newsfirstkannada.com

WATCH: ಚಂದ್ರಯಾನ-3 ಸಕ್ಸಸ್ ಲೈವ್​ ನೋಡಿದ ನಟಿ ಸನ್ನಿ ಲಿಯೋನ್​ ಹೇಳಿದ್ದೇನು?

Share :

Published August 24, 2023 at 4:36pm

    ಚಂದ್ರಯಾನ 3 ಲೈವ್​ ನೋಡಿ ಖುಷಿಪಟ್ಟ ನಟಿ ಸನ್ನಿ ಲಿಯೋನ್

    ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಸನ್ನಿ ರಿಯಾಕ್ಷನ್

    ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆದ ಕ್ಷಣ

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಚಂದ್ರಯಾನ 3 ಸೇಫ್ ಲ್ಯಾಂಡಿಂಗ್‌ ವಿಡಿಯೋವನ್ನ ನೋಡಿ ಖುಷಿ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ವಿಕ್ರಮ್‌ ಲ್ಯಾಂಡಿಂಗ್‌ ಮಾಡುವ ಲೈವ್ ವಿಡಿಯೋವನ್ನು ಸನ್ನಿ ಲಿಯೋನ್‌ ವೀಕ್ಷಿಸಿದ್ದಾರೆ. ಇದೇ ವೇಳೆ, ವ್ಹಾ ಇದು ಅದ್ಭುತ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗಿರೋ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆಗಳು ಅಂತಾ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.

ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ಕಡೆಗೆ ಕಳುಹಿಸಲಾಗಿದ್ದ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮೂಲಕ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಭಾರತೀಯ ಬಾಹ್ಯಾಕಾಶದ ಪ್ರತಿಷ್ಠೆ ಇಡೀ ವಿಶ್ವದಲ್ಲಿ ಮತ್ತಷ್ಟು ಪ್ರಜ್ವಲಿಸುತ್ತಿದೆ. ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಿದ್ದಾರೆ.

ಚಂದ್ರಯಾನ-3 ಯಶಸ್ಸನ್ನು ಇಡೀ ಭಾರತವೇ ಸಂಭ್ರಮಿಸಿದೆ. ಈ ವೇಳೆ ನಟಿ ಸನ್ನಿ ಲಿಯೋನ್ ಕೂಡ ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್​ ಅನ್ನು​ ಲೈವ್​ನಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಜೊತೆಗೆ ಬಾಹ್ಯಾಕಾಶ ಸಂಸ್ಥೆಗೆ ಅಭಿನಂದನೆ ತಿಳಿಸಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸನ್ನಿ ಲಿಯೋನ್​ ಚಂದ್ರಯಾನವನ್ನು ನೋಡುತ್ತಿರೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಎಂಥಹ ಅದ್ಭುತ ಕ್ಷಣ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಚಂದ್ರಯಾನ-3 ಸಕ್ಸಸ್ ಲೈವ್​ ನೋಡಿದ ನಟಿ ಸನ್ನಿ ಲಿಯೋನ್​ ಹೇಳಿದ್ದೇನು?

https://newsfirstlive.com/wp-content/uploads/2023/08/sanni.jpg

Load More