/newsfirstlive-kannada/media/post_attachments/wp-content/uploads/2024/11/Sunita-williamas.jpg)
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೆ (Sunita Williams) ಸಂಬಂಧಿಸಿದಂತೆ ಗುಡ್ನ್ಯೂಸ್ ಸಿಕ್ಕಿದೆ. ಈ ತಿಂಗಳ ಅಂತ್ಯದ ವೇಳೆಗೆ ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ( Butch Wilmore) ಭೂಮಿಗೆ ವಾಪಸ್ ಆಗಲಿದ್ದಾರೆ.
ಬಾಹ್ಯಾಕಾಶದಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ವಿಲ್ಮೋರ್, ಸ್ಪೇಸ್ ಎಕ್ಸ್ನ ಕ್ರ್ಯೂ10 ನೌಕೆಯು ಮಾರ್ಚ್ 12 ರಂದು ಭೂಮಿಯಿಂದ ಹೊರಡಲಿದೆ. ಅದಾದ ಒಂದು ಅಥವಾ ಎರಡು ವಾರದಲ್ಲಿ ಆ ನೌಕೆಯು ನಮ್ಮನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆದುಕೊಂಡು ಬರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಬು ಅಜ್ಮಿ ಮತ್ತೊಂದು ವಿವಾದ.. ಆತನನ್ನು ನಮ್ಮಲ್ಲಿಗೆ ಕಳಿಸಿ ಉಪಚಾರ ಮಾಡ್ತೇವೆಂದ ಯೋಗಿ..!
ಬಾಹ್ಯಾಕಾಶದಲ್ಲಿ ಸಿಲುಕಿದವರ ವಾಪಸ್ ಕರೆದುಕೊಂಡು ಬರೋ ವಿಚಾರದಲ್ಲಿ ಹಿಂದಿನ ಬೈಡನ್ ಸರ್ಕಾರ ರಾಜಕೀಯ ಮಾಡಿದೆ. ಹಿಂದಿನ ಬೈಡನ್ ಸರ್ಕಾರ ಅವರು ಬಾಹ್ಯಾಕಾಶದಲ್ಲೇ ಇರುವಂತೆ ನೋಡಿಕೊಂಡಿದೆ ಎಂದು ಟ್ರಂಪ್ ಆರೋಪಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಲ್ಮೋರ್, ನಮ್ಮ ಮರಳುವಿಕೆಯ ಮೇಲೆ ಅಮೆರಿಕ ರಾಜಕೀಯ ಯಾವುದೇ ಪ್ರಭಾರ ಬೀರಿಲ್ಲ. ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ಬದಲಾವಣೆಯಿಂದಾಗಿ ನಮ್ಮ ಮರಳುವಿಕೆ ಕೊಂಚ ದೂರ ಹೋಗಿದೆ ಎಂದಿದ್ದಾರೆ.
8 ದಿನಕ್ಕೆಂದು ಹೋಗಿ 9 ತಿಂಗಳ ವಾಸ
ಕೇವಲ 8 ದಿನಗಳ ಮಿಷನ್ ಭಾಗವಾಗಿ ಜೂನ್ 5 ರಂದು ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ತಾಂತ್ರಿಕ ದೋಷದಿಂದ ಅವರು ಬರೋಬ್ಬರಿ 9 ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇದೀಗ ಅವರನ್ನು ಭೂಮಿಗೆ ಕರೆ ತರುವ ಕಾಲ ಹತ್ತಿರವಾಗಿದೆ.
ಇದನ್ನೂ ಓದಿ: ಗಿನ್ನಿಸ್ ದಾಖಲೆ ಬರೆದ ವಜ್ರದ ಉಂಗುರ; ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್