ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್​; ಗಗನಯಾತ್ರಿಗೆ ಆಗಿದ್ದೇನು?

author-image
Ganesh
Updated On
ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!
Advertisment
  • ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್
  • ಸುನಿತಾ ವಿಲಿಯಮ್ಸ್ ಜೊತೆ ಬುಚ್ ವಿಲ್ಮೋರ್ ಕೂಡ ಸಂಕಷ್ಟದಲ್ಲಿದ್ದಾರೆ
  • ಭೂಮಿಗೆ ವಾಪಸ್ ಕರೆ ತರುವ ಪ್ಲಾನ್ ದೀರ್ಘ ಕಾಲದವರೆಗೆ ಮುಂದೂಡಿಕೆ

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್​ ಬಾಹ್ಯಾಕಾಶದಲ್ಲಿ ಸಿಲುಕಿ 2 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. 8 ದಿನದ ಬಾಹ್ಯಾಕಾಶ ಪ್ರವಾಸಕ್ಕೆ ಹೋಗಿದ್ದ ಇವರನ್ನ ವಾಪಸ್ ಭೂಮಿಗೆ ಕರೆದುಕೊಂಡು ಬರೋದು ದೊಡ್ಡ ಸವಾಲಿನ ಕೆಲಸವಾಗಿದೆ.

ಈ ಬಗ್ಗೆ NASA ಸತತ ಪ್ರಯತ್ನ ಮಾಡುತ್ತಿದ್ದರೂ, ಸುನಿತಾ ವಿಲಿಯಮ್ಸ್ ಭೂಮಿಗೆ ಮರಳೋದು ತುಂಬಾ ದಿನಗಳು ಹಿಡಿಯಲಿವೆ. ಇದರ ನಡುವೆ ಸುನಿತಾ ವಿಲಿಯಮ್ಸ್ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ವರದಿಗಳ ಪ್ರಕಾರ ಸುನಿತಾ ವಿಲಿಯಮ್ಸ್ ಅವರ ಕಣ್ಣುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕಣ್ಣುಗಳ ಗ್ರಹಿಕೆ ಸರಿಯಾಗಿ ಆಗುತ್ತಿಲ್ಲ ಎಂಬ ಸುದ್ದಿ ಬಂದಿದೆ.

ಇದನ್ನೂ ಓದಿ:IPL 2025ಕ್ಕೂ ಮೊದಲೇ ಪಂಜಾಬ್​​​ ಕಿಂಗ್ಸ್​ನಲ್ಲಿ ದೊಡ್ಡ ವಿವಾದ; ಕೋರ್ಟ್ ಮೆಟ್ಟಿಲೇರಿದ ಪ್ರೀತಿ ಜಿಂಟಾ..!

publive-image

58 ವರ್ಷದ ಸುನಿತಾ ವಿಲಿಯಮ್ಸ್ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ತೋರಿಸುತ್ತದೆ. ಮೈಕ್ರೋಗ್ರಾವಿಟಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಇದು ಸಂಭವಿಸುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ವಿಕಿರಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಎದುರಿಸುತ್ತಾರೆ. ಅವರ ದೇಹದ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪರಿಣಾಮ ಇದೆಲ್ಲ ಆಗುತ್ತಿದೆ. ಜೊತೆಗ ಒಂಟಿತನದಿಂದಾಗಿ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಾಸಾ ವಿಜ್ಞಾನಿಗಳು ನಂಬಿದ್ದಾರೆ.

ಬೋಯಿಂಗ್‌ನ ಸ್ಟಾರ್‌ಲೈನರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಇನ್ನೂ ಭೂಮಿಗೆ ಬರಲು ಆಗಿಲ್ಲ. ಹೀಗಾಗಿ NASA ಅವರನ್ನು ವಾಪಸ್ ಕರೆದುಕೊಂಡು ಬರುವ ಪ್ಲಾನ್​ ಅನ್ನು ದೀರ್ಘ ಕಾಲದವರೆಗೆ ಮುಂದೂಡಿದೆ. ಬೋಯಿಂಗ್ ಗಗನಯಾತ್ರಿಗಳನ್ನು ಮರಳಿ ತರಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಂತಹ ಆಯ್ಕೆಗಳನ್ನು ಪರಿಗಣಿಸುತ್ತಿದೆ.

ಇದನ್ನೂ ಓದಿ:ಪಾಂಡ್ಯಗೆ ಇಲ್ಲ ಎಕ್ಸ್​​ಕ್ಯೂಸ್​.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment