/newsfirstlive-kannada/media/post_attachments/wp-content/uploads/2025/06/SANJAY_KAPOOR.jpg)
ಮೈದಾನದಲ್ಲಿ ಪೋಲೋ ಆಟ ಆಡುವಾಗ ಆಕಸ್ಮಿಕವಾಗಿ ಬಾಯಲ್ಲಿ ಜೇನುನೊಣ ಹೋಗಿ ಸಂಜಯ್ ಕಪೂರ್ (53) ಅವರು ಲಂಡನ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಜಯ್ ಕಪೂರ್ ಅವರು ಹೃದಯಾಘಾತದಿಂದ ನಿಧನ ಹೊಂದಿದರೂ ಇವರ ಸಾವಿಗೆ ಕಾರಣ ಮಾತ್ರ ಜೇನುನೊಣ ಎಂದು ಹೇಳಲಾಗುತ್ತಿದೆ. ಇದರ ನಡುವೆ ಇವರ ಆಸ್ತಿ ಎಷ್ಟು ಸಾವಿರ ಕೋಟಿ ರೂಪಾಯಿಗಳು ಇದೆ ಗೊತ್ತಾ?.
ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರ ಮಾಜಿ ಗಂಡ ಉದ್ಯಮಿ ಸಂಜಯ್ ಕಪೂರ್ ಅವರ ಅಗಲಿಕೆಗೆ ಇಡೀ ವ್ಯಾಪಾರ ಜಗತ್ತೇ ಆಘಾತ ವ್ಯಕ್ತಪಡಿಸುತ್ತಿದೆ. ಸಂಜಯ್ ಕಪೂರ್ ಮೊದಲು ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗಿದ್ದರು. ನಂತರ ದಿನಗಳಲ್ಲಿ ಇವರನ್ನು ಬಿಟ್ಟು ಮಾಡೆಲ್ ಪ್ರಿಯಾ ಸಚ್‌ದೇವ್ ಎನ್ನುವರ ಜೊತೆ ಮದುವೆಯಾಗಿದ್ದರು. ಸದ್ಯ ಇವರ ಆಸ್ತಿ ಬಾಲಿವುಡ್ನ ಕಪೂರ್ ಕುಟುಂಬಕ್ಕಿಂತ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: NEET Result; ಕರ್ನಾಟಕಕ್ಕೆ ಮೊದಲ ಸ್ಥಾನ.. ತಂದೆ, ತಾಯಿಗೆ ಘನತೆ ತಂದ ನಿಖಿಲ್ ಸೊನ್ನದ
ಭಾರತದ ಮೂಲದವರು ಆದರೂ ಲಂಡನ್ನಲ್ಲಿ ವಾಸವಿದ್ದ ಉದ್ಯಮಿ ಸಂಜಯ್ ಕಪೂರ್ ಅವರ ಒಟ್ಟು ಆಸ್ತಿ ಫೋರ್ಬ್ಸ್ ಪ್ರಕಾರ 1.2 ಬಿಲಿಯನ್ ಡಾಲರ್ ಅಂದರೆ 10,300 ಕೋಟಿ ರೂಪಾಯಿಗಳು ಆಗಿವೆ. 2022 ಮತ್ತು 2024 ಈ ಎರಡು ವರ್ಷಗಳಲ್ಲಿ ಅವರ ಗರಿಷ್ಠ ಸಂಪತ್ತು ಮೌಲ್ಯ 1.6 ಬಿಲಿಯನ್ ಡಾಲರ್ ಆಗಿತ್ತು (₹13,000 ಕೋಟಿ) ಎಂದು ನಿಯತಕಾಲಿಕೆಯ ವರದಿ ಹೇಳುತ್ತದೆ.
ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅಗಾಧ ಸಂಪತ್ತು ಹೊಂದಿದ್ದರು. ಎಷ್ಟು ಎಂದರೆ ಶಾರುಖ್ ಖಾನ್ಗಿಂತ ಹಾಗೂ ಬಾಲಿವುಡ್ನಲ್ಲಿರುವ ಎಲ್ಲ ಕಪೂರ್ ಕುಟುಂಬಕ್ಕಿಂತ ಹೆಚ್ಚಿನ ಸಂಪತ್ತು ಅನ್ನು ಹೊಂದಿದ್ದರು. ಭಾರತದ ಅತ್ಯಂತ ಶ್ರೀಮಂತ ನಟರಾಗಿರುವ ಶಾರುಖ್ ಖಾನ್ ಅವರು 880 ಮಿಲಿಯನ್ ಡಾಲರ್ ಅಂದರೆ 7,700 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಸಂಜಯ್ ಕಪೂರ್ ಮಾಜಿ ಹೆಂಡತಿ ಕರಿಷ್ಮಾ ಕಪೂರ್ 120 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ