/newsfirstlive-kannada/media/post_attachments/wp-content/uploads/2024/12/SUNNY-LEONE.jpg)
ಮಹಿಳಾ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಅನೇಕ ರಾಜ್ಯಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ತರುತ್ತಲಿದ್ದಾರೆ. ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆಯಂತೆಯೇ ಛತ್ತೀಸ್​ಗಢದಲ್ಲಿ ಮಹಾತಾರಿ ವಂದನ ಯೋಜನಾ ಅಂತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿದೆ. ಈ ಯೋಜನೆಯಡಿ ಮದುವೆಯಾದ ಪ್ರತಿ ಹೆಣ್ಣು ಮಕ್ಕಳಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈ ಒಂದು ಯೋಜನೆ ಲಾಭವನ್ನು ನಟಿ ಸನ್ನಿ ಲಿಯೋನ್ ಕೂಡ ಪಡೆದಿದ್ದಾರೆ ಅನ್ನೋ ಸುದ್ದಿ ದೊಡ್ಡದಾಗಿ ಹಬ್ಬಿದೆ. ಅದನ್ನು ಸರಿಯಾಗಿ ಪತ್ತೆ ಹಚ್ಚಿ ನೋಡಿದಾಗ ಮಹಾಮೋಸವೊಂದು ಬಯಲಾಗಿದೆ.
ತೀವ್ರ ತನಿಖೆಯಿಂದ ಹೊರಬಂದ ಸತ್ಯವೆಂದರೆ ವಿರೇಂದ್ರ ಜೋಶಿ ಎನ್ನುವವನು ರಾಜ್ಯ ಸರ್ಕಾರದ ಈ ಯೋಜನೆಯನ್ನು ತನ್ನ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಬಸ್ತಾರ್​ ಜಿಲ್ಲೆಯ ತಲೂರು ಗ್ರಾಮದವನಾದ ವಿರೇಂದ್ರ ಜೋಶಿ ಆನ್​ಲೈನ್​ನಲ್ಲಿ ಸನ್ನಿ ಲಿಯೋನ್ ಹೆಸರಲ್ಲಿ ಒಂದು ಬ್ಯಾಂಕ್ ಖಾತೆಯನ್ನು ತೆರೆದಿದ್ದಾನೆ. ಅದರಿಂದ ರಾಜ್ಯ ಸರ್ಕಾರದ ಯೋಜನೆ ಲಾಭವನ್ನು ಪಡೆದಿದ್ದಾನೆ. ಸನ್ನಿ ಲಿಯೋನ್ ಹೆಸರಿನಲ್ಲಿಯೇ ಯೋಜನೆ ಆರಂಭವಾದಾಗಿನಿಂದ ಪ್ರತಿ ತಿಂಗಳು 1 ಸಾವಿರ ರೂಪಾಯಿ ಜೇಬಿಗೆ ಇಳಿಸಿದ್ದಾನೆ. ಅನರ್ಹ ಫಲಾನುಭವಿಗಳ ಆಡಿಟ್ ನಡೆಸುವ ವೇಳೆ ಈ ಒಂದು ಮಹಾಮೋಸ ಬಯಲಿಗೆ ಬಂದಿದೆ.
ಸದ್ಯ ಬಸ್ತಾರ್​ ಜಿಲ್ಲೆಯ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್​ ತನಿಖೆಗೆ ಆಗ್ರಹಿಸಿದ್ದು ಕೂಡಲೇ ಆ ಬ್ಯಾಂಕ್​ ಅಕೌಂಟ್​ನ್ನು ಸೀಜ್​ ಮಾಡಲು ಹೇಳಿದ್ದಾರೆ.
ಇದನ್ನೂ ಓದಿ:ಪೊಲೀಸರ ದಾಳಿ.. ರಾಜಸ್ಥಾನದಲ್ಲಿ 19 ವಿದೇಶಿ ತಳಿ ನಾಯಿಗಳು ವಶಕ್ಕೆ.. 81 ಜನರ ಬಂಧನ! ಆಗಿದ್ದೇನು?
ಸದ್ಯ ಈ ಒಂದು ವಿಷಯ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಈ ಒಂದು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ. ಛತ್ತೀಸ್​ಗಢದ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಮಹಾತಾರಿ ವಂದನ ಯೋಜನೆಯಲ್ಲಿ ಶೇಕಡಾ 50 ರಷ್ಟು ನಕಲಿ ಫಲಾನುಭವಿಗಳು ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಅರುಣ್ ಸಾವೊ, ಅವರ ಕಾಲದಲ್ಲಿ ಮಹಿಳೆಯರಿಗೆ ಈ ಯೋಜನೆಯ ಲಾಭ ಕೊಡಲು ಆಗಲಿಲ್ಲ ಎಂದು ವಿಪಕ್ಷಗಳು ಹತಾಶೆಗೊಂಡು ಮಾತನಾಡುತ್ತಿವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us