ಮನೆಯಿಂದ ಹೊರಬರೋ ಮುನ್ನ ಹುಷಾರ್​​.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?

author-image
Ganesh Nachikethu
Updated On
ಮನೆಯಿಂದ ಹೊರಬರೋ ಮುನ್ನ ಹುಷಾರ್​​.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?
Advertisment
  • ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಕೂರುವುದು ಒಳ್ಳೆಯದಲ್ಲ!
  • ಬಿಸಿಲು, ಬಿಸಿಗಾಳಿ, ಬೆವರಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ
  • ಆರೋಗ್ಯದ ಸಮಸ್ಯೆಗಳನ್ನು ಮೊದಲೇ ತಡೆಯಬಹುದು ಗೊತ್ತಾ..?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು ಬೆಳಗ್ಗೆ 10 ಗಂಟೆ ಆಗುವಷ್ಟರಲ್ಲಿ ಸೂರ್ಯ ನೆತ್ತಿ ಸುಡಲು ತಯಾರಾಗಿರುತ್ತಾನೆ. ಇದರಿಂದ ಜನರು ಮನೆಯಿಂದ ಹೊರ ಬಂದರೆ ಹೈರಾಣಾಗುತ್ತಿದ್ದಾರೆ. ತಾಪಮಾನ ಹೆಚ್ಚಳವಾಗುತ್ತಿದ್ದರಿಂದ ಕ್ಷಣಕ್ಕೊಮ್ಮೆ ಒಂದು ಗ್ಲಾಸ್ ನೀರು ಕುಡಿದರೆ ಸಾಕು ಎನ್ನುವಷ್ಟು ದಾಹವಾಗುತ್ತಿದೆ. ಆದರೆ ಬಿರು ಬಿಸಿಲಿನಿಂದ, ಬಿಸಿಗಾಳಿಯಿಂದ, ಬೆವರಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಸದ್ಯ ಎಲ್ಲ ಕಡೆ ಶಾಲೆಗಳು ರಜೆ ಇರುವುದರಿಂದ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಹೊತ್ತು ಕೊಟ್ಟು ಬಿಸಿಲಿಗೆ ಕಳುಹಿಸಬಾರದು. ಆಗಾಗ ನೀರು ಕುಡಿಯುವಂತೆ ಹಾಗೂ ನೀರಿನಂಶ ಇರುವಂತ ತಿನಿಸುಗಳನ್ನು ನೀಡಬೇಕು. ಇದರಿಂದ ಆಗುವ ಆರೋಗ್ಯದ ಸಮಸ್ಯೆಗಳನ್ನು ಮೊದಲೇ ತಡೆಯಬಹುದಾಗಿದೆ. ಹಾಗೇ ಗರ್ಭಿಣಿಯರು, ಮಹಿಳೆಯರು, ವೃದ್ಧರು ಬಹುತೇಕ ನೆರಳಿನ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಸಂಜೆ ಮೇಲೆ ಹೊರ ಬಂದರೆ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ.

publive-image

ಈ ಬಿರುಬಿಸಿಲಿಗೆ ಹೊರ ಬರುವುದರಿಂದ ತಲೆನೋವು, ತಲೆ ತಿರುಗುವಿಕೆ, ಸ್ನಾಯು ಸೆಳೆತ, ತೀವೃ ಹೃದಯ ಬಡಿತ, ವಾಕರಿಕೆ ಅಥವಾ ವಾಂತಿ, ರಕ್ತದೊತ್ತಡ ಕುಸಿಯುವುದು, ಪ್ರಜ್ಞೆ ತಪ್ಪುವಿಕೆ, ಮೂರ್ಛೆ ರೋಗದಂತಹವು ಬರುತ್ತಾವೆ. ಇವುಗಳಿಂದ ನಾವು ಆರೋಗ್ಯವಾಗಿರಲು ಬಿಸಿಲಿನಿಂದ ಅಂತರ ಕಾಯ್ದುಕೊಳ್ಳಬೇಕಾಗಿದೆ.

ಸನ್​ಸ್ಟೋಕ್​ನಿಂದ ರಕ್ಷಣೆ ಮಾಡಿಕೊಳ್ಳುವುದೇಗೆ?

ಜನರು ಇದಕ್ಕೆಲ್ಲ ಸಿಂಪಲ್ ಆಗಿ ಥಿಂಕ್ ಮಾಡಬೇಕು. ಮನೆಯಲ್ಲೇ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿಯಬೇಕು. ಬೇಸಿಗೆಯಲ್ಲಿ ಹೇಳಿ ಮಾಡಿಸಿದಂತ ಪಾನೀಯ ಎಂದರೆ ಅದು ಮಜ್ಜಿಗೆ. ಇದನ್ನು ಅನ್ನದಲ್ಲೋ ಅಥವಾ ಹಾಗೇ ಕುಡಿಯಿರಿ. ಲಸ್ಸಿ, ಹಣ್ಣಿನ ಜ್ಯೂಸ್, ಓಆರ್​ಎಸ್ ಹಾಗೂ ನೀರಿನ ಅಂಶ ಹೆಚ್ಚಾಗಿರುವ ತಾಜಾ ಹಣ್ಣುಗಳನ್ನು ಅಧಿಕವಾಗಿ ತಿನ್ನಬೇಕು. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಸಮತೋಲನದಲ್ಲಿ ಇರುತ್ತದೆ.

ಬಿಸಿಲಿನ ಶಾಖದಲ್ಲೇ ಕೆಲಸ ಮಾಡುವಾಗ ಇಷ್ಟು ನಿಮಿಷಗಳಿಗೆ ಒಮ್ಮೆ ಎನ್ನುವಂತೆ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಹೊರಗೆ ಹೋಗುವಾಗ ತಿಳಿ ಬಣ್ಣದ ಸಡಿಲವಾಗಿರುವ ಉಡುಪುಗಳನ್ನು ಧರಿಸಬೇಕು. ಅಲ್ಲದೇ ತಲೆಗೆ ಹ್ಯಾಟ್, ಕೊಡೆ, ಸನ್​ಗ್ಲಾಸ್, ಟವೆಲ್​ಗಳನ್ನು ಹೋಗುವಾಗ ತೆಗೆದುಕೊಂಡು ಹೋಗಿ. ಇದರಿಂದ ಬಿಸಿಲಿನ ಶಾಖದಿಂದ ಕಾಪಾಡಿಕೊಳ್ಳಬಹುದು.

publive-image

ಬಿಸಿಲಿನಿಂದ ಏನಾದ್ರೂ ಆದರೆ ಪ್ರಥಮ ಚಿಕಿತ್ಸೆ ಏನು..?

ವ್ಯಕ್ತಿಯನ್ನು ತಣ್ಣಗಿರುವ ಸ್ಥಳದಲ್ಲಿ ಮಲಗಿಸಿ, ನೀರಿನಿಂದ ನೆನೆಸಿದಂತ ಬಟ್ಟೆಯಿಂದ ದೇಹ ಒರೆಸಬೇಕು. ಕುಡಿಯಲು ಆಗಾಗ ನೀರನ್ನು ಕೊಡುತ್ತಲೇ ಇರಬೇಕು. ವ್ಯಕ್ತಿಯಲ್ಲಿ ಚೇತರಿಕೆ ಕಂಡ ನಂತರ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ಅವರಿಗೆ ನೀಡಬೇಕು. ಮದ್ಯಪಾನ, ಚಹಾ, ಕಾಫಿ, ಕಾರ್ಬೋನೆಟೆ​ಡ್ ಪಾನೀಯಗಳನ್ನು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಮ್ಮ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

publive-image​ ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment