Advertisment

ಬಾಹ್ಯಾಕಾಶದಿಂದಲೇ ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ವಿಶೇಷ ಸಂದೇಶ ಕಳುಹಿಸಿದ ಸುನೀತಾ ವಿಲಿಯಮ್ಸ್: ಏನದು?

author-image
Gopal Kulkarni
Updated On
ಬಾಹ್ಯಾಕಾಶದಿಂದಲೇ ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ವಿಶೇಷ ಸಂದೇಶ ಕಳುಹಿಸಿದ ಸುನೀತಾ ವಿಲಿಯಮ್ಸ್: ಏನದು?
Advertisment
  • ‘ನಮ್ಮ ಸಮುದಾಯದೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಸಂತಸ ತಂದಿದೆ‘
  • ಜೋ ಬೈಡನ್, ಕಮಲಾ ಹ್ಯಾರಿಸ್​ಗೆ ಧನ್ಯವಾದ ತಿಳಿಸಿದ ಸುನೀತಾ ವಿಲಿಯಮ್ಸ್
  • ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಿಡಿಯೋ ಸಂದೇಶ ರವಾನೆ

ಕಳೆದ ಐದು ತಿಂಗಳಿಂದ ಬಾಹ್ಯಾಕಾಶದಲ್ಲಿಯೇ ಉಳಿದುಕೊಂಡಿರುವ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಅಲ್ಲಿಂದಲೇ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಸುನೀತಾ ವಿಲಿಯಮ್ಸ್​ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ವಿಡಿಯೋ ಸಂದೇಶ ಕಳುಹಿಸಿರುವ ಭಾರತೀಯ ಮೂಲಕ ಸುನೀತಾ ವಿಲಿಯಮ್ಸ್, ಈ ವರ್ಷ ನಾನು ಭೂಮಿಯಿಂದ 260 ಮೈಲಿ ದೂರದಿಂದ ಮೊದಲ ಬಾರಿ ದೀಪಾವಳಿಯನ್ನು ನೋಡುತ್ತಿದ್ದೇನೆ. ನನ್ನ ತಂದೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಡು ನಿಟ್ಟಿನಲ್ಲಿ ನಮಗೆ ದೀಪಾವಳಿಯ ಮಹತ್ವ ಹೇಳಿದ್ದು ಈಗ ನೆನಪಾಗುತ್ತಿದೆ ಎಂದು ಸುನೀತಾ ವಿಲಿಯಮ್ಸ್ ವಿಡಿಯೋದಲ್ಲಿ ಹೇಳಿದ್ದಾರೆ.

Advertisment

ಇದನ್ನೂ ಓದಿ:ಅರಬ್ ಅಮೆರಿಕನ್ ಮತಗಳ ಮೇಲೆ ಕಣ್ಣು; ಮಿಚಿಗನ್​ನಲ್ಲಿ ಹ್ಯಾರಿಸ್, ಟ್ರಂಪ್ ಭರ್ಜರಿ ಕ್ಯಾಂಪೇನ್

ಇದರ ಜೊತೆಗೆ ಐಎಸ್​ಎಸ್​ನಿಂದಲೇ ದೀಪಾವಳಿ ಶುಭಾಶಯದ ಸಂದೇಶ ಹೇಳಿರುವ ಸುನೀತಾ ವಿಲಿಯಮ್ಸ್, ಇಂದು ಯಾರೆಲ್ಲಾ ದೀಪಾವಳಿಯನ್ನು ಆಚರಿಸುತ್ತಿದ್ದಾರೋ ಅವರಿಗೆ ನಾನು ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಶ್ವೇತಭವನ ಸೇರಿದಂತೆ ಇಡೀ ವಿಶ್ವಕ್ಕೆ ನಾನು ಈ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

Advertisment

ದೀಪಾವಳಿ ಎಂಬುದು ಸಂತಸದಿಂದ, ಒಳ್ಳೆಯ ಮನಸ್ಸಿನಿಂದ ಆಚರಿಸುವ ಹಬ್ಬ. ಈ ಒಂದು ಹಬ್ಬ ಭರವಸೆ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವ ಸಂದೇಶ ನೀಡುತ್ತದೆ. ಈ ಬಾರಿ ನಮ್ಮ ಹಿಂದೂ ಸಮುದಾಯದೊಂದಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿರುವ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ನಾನು ತುಂಬಾ ಧನ್ಯವಾದಗಳನ್ನು ಹಾಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment