/newsfirstlive-kannada/media/post_attachments/wp-content/uploads/2024/11/Sunny-Leone-2.jpg)
ಇತ್ತೀಚೆಗೆ ಬಾಲಿವುಡ್​​ ನಟ ಸಂಜಯ್​ ದತ್​ ಪತ್ನಿ ಮಾನ್ಯತಾರನ್ನು ಮರು ಮದುವೆಯಾಗಿ ಸುದ್ದಿಯಾಗಿದ್ದರು. ಇದೀಗ ಮಾದಕ ನಟಿ ಸನ್ನಿ ಲಿಯೋನ್​ರವರು ಡೇನಿಯಲ್​​ ವೆಬರ್​ ಅವರನ್ನು ಮರು ಮದುವೆಯಾಗಿದ್ದಾರೆ. ಆ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.
ಇತ್ತೀಚೆಗೆ ಸನ್ನಿ ಲಿಯೋನ್​ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಮಾಲ್ಡೀವ್ಸ್​ನ ಕಿನಾರೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ. ಈ ವೇಳೆ ವಿವಾಹ ವಾರ್ಷಿಕೋತ್ಸವ ಜೊತೆಗೆ ಮತ್ತೆ ಮರು ಮದುವೆಯಾಗುವ ಮೂಲಕ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Sunny-Leone-4.jpg)
ಇದನ್ನೂ ಓದಿ: ಸ್ಪಿನ್​ ಮುಂದೆ ಟೀಂ ಇಂಡಿಯಾ ಪರದಾಟ.. ನಡೆಯೋಲ್ಲ ಘಟಾನುಘಟಿಗಳ ಆಟ.. ಯಾಕೀಗೆ?
ಅಕ್ಟೋಬರ್​ 31ರಂದು ಮಾಲ್ಡೀವ್ಸ್​ನಲ್ಲಿ​ ಸನ್ನಿ ಲಿಯೋನ್​ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಕ್ಕಳ ಮುಂದೆ ತಮ್ಮ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಇದೇ ಖುಷಿಯಲ್ಲಿ ಜೋಡಿ ಫೋಟೋಶೂಟ್​ ಮಾಡಿದ್ದಲ್ಲದೆ, ಪ್ರೀತಿಯ ಪತಿಗೆ ಸನ್ನಿ ಲಿಯೋನ್​ ಮುತ್ತನ್ನಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/11/Sunny-Leone-3.jpg)
ಸನ್ನಿ ಮತ್ತು ಡೇನಿಯಲ್​ ದೀರ್ಘಕಾಲದ ಡೇಟಿಂಗ್​ ಬಳಿಕ ಏಪ್ರಿಲ್​ 9, 2011ರಂದು ವಿವಾಹವಾಗುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ವರ್ಷಗಳ ಬಳಿಕ ಇದೀಗ ಈ ಜೋಡಿ ತಮ್ಮ ನೆನಪನ್ನು ಮೆಲುಕು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us