮೇಲೆ ಸಮಸ್ಯೆ ಆಗಲಿದೆ. ದೇಹದ ಪ್ರತಿಯೊಂದು ಅಂಗಾಗಳಲ್ಲೂ ಕೂಡ ಸಮಸ್ಯೆ ಕಾಡಲಿದ್ದು, ಉಸಿರು ಬಿಗಿಹಿಡಿದು ಗಗನಯಾತ್ರಿಗಳು ಹೋರಾಟ ಮಾಡ್ತಿದ್ದಾರೆ.

Advertisment

ಇದನ್ನೂ ಓದಿ:ಡೇಂಜರ್​ ಝೋನ್​​ನಲ್ಲಿ ಸುನಿತಾ ವಿಲಿಯಮ್ಸ್​; NASA ಒಂದು ದಿನ ಲೇಟ್​ ಮಾಡಿದ್ರೂ ಅವರ ಪ್ರಾಣಕ್ಕೆ ಕಂಟಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment